ಬೆಂಗಳೂರು
ಚನ್ನಪಟ್ಟಣ ತಾಲೂಕಿನ ಜಲಾಶಯ ಕಣ್ವ ಜಲಾಶಯಕ್ಕೆ ಹಾರಿ ಪಿಯುಸಿ ವಿದ್ಯಾರ್ಥಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.
ಮೃತನನ್ನು ರಾಮನಗರ ತಾಲೂಕಿನ ಆನಮಾನಹಳ್ಳಿ 17 ವರ್ಷದ ಗಗನ್ ಎಂದು ಗುರುತಿಸಲಾಗಿದ್ದು,. ಗಗನ್ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ಓದುತ್ತಿದ್ದನು.
ಬುಧವಾರ ರಾತ್ರಿ ಗಗನ್ ಜಲಾಶಯಕ್ಕೆ ಹಾರಿದ್ದಾನೆ. ಗುರುವಾರ ಬೆಳಗ್ಗೆ ಜಲಾಶಯದ ಬಳಿ ಗಗನ್ ಬೈಕ್ ಹಾಗೂ ಚಪ್ಪಲಿ ನೋಡಿ ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ಸದ್ಯ ಗಗನ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ನೀಡಲಾಗಿದೆ.ಯಾವ ಕಾರಣಕ್ಕೆ ಗಗನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿಲ್ಲ. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








