ಡಿಸಂಬರ್ 5ರಂದು ಕನಕ ಜಯಂತಿ ಆಚರಣೆ…!!!

ಚಿಕ್ಕನಾಯಕನಹಳ್ಳಿ

       ಪಟ್ಟಣದಲ್ಲಿ ಡಿಸಂಬರ್ 5ರ ಬುಧವಾರದಂದು ಕನಕ ಜಯಂತಿಯನ್ನು ಆಚರಿಸಲು ಶಾಸಕ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯತು.

        ಕಳೆದ ಸೋಮವಾರ ನಡೆಯಬೇಕಾಗಿದ್ದ ಕನಕದಾಸರ ಜಯಂತಿ ಸಮಾರಂಭ, ಚಿತ್ರನಟ ಅಂಬರೀಶ್ ಹಾಗೂ ಕೇಂದ್ರ ಸಚಿವ ಜಾಫರ್ ಷರೀಪ್ ನಿಧನದಿಂದ ರಾಜ್ಯ ಸರ್ಕಾರ ಹೊರಡಿಸಿದ್ದ ಶೋಕಾಚರಣೆ ಹಿನ್ನಲೆಯಲ್ಲಿ ಸಮಾರಂಭವನ್ನು ಮುಂದೂಡಲಾಗಿತ್ತು ಹಾಗಾಗಿ ಬುಧವಾರ ತಾಲ್ಲೂಕು ಕಛೇರಿಯಲ್ಲಿ ನಡೆದ ಕನಕದಾಸರ ಜಯಂತಿ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

       ಅಂದು ತಾಲ್ಲೂಕು ಕಛೇರಿಯಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ 10.30ಕ್ಕೆ ಪುರಸಭೆಯ ಮುಂಭಾಗದಿಂದ ವಿವಿಧ ಕಲಾ ತಂಡಗಳ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ಕನ್ನಡ ಸಂಘದ ವೇದಿಕೆಯಲ್ಲಿ ಮಧ್ಯಾಹ್ನ 1ಗಂಟೆಗೆ ಜಯಂತಿ ನಡೆಸಲು ಸಭೆ ತೀರ್ಮಾನಿಸಿತು.

        ಕಾರ್ಯಕ್ರಮದಲ್ಲಿ ತಾ.ಪಂ.ಅಧ್ಯಕ್ಷೆ ಹೊನ್ನಮ್ಮಶೇಷಯ್ಯ ಉದ್ಘಾಟಿಸಲಿದ್ದು ಶಾಸಕ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆ ವಹಿಸುವರು. ತಹಶೀಲ್ದಾರ್ ಸೋಮಪ್ಪಕಡಕೋಳ ಶ್ರೀಕನಕದಾಸರ ಭಾವಚಿತ್ರ ಅನಾವರಣಗೊಳಿಸುವರು.

       ನಿವೃತ್ತ ಮುಖ್ಯೋಪಾಧ್ಯಾಯ ಜಿ.ಕೃಷ್ಣಯ್ಯ ಕನಕದಾಸರ ಕುರಿತು ಉಪನ್ಯಾಸ ನೀಡುವರು. ಕೋಲಾರದ ಶ್ರೀ ದೇವರಾಜ ಅರಸು ಮೆಡಿಕಲ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ಸಿ.ಎಂ.ಗುರುಮೂರ್ತಿ, ಕಲಾವಿದ ಎಸ್.ಡಿ.ದೇವರಾಜುರವರನ್ನು ಸನ್ಮಾನಿಸಲಾಗುವುದು.
ಮಾಜಿ ಶಾಸಕರಾದ ಸಿ.ಬಿ.ಸುರೇಶ್‍ಬಾಬು, ಬಿ.ಲಕ್ಕಪ್ಪ, ಜಿ.ಪಂ.ಸದಸ್ಯರಾದ ಕಲ್ಲೇಶ್, ವೈ.ಸಿ.ಸಿದ್ದರಾಮಯ್ಯ, ಮಂಜುಳ, ಆರ್.ರಾಮಚಂದ್ರಯ್ಯ, ಎಸ್.ಟಿ.ಮಹಲಿಂಗಯ್ಯ, ತಾ.ಪಂ.ಉಪಾಧ್ಯಕ್ಷ ಟಿ.ಜಿ.ತಿಮ್ಮಯ್ಯ, ಕನಕ ಸೇವಾ ಸಂಘದ ಅಧ್ಯಕ್ಷ ವಿಜಯ್‍ಕುಮಾರ್, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಸಿ.ಎಸ್.ರಮೇಶ್ ಉಪಸ್ಥಿತರಿರಲು ಸಭೆ ತೀರ್ಮಾನಿಸಿತು.

       ಪೂರ್ವಭಾವಿ ಸಭೆಯಲ್ಲಿ ತಹಶಿಲ್ದಾರ್ ಸೋಮಪ್ಪ ಕಡಕೋಳ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ನಾರಾಯಣಸ್ವಾಮಿ, ಕನ್ನಡ ಸಂಘದ ಅಧ್ಯಕ್ಷ ಸಿ.ಬಿ.ರೇಣುಕಸ್ವಾಮಿ, ಪುರಸಭಾ ಸದಸ್ಯರಾದ ಸಿ.ಡಿ.ಸುರೇಶ್, ಮಲ್ಲೇಶಯ್ಯ, ಜಯಮ್ಮ, ತಾ.ಪಂ.ಸದಸ್ಯ ಸಿಂಗದಹಳ್ಳಿರಾಜ್‍ಕುಮಾರ್, ಪುರಸಭಾ ಮಾಜಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link