ಹುಳಿಯಾರು:
ಪಟ್ಟಣದ ಗ್ರಾಮದೇವತೆ ಶ್ರೀ ಹುಳಿಯಾರಮ್ಮನವರ ಕೃತಿಕೋತ್ಸವ ಅಪಾರ ಸಂಖ್ಯೆಯ ಭಕ್ತಾಧಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಕಾರ್ತಿಕ ಮಾಸದ ಕೃತಿಕಾ ನಕ್ಷತ್ರದ ದಿನ ಆಚರಿಸಲಾಗುವ ಕೃತಿಕೋತ್ಸವವು ಈ ಬಾರಿ ಲಕ್ಷ್ಮೀ ಸುಬ್ರಮಣ್ಯ ಅವರ ಸೇವಾರ್ಥದಲ್ಲಿ ನಡೆಯಿತು. ಅಮ್ಮನವರಿಗೆ ಅಭಿಷೇಕ, ಅರ್ಚನೆ ನಡೆಸಿ ವಿಶೇಷವಾಗಿ ಅಲಂಕರಿಸಲಾಗಿತ್ತು. ಸಂಜೆ ತುಪ್ಪದ ಕರುಗ ಸುಡುವ ಕಾರ್ಯ ನಡೆಸಲಾಯಿತು. ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ಮಾಡಲಾಯಿತು.
ವಿಪ್ರ ಮಹಿಳೆಯರಿಂದ ಲಲಿತಾಸಹಸ್ರನಾಮ ಪಾರಾಯಣ ಮತ್ತು ಭಜನಾ ಕಾರ್ಯಕ್ರಮ ನಡೆಯಿತು. ಈ ವೇಳೆ ಸೀತಾರಾಮ ಪ್ರತಿಷ್ಠಾನದ ಕಾರ್ಯದರ್ಶಿ ವೆಂಕಟರಾಯ, ಹಿರಿಯ ಪತ್ರ ಬರಹಗಾರ ಲಕ್ಷ್ಮೀನರಸಿಂಹಯ್ಯ, ವಿಪ್ರ ಸಂಘದ ನಿರ್ದೇಶಕ ಶ್ಯಾನುಭೋಗ್ ರಾಜಣ್ಣ ಸೇರಿದಂತೆ ಭಕ್ತಾಧಿಗಳು ಹಾಜರಿದ್ದು ಅಮ್ಮನವರ ಕೃತಿಕೋತ್ಸವವನ್ನು ಕಣ್ತುಂಬಿಕೊಂಡರು.
ಗಾಂಧಿಪೇಟೆಯ ಕನ್ನಿಕಪರಮೇಶ್ವರಿ ದೇವಾಲಯದಲ್ಲಿ ಬಿ.ವಿ.ಶ್ರೀನಿವಾಸ್ ಸೇವಾರ್ಥದಲ್ಲಿ ಕನ್ನಿಕಾಪರಮೇಶ್ವರಿಗೆ ಅಲಂಕಾರ, ಪೂಜಾ ಕಾರ್ಯಗಳನ್ನು ನಡೆದು ಪಾಗು ಸುಡುವುದರ ಮೂಲಕ ಆ ಬೆಳಕಿನಲ್ಲಿನಲ್ಲಿ ಅಮ್ಮನವರ ದರ್ಶನ ಮಾಡಿ ಕೃತಾರ್ಥರಾದರು. ಈ ವೇಳೆ ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಎಲ್.ಆರ್.ಚಂದ್ರಶೇಖರ್ ಸೇರಿದಂತೆ ಸಮುದಾಯದವರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ