ಉಪಸ್ಥಾವರಕ್ಕೆ ಬೆಸ್ಕಾಂ ಇ.ಇ. ಭೇಟಿ

ತುರುವೇಕೆರೆ:

        ತಾಲೂಕಿನ ಮಾಯಸಂದ್ರ ಹೋಬಳಿಯ ವಿದ್ಯುತ್ ಸರಬರಾಜು ಸಮಸ್ಯೆ ಹಿನ್ನಲೆಯಲ್ಲಿ ತಿಪಟೂರು ಬೆಸ್ಕಾಂ ಇ.ಇ. ರಾಮಚಂದ್ರಮೂರ್ತಿ ಹಾಗೂ ಕೆಪಿಟಿಸಿಎಲ್ ಇ.ಇ. ಕಾಂತಲಕ್ಷ್ಮೀ ಗುರುವಾರ ಟಿ.ಬಿ.ಕ್ರಾಸ್ ಬಳಿಯಿರುವ ವಿದ್ಯುತ್ ಉಪಸ್ಥಾವರಕ್ಕೆ ಬೇಟಿ ನೀಡಿ ಜನಪ್ರತಿನಿಧಿಗಳ, ರೈತಮುಖಂಡ ಹಾಗೂ ಅಧಿಕಾರಿಗಳ ಸಭೆ ನೆಡೆಸಿದರು.

        ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎನ್.ಆರ್.ಜಯರಾಮ್ ಮಾತನಾಡಿ ಸುಮಾರು ದಿನಗಳಿಂದ ಮಾಯಸಂದ್ರ ಹೋಬಳಿಯ ಶಟ್ಟಗೊಂಡನಹಳ್ಳಿ, ಮಣೆಚಂಡೂರು, ಬೈತರಹೊಸಳ್ಳಿ ಪಂಚಾಯ್ತಿ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿದೆ. ಸರ್ಕಾರ ನಿಗದಿ ಪಡಿಸಿರುವ 6 ಗಂಟೆ ವಿದ್ಯುತ್ ಸಹ ರೈತರಿಗೆ ಲಬಿಸುತ್ತಿಲ್ಲ, ಕೇವಲ ಹಗಲಿನಲ್ಲಿ ಮಾತ್ರ 3 ಗಂಟೆ ವಿದ್ಯುತ್ ಲಬಿಸುತ್ತಿದ್ದು ರಾತ್ರಿಯ ಸಮಯದಲ್ಲಿ 3 ಗಂಟೆ ವಿದ್ಯುತ್ ಲಬಿಸುತ್ತಿಲ್ಲ. ಮಾರ್ಗ ತೊಂದರೆಯಾದಲ್ಲಿ ಮೂರು ದಿನವಾದರೂ ವಿದ್ಯುತ್ ಸಿಗಲ್ಲ. ಅದ್ದರಿಂದ ಈ ಭಾಗದ ರೈತರು ತೋಟಗಳನ್ನು ಉಳಿಸಿಕೊಳ್ಳಲು ಹರ ಸಾಹಸ ಪಡಬೇಕಾದ ಪರಿಸ್ಥಿತಿ ಉಂಟಾಗಿದೆ. ಮುಂದಿನ ಬೇಸಿಗೆಯಲ್ಲಿ ಮತ್ತಷ್ಟು ವಿದ್ಯುತ್ ಸಮಸ್ಯೆ ಎದುರಾಗಲಿದೆ. ಕೂಡಲೇ ಸಮಸ್ಯೆ ಬಗೆ ಹರಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು.

      ತಾಲೂಕು ಪಂಚಾಯ್ತಿ ಸದಸ್ಯರಾದ ಮಹಾಲಿಂಗಯ್ಯ ಮಾತನಾಡಿ ಶಟ್ಟಗೊಂಡನಹಳ್ಳಿಗೆ ಸರಬರಾಜಾಗುವ ವಿದ್ಯುತ್ ಲೈನ್‍ನಿಂದ ತುಂಬಾ ಸಮಸ್ಯೆಯಾಗುತ್ತಿದೆ. ವಿಪರೀತ ಲೋಡ್ ಸಮಸ್ಯೆಯಿಂದ ವಿದ್ಯುತ್ ಸರಿಯಾಗಿ ದೊರಕುತ್ತಿಲ್ಲ. ಜಂಪ್ ಕಟ್ಟಾಗುವುದು, ಸಿಂಗಲ್ ಫೇಸ್ ಆಗುವುದರಿಂದ ಪದೇ ಪದೇ ವಿದ್ಯುತ್ ವ್ಯತ್ಯಯ ಉಂಟಾಗಿ ರೈತರಿಗೆ ಪ್ರತಿ ದಿನ ಕೇವಲ ಎರಡು ಗಂಟೆ ವಿದ್ಯುತ್ ಮಾತ್ರ ಸಿಗುತ್ತಿದೆ. ಆದ್ದರಿಂದ ಈ ಭಾಗದ ರೈತರಿಗೆ ಸಮರ್ಪಕ ವಿದ್ಯುತ್ ಸಿಗುವಂತೆ ಪರ್ಯಾಯ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದರು.

      ತಿಪಟೂರು ಬೆಸ್ಕಾಂ ಇ.ಇ. ರಾಮಚಂದ್ರಮೂರ್ತಿ ಮಾತನಾಡಿ ಮಾಯಸಂದ್ರ ಹೋಬಳಿಯ ಶಟ್ಟಗೊಂಡನಹಳ್ಳಿ, ಮಣೆಚಂಡೂರು, ಬೈತರಹೊಸಳ್ಳಿ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಿಗೆ ಸರಬರಾಜಾಗುವ ಫೀಡರ್ ಓವರ್ ಲೋಡ್‍ನಿಂದ ವಿದ್ಯುತ್ ವ್ಯತ್ಯಯವಾಗುತ್ತಿದೆ. ಬೈತರಹೊಸಳ್ಳಿ, ವಿಠಲಾಪುರ, ಜಿ.ದೊಡ್ಡೇರಿ, ಮಣೆಚಂಡೂರು ಬಳಿ ವೈ ಅಪರೇಷನ್ ಮಾಡುವ ಮೂಲಕ ಶೀಘ್ರದಲ್ಲೇ ವಿದ್ಯುತ್ ಸಮಸ್ಯೆ ನಿವಾರಣೆ ಮಾಡಲಾಗುವುದು. ಶಟ್ಟಗೊಂಡನಹಳ್ಳಿ ಬಳಿ ಸ್ಥಾಪನೆಯಾಗಲಿರುವ ಉಪ ಸ್ಥಾವರಕ್ಕೆ ತಾಂತ್ರಿಕ ಅನುಮೋದನೆ ದೊರೆತಿದ್ದು ಭೂಮಿ ಮುಂಜೂರಾತಿಯಲ್ಲಿದೆ. ಈ ಉಪ ಸ್ಥಾವರ ಪ್ರಾರಂಬಗೊಂಡರೆ ಈ ಭಾಗದಲ್ಲಿ ವಿದ್ಯುತ್ ಸಮಸ್ಯೆ ನಿವಾರಣೆ ಗೊಳ್ಳಲಿದೆ ಎಂದು ಭರವಸೆ ನೀಡಿದರು. 

       ಈ ಸಂಧರ್ಭದಲ್ಲಿ ತಾಲೂಕು ಪಂಚಾಯ್ತಿ ಸದಸ್ಯರಾದ ಬೈರಪ್ಪ, ಮಂಜುನಾಥ್, ರೈತ ಮುಖಂಡ ಚಂದ್ರಶೇಖರ್, ಕೆಪಿಟಿಸಿಎಲ್ ನ ಇಇ ಕಾಂತಲಕ್ಷ್ಮಿ, ಕೆಪಿಟಿಸಿಎಲ್ ಎಇಇ ರಾಮಚಂದ್ರಪ್ಪ, ತುರುವೇಕೆರೆ ಬೆಸ್ಕಾಂ ಎ.ಇ.ಇ. ಮಾರುತಿ, ಮಾಯಸಂದ್ರ ಎಸ್.ಓ. ನಾರಾಯಣಪ್ಪ, ಮುಖಂಡರಾದ ಮಂಜಣ್ಣ ಸೇರಿದಂತೆ ಅನೇಕ ರೈತರು ಹಾಗು ಲೈನ್‍ಮ್ಯಾನ್‍ಗಳು ಸಭೆಯಲ್ಲಿ ಪಾಲ್ಗೋಂಡಿದ್ದರು.
ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿಯ ವಿದ್ಯುತ್ ಸರಬರಾಜು ಸಮಸ್ಯೆ ಹಿನ್ನಲೆಯಲ್ಲಿ ತಿಪಟೂರು ಬೆಸ್ಕಾಂ ಇ.ಇ. ರಾಮಚಂದ್ರಮೂರ್ತಿ ಹಾಗೂ ಕೆಪಿಟಿಸಿಎಲ್ ಇ.ಇ. ಕಾಂತಲಕ್ಷ್ಮೀ ಗುರುವಾರ ಟಿ.ಬಿ.ಕ್ರಾಸ್ ಬಳಿಯಿರುವ ವಿದ್ಯುತ್ ಉಪಸ್ಥಾವರಕ್ಕೆ ಬೇಟಿ ನೀಡಿ ಜನಪ್ರತಿನಿಧಿಗಳ, ರೈತಮುಖಂಡ ಹಾಗೂ ಅಧಿಕಾರಿಗಳ ಸಭೆ ನೆಡೆಸಿದರು.

        ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎನ್.ಆರ್.ಜಯರಾಮ್ ಮಾತನಾಡಿ ಸುಮಾರು ದಿನಗಳಿಂದ ಮಾಯಸಂದ್ರ ಹೋಬಳಿಯ ಶಟ್ಟಗೊಂಡನಹಳ್ಳಿ, ಮಣೆಚಂಡೂರು, ಬೈತರಹೊಸಳ್ಳಿ ಪಂಚಾಯ್ತಿ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿದೆ. ಸರ್ಕಾರ ನಿಗದಿ ಪಡಿಸಿರುವ 6 ಗಂಟೆ ವಿದ್ಯುತ್ ಸಹ ರೈತರಿಗೆ ಲಬಿಸುತ್ತಿಲ್ಲ, ಕೇವಲ ಹಗಲಿನಲ್ಲಿ ಮಾತ್ರ 3 ಗಂಟೆ ವಿದ್ಯುತ್ ಲಬಿಸುತ್ತಿದ್ದು ರಾತ್ರಿಯ ಸಮಯದಲ್ಲಿ 3 ಗಂಟೆ ವಿದ್ಯುತ್ ಲಬಿಸುತ್ತಿಲ್ಲ. ಮಾರ್ಗ ತೊಂದರೆಯಾದಲ್ಲಿ ಮೂರು ದಿನವಾದರೂ ವಿದ್ಯುತ್ ಸಿಗಲ್ಲ. ಅದ್ದರಿಂದ ಈ ಭಾಗದ ರೈತರು ತೋಟಗಳನ್ನು ಉಳಿಸಿಕೊಳ್ಳಲು ಹರ ಸಾಹಸ ಪಡಬೇಕಾದ ಪರಿಸ್ಥಿತಿ ಉಂಟಾಗಿದೆ. ಮುಂದಿನ ಬೇಸಿಗೆಯಲ್ಲಿ ಮತ್ತಷ್ಟು ವಿದ್ಯುತ್ ಸಮಸ್ಯೆ ಎದುರಾಗಲಿದೆ. ಕೂಡಲೇ ಸಮಸ್ಯೆ ಬಗೆ ಹರಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು.

      ತಾಲೂಕು ಪಂಚಾಯ್ತಿ ಸದಸ್ಯರಾದ ಮಹಾಲಿಂಗಯ್ಯ ಮಾತನಾಡಿ ಶಟ್ಟಗೊಂಡನಹಳ್ಳಿಗೆ ಸರಬರಾಜಾಗುವ ವಿದ್ಯುತ್ ಲೈನ್‍ನಿಂದ ತುಂಬಾ ಸಮಸ್ಯೆಯಾಗುತ್ತಿದೆ. ವಿಪರೀತ ಲೋಡ್ ಸಮಸ್ಯೆಯಿಂದ ವಿದ್ಯುತ್ ಸರಿಯಾಗಿ ದೊರಕುತ್ತಿಲ್ಲ. ಜಂಪ್ ಕಟ್ಟಾಗುವುದು, ಸಿಂಗಲ್ ಫೇಸ್ ಆಗುವುದರಿಂದ ಪದೇ ಪದೇ ವಿದ್ಯುತ್ ವ್ಯತ್ಯಯ ಉಂಟಾಗಿ ರೈತರಿಗೆ ಪ್ರತಿ ದಿನ ಕೇವಲ ಎರಡು ಗಂಟೆ ವಿದ್ಯುತ್ ಮಾತ್ರ ಸಿಗುತ್ತಿದೆ. ಆದ್ದರಿಂದ ಈ ಭಾಗದ ರೈತರಿಗೆ ಸಮರ್ಪಕ ವಿದ್ಯುತ್ ಸಿಗುವಂತೆ ಪರ್ಯಾಯ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದರು.

     ತಿಪಟೂರು ಬೆಸ್ಕಾಂ ಇ.ಇ. ರಾಮಚಂದ್ರಮೂರ್ತಿ ಮಾತನಾಡಿ ಮಾಯಸಂದ್ರ ಹೋಬಳಿಯ ಶಟ್ಟಗೊಂಡನಹಳ್ಳಿ, ಮಣೆಚಂಡೂರು, ಬೈತರಹೊಸಳ್ಳಿ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಿಗೆ ಸರಬರಾಜಾಗುವ ಫೀಡರ್ ಓವರ್ ಲೋಡ್‍ನಿಂದ ವಿದ್ಯುತ್ ವ್ಯತ್ಯಯವಾಗುತ್ತಿದೆ. ಬೈತರಹೊಸಳ್ಳಿ, ವಿಠಲಾಪುರ, ಜಿ.ದೊಡ್ಡೇರಿ, ಮಣೆಚಂಡೂರು ಬಳಿ ವೈ ಅಪರೇಷನ್ ಮಾಡುವ ಮೂಲಕ ಶೀಘ್ರದಲ್ಲೇ ವಿದ್ಯುತ್ ಸಮಸ್ಯೆ ನಿವಾರಣೆ ಮಾಡಲಾಗುವುದು. ಶಟ್ಟಗೊಂಡನಹಳ್ಳಿ ಬಳಿ ಸ್ಥಾಪನೆಯಾಗಲಿರುವ ಉಪ ಸ್ಥಾವರಕ್ಕೆ ತಾಂತ್ರಿಕ ಅನುಮೋದನೆ ದೊರೆತಿದ್ದು ಭೂಮಿ ಮುಂಜೂರಾತಿಯಲ್ಲಿದೆ. ಈ ಉಪ ಸ್ಥಾವರ ಪ್ರಾರಂಬಗೊಂಡರೆ ಈ ಭಾಗದಲ್ಲಿ ವಿದ್ಯುತ್ ಸಮಸ್ಯೆ ನಿವಾರಣೆ ಗೊಳ್ಳಲಿದೆ ಎಂದು ಭರವಸೆ ನೀಡಿದರು.

      ಈ ಸಂಧರ್ಭದಲ್ಲಿ ತಾಲೂಕು ಪಂಚಾಯ್ತಿ ಸದಸ್ಯರಾದ ಬೈರಪ್ಪ, ಮಂಜುನಾಥ್, ರೈತ ಮುಖಂಡ ಚಂದ್ರಶೇಖರ್, ಕೆಪಿಟಿಸಿಎಲ್ ನ ಇಇ ಕಾಂತಲಕ್ಷ್ಮಿ, ಕೆಪಿಟಿಸಿಎಲ್ ಎಇಇ ರಾಮಚಂದ್ರಪ್ಪ, ತುರುವೇಕೆರೆ ಬೆಸ್ಕಾಂ ಎ.ಇ.ಇ. ಮಾರುತಿ, ಮಾಯಸಂದ್ರ ಎಸ್.ಓ. ನಾರಾಯಣಪ್ಪ, ಮುಖಂಡರಾದ ಮಂಜಣ್ಣ ಸೇರಿದಂತೆ ಅನೇಕ ರೈತರು ಹಾಗು ಲೈನ್‍ಮ್ಯಾನ್‍ಗಳು ಸಭೆಯಲ್ಲಿ ಪಾಲ್ಗೋಂಡಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link