ತಾಲ್ಲೂಕು ಕಚೇರಿ ಮುಂಭಾಗ ಆಹೋರಾತ್ರಿ ಉಪವಾಸ ಸತ್ಯಾಗ್ರಹ

ಹೊನ್ನಾಳಿ:

         ತಾಲೂಕಿನಲ್ಲಿ ಜನ ಸಾಮನ್ಯರಿಗೆ ಹಾಗೂ ಸರ್ಕಾರಿ ಕಟ್ಟಡಗಳಿಗೆ ಮರಳು ಸಿದೆ ಇರುವುದು ಹಾಗೂ ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳಿಗೆ ಸೇರ್ಪಡೆ ಮಾಡದರಿವುದನ್ನು ಖಂಡಿಸಿ ತಾಲೂಕು ಬಿಜೆಪಿ ಘಟಕ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರರು ಹಾಗೂ ರೈತರು ತಾಲೂಕು ಕಚೇರಿ ಮುಂಭಾಗ ಆಹೋರಾತ್ರಿ ಉಪವಾಸ ಸತ್ಯಾಗ್ರಹ ಮಂಗಳವಾರ ಬೆಳಗ್ಗೆಯಿಂದ ಪ್ರಾರಂಭಿಸಿದ್ದಾರೆ.

         ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ತಾಲೂಕಿನ ಸಾಮನ್ಯ ಜನತೆ ಆಶ್ರಯ ಮನೆ ಹಾಗೂ ಶೌಚಾಲಯ ನಿರ್ಮಾಣಕ್ಕೆ ಮರಳು ಕೇಳಿದರೆ ಜಿಲ್ಲಾಡಳಿತ ಕೊಡುತ್ತಿಲ್ಲ ಆದರೆ ರಾತ್ರಿಉ ವೇಳೆ ಅನಧಿಕೃತವಾಗಿ ಬೆಂಗಳೂರು ಹಾಗೂ ಪಕ್ಕಸ ಕೇರಳ ರಾಜ್ಯಗಳಿಗೆ ನಮ್ಮ ಮರಳು ಹೇರಳವಾಗಿ ಸಾಗಾಣಿಕೆಯಾಗುತ್ತಿದ್ದರೂ ಕೂಡ ಜಿಲ್ಲಾಡಳಿತ ಯಾವುದೇ ಕ್ರಮ ಕ್|ಐಗೊಳುತ್ತಿಲ್ಲ ಎಂದು ಜಿಲ್ಲಾಡಳಿತದ ವಿರುದ್ಧ ಹರಿಹಾಯ್ದರು.

          ನಾನು ಮಾಜಿ ಶಾಸಕನಾಗಿದ್ದಾಗ ಸುಮಾರು 5 ವರ್ಷಗಳ ಕಾಲ ತಾಲೂಕಿನ ಜನತೆಗೆ ಮರಳು ಕೊಡಿಸುವ ವಿಚಾರದಲ್ಲಿ ಪಾದಯಾತ್ರೆ, ಎ.ಸಿ. ಕಚೇರಿ ಮುತ್ತಿಗೆ, ಹಾಗೂ ಇತರೆ ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದೆವು. ಆದರೂ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಲಿಲ್ಲ ಎಂದರು.

          ನಾನು ಶಾಸಕನಾದ ನಂತರ ನಾನು ಜನತೆಗೆ ಭರವಸೆ ನೀಡಿದಂತೆ ಜನರಿಗೆ ಮುಕ್ತವಾಗಿ ಮರಳು ಸಿಗುವ ದೃಷ್ಠಿಯಿಂದ ಸುಮಾರು ಐದಾರು ಬಾರಿ ಅಧಿಕಾರಿಗಳ ಸಭೆ ನಡೆಸಿ ಜನಸಾಮಾನ್ಯರಿಗೆ ಹಾಗೂ ಸರ್ಕಾರಿ ಕಟ್ಟಡಗಳಿಗೆ ಮರಳು ಸಿಗುವ ನಿಟ್ಟಿನಲ್ಲಿ ಮರಳು ನೀತಿಯನ್ನು ಸರಳೀಕರಣ ಮಾಡಿ ಎಂದು ಸೂಚಿಸಿದ್ದೆ. ಆದರೂ ಕೂಡಾ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಈ ಬಗ್ಗೆ ಗಂಭೀರವಾಗಿ ಪ್ರಯತ್ನ ಮಾಡಲಿಲ್ಲ ಎಂದು ದೂರಿದರು.

         ನ, 19 ರಂದು ಶಾಸಕ ಎಂಪಿ.ರೇಣುಕಾಚಾರ್ಯ ಕರೆ ನೀಡಿದ್ದ ಮರಳು ತುಂಬುವ ಕಾರ್ಯಕ್ರಮಕ್ಕೆ ಯಶಸ್ವಿಯಾಗಿ ನಡೆಯಿತು, ಆಗ ನಾನು ಮತ್ತು ನೂರಾರು ಎತ್ತಿನ ಗಾಡಿ ಮಾಲೀಕರು ಸಾವಿರಾರು ರೈತರು ಮರ|ಳು ತುಂಬುವ ಕಾರ್ಯದಲ್ಲಿ ತಲ್ಲಿನರಾಗಿದ್ದರು, ಆಗ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಮೂಕಪ್ರೇಕ್ಷಕರಾಗಿದ್ದರು, ಆಗಲೆಏ ನಮ್ಮ ಮೇಲೆ ಪ್ರಕರ|ಣ ದಾಖಲಿಸಿ ನಮ್ಮನ್ನು ಬಂಧಿಸಬಹುದಿತ್ತು, ಆದರೆ ಇದ್ಯಾವುದನ್ನು ಮಾಡದೆ ಮಾರನೆಯ ದಿನ ಅಮಾಯಕ 33 ರೈತರ ಮೇಲೆ ಪ್ರಕರಣ ದಾಖಲು ಮಾಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

         ತಾಕತ್ಗತಿದ್ದರೆ ನನ್ನ ಮೇಲೆ ನೂರಾರು ಪ್ರಕರಣ ದಾಖಲಿಸಿ, ನಾನು ಹೆದರುವುದಿಲ್ಲ, ಆದರೆ ಅಮಾಯಕ ರೈತರ ಮೇಲೆ ಪ್ರಕರಣ ದಾಖಲು ಮಾಡಿ ಅವರನ್ನು ಬೆದರಿಸುವ ಪ್ರಯತ್ನ ಮಾಡಬೇಡಿ ಎಂದು ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ಸವಾಲ್ ಹಾಕಿದರು.
ಮರಳು ಸಿಗದಿರುವುದಕ್ಕೆ ಕಳೆದ ಬಾರಿ ಅಧಿಕಾರದಲಿದ್ದ ಕಾಂಗ್ರೆಸ್ ಕಾರಣ; ಕಾಂಗ್ರೆಸ್ ಆಡಳಿತದ ಅವೈಜ್ಞಾನಿಕ ನೀತಿಯಿಂದಾಗಿ ಮುಕ್ತವಾಗಿ ಅರ್ಹ ಆಶ್ರಯ, ಹಾಗೂ ಸರ್ಕಾರಿ ಕಟ್ಟಡಗಳಿಗೆ ಮರಳು ಮುಕ್ತವಾಗಿ ಸಿಗುತ್ತಿತ್ತು. ಆದರೆ ಕಾಂಗ್ರೆಸ್ ಸರ್ಕಾರದಲ್ಲಿ ಮರಳು ಸಿಗುತ್ತಿಲ್ಲ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಆರೋಪಿಸಿದರು.

           ಬಿಜೆಪಿ ಸರ್ಕಾರದಲ್ಲಿ ಮರಳು ಜನ ಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಸಿಗುತ್ತಿತ್ತು. ಆದರೆ ಕಾಂಗ್ರೆಸ್ ಸರ್ಕಾರದಲ್ಲಿ ಅವೈಜ್ಞಾನಿಕ ಮರಳು ನೀತಿ ಜಾರಿಗೆ ತಂದಿರುವುದರಿಂದ ಜನ ಸಾಮಾನ್ಯರಿಗೆ ಮರಳು ಮರೀಚಿಕೆಯಾಗಿದೆ ಎಂದು ದೂರಿದರು.

            ಶಾಸಕನಾಗಿರುವ ನನಗೆ ಕಾನೂನಿನ ಬಗೆ ಅರಿವಿದೆ; ಜವಬ್ದಾರಿ ಶಾಸಕನಾಗಿರುವ ನನಗೆ ಕಾನೂನಿನ ಬಗೆ ಅರಿವಿದೆ, ನಾನು ನನ್ನ ಮನೆಗೆ ಮರಳು ಕೇಳುತ್ತಿಲ್ಲ,ಶಾಸಕನಾಗಿ ನನ್ನ ತಾಲೂಕಿನ ಆಶ್ರಯ ಮನೆಗಳ ಅರ್ಹ ಫಲಾನುಭವಿಗಳಿಗೆ ಮರಳು ಅತ್ಯಬಶ್ಯಕ ಇದೆ ಆ ಕಾರಣಕ್ಕಾಗಿ ನಾನು ಮರಳು ಕೊಡಿ ಎಂದು ಕೇಳುತ್ತಿದ್ದೇನೆ ಹೊರತು ನನಗಾಗಿ ಹೋರಾಟ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

         ಜಯಂತಿ ಕಾರ್ಯಕ್ರಮಗಳಿಗೆ ಸೀಮಿತವಾದ ಜಿಲ್ಲಾ ಉಸ್ತುವಾರಿ ಸಚಿವ; ಜಿಲ್ಲೆಯಲ್ಲಿ ನಡೆಯುವ ದಾರ್ಶನಿಕರ ಜಯಂತಿ ಹಾಗೂ ರಾಷ್ಟ್ರೀಯ ಹಬ್ಬಗಳಿಗೆ ಮಾತ್ರ ಜಿಲ್ಲಾ ಉಸ್ತುವಾರಿ ಸಚಿವರು ಬಂದು ಹೋಗುತ್ತಿದ್ದಾರೆ ಹೊರತು ಈ ವರೆಗ ಜಿಲ್ಲೆಯಲ್ಲಿರುವ ಶಾಸಕರು ಹಾಗು ಸಂಸದರ ಜೊತೆ ಜಿಲ್ಲೆಯ ಅಭಿವೃಧ್ದಿ ವಿಚಾರವಾಗಿ ಚರ್ಚಿಸಿಲ್ಲ ಎಂದು ಆರೋಪಿಸಿದರು.ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕುಗಳಲ್ಲಿ ಒಂದೇ ವಾರದಲ್ಲಿ ಸಾಲಮನ್ನಾ ಭಾದೆ ತಾಳಲಾರದೆ ಮೂರು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಇದುವರೆಗೂ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳನ್ನು ಬೇಟಿ ಮಾಡಿ ಸಾಂತ್ವಾನ ಹೇಳಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು ಇಂತಹ ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ಜಿಲ್ಲೆಗೆ ಬೇಕಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

         ವೈಯಕ್ತಿಕ ನಿಂಧನೆಗೆ ಜಿಲ್ಲಾ ಉಸ್ತುವಾರಿ ಸಚಿವರು ತಕ್ಕ ಬೆಲೆ ತೆರಬೇಕಾಗುತ್ತದೆ ಶಾಸಕ ಎಂ.ಪಿ.ಆರ್ ಎಚ್ಚರಿಕೆ; ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ್ ಅವರ ಸಾಮಾಜಿಕ ಜಾಲಾ ತಾಣದಿಂದ ನನ್ನ ಬಗೆ ಅವಹೇಳನಕಾರಿ ಸಂದೇಶ ಹಾಗೂ ಚಿತ್ರಗಳನ್ನು ಪ್ರಕಟಿಸುತ್ತಿದ್ದಾರೆ, ಇದನ್ನು ಉಸ್ತುವಾರಿ ಸಚಿವ ಶ್ರೀನಿವಾಸ್ ನಿಲ್ಲಸಿದ್ದರೆ ಸರಿ ಇಲ್ಲವಾದರೆ ನಿಮ್ಮ ಬಗೆನೂ ನಮ್ಮ ಕಾರ್ಯಕರ್ತರು ಪ್ರಕಟಿಸಲು ತಯಾರಿದ್ದಾರೆ, ಆದರೆ ನಿಮ್ಮ ಮಟ್ಟಕ್ಕೆ ನಾವು ಇಳಿಯುವುದಿಲ್ಲ, ಕೂಡಲೆ ನಿಲ್ಲಿಸಬೇಕು ಇಲ್ಲದಿದ್ದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಸಿದರು.

          ಆಹೋರಾತ್ರಿ ಉಪವಾಸ ಸತ್ಯಾಗ್ರಹಕ್ಕೆ ಬಗ್ಗಲಿಲ್ಲ ಎಂದರೆ ವಿವಿ|ಧ ರೀತಿಯ ಉಗ್ರ ಹೋರಾಟಕ್ಕೆ ತಯಾರಿ; ತಾಲೂಕಿನಲ್ಲಿ ಜನ ಸಾಮನ್ಯರಿಗೆ ಮರಳು ಕೊಡದಿದ್ದರೆ ನಾವು ಮುಂದಿನ ಹೋರಾಟವನ್ನು ಮತ್ತಷ್ಟು ಉಗ್ರವಾಗಿ ಪ್ರಾರಂಬಿಸುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

         ಸುವರ್ಣಸೌಧಕ್ಕೆ ಮುತ್ತಿಗೆ; ತಾಲೂಕಿನ ಜನ ಸಾಮನ್ಯರಿಗೆ ಸಕಾಲಕ್ಕೆ ಮರಳು ಕೊಡದಿದ್ದರೆ ಹಾಗೂ ಇನ್ನೊಂದು ವಾರದಲ್ಲಿ ಅವಳಿ ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸದಿದ್ದರೆ ನ,10 ರಂದು ಸುವರ್ಣಸೌಧದಲ್ಲಿ ನಡೆಯುವ ಅಧಿವೇಶನ ನಡೆಯುವ ಸಮಯದಲ್ಲಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

        ತಹಸೀಲ್ದಾರ್ ಹಾಗೂ ಸ್ಥಾನಿಕ ವ್ಯಧ್ಯಾಧಿಕಾರಿ ಸ್ಥಳಕ್ಕೆ ಭೇಟಿ ಉಪವಾಸ ಕೈ ಬಿಡುವಂತೆ ಮನವಿ; ಬೆಳಗ್ಗಯಿಂದ ಉಪವಾಸ ಕುಳಿತ್ತಿದ್ದ ಸ್ಥಳಕ್ಕೆ ತಹಸೀಲ್ದಾರ್ ತುಷಾರ್ ಬಿ ಹೊಸೂರ ಹಾಗೂ ಸ್ಥಾನಿಕ ವೈದ್ಯಾಧಿಕಾರಿ ಡಾ;ಚಂದ್ರಪ್ಪ ಭೇಟಿ ನೀಡಿ ತಮ್ಮ ಭೇಡಿಕೆಗಳ ಬಗೆ ಜಿಲ್ಲಾಧಿಕಾರಿಗಳಿಗೆ ತಿಳಿಸುತ್ತೇವೆ,ತಮ್ಮ ಆರೋಗ್ಯದ ದೃಷ್ಟಿಯಿಂದ ಉಪವಾಸ ಸತ್ಯಾಗ್ರಹವನ್ನು ಹಿಂತೆಗೆದುಕೊಳ್ಳಿ ಎಂದು ಮನವಿ ಮಾಡಿದ್ದರೂ ಸಹ ಶಾಸಕ ಎಂ.ಪಿ ರೇಣುಕಾಚಾರ್ಯ ಅಧಿಕಾರಿಗಳ ಮನವಿಗೆ ಸ್ಪಂದಿಸಲಿಲ್ಲ,ಕೊನೆಗೆ ಶಾಸಕ ಆರೋಗ್ಯದ ಬಗೆ ನಿಗಾವಹಿಸಿ ಅವರಿಗೆ ಶುಗರ್ ಹಾಗು ಬಿಪಿ ತಪಾಸಣೆ ಮಾಡಿದರು.

           ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಶ್ರೀನಿವಾಸ್,ಜಿ.ಪಂ.ಸದಸ್ಯರಾದ ಸುರೇಂದ್ರನಾಯ್ಕ್,ಉಮಾರಮೇಶ್,ತಾ.ಪಂ. ಅಧ್ಯಕ್ಷೆ ಸುಲೋಚನಮ್ಮಪಾಲಕ್ಷಪ್ಪ,ಪ.ಪಂ.ಸದಸ್ಯರಾದ ಕೆ.ವಿ.ಶ್ರೀಧರ್,ಸವಿತಾ ಮಹೇಶ್ ಹುಡೇದ್,ಸುಮಾಮಂಜುನಾಥ್ ಇಂಚರ,ಅನುಶಂಕರ್ ಚಂದ್ರು,ಪದ್ಮಾಪ್ರಶಾಂತ್,ಸುಮಾ ಸತೀಸ್,ಮುಖಂಡರಾದ ಮಹೇಂದ್ರಗೌಡ,ಕೆ.ವಿ.ಚನ್ನಪ್ಪ.ಎಚ್.ಬಿ.ಮೋಹನ್,ರಘು,ಚಿನ್ನಪ್ಪ ಹಾಗೂ ಮತ್ತಿತ್ತರು ಉಪವಾಸ ಸತ್ಯಾಗ್ರಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link