ಚೆನ್ನೈ:
ತಮಿಳು ನಟಿಯೊಬ್ಬರು ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನ ವಾಲಾಸರವಕ್ಕಂನಲ್ಲಿ ನಡೆದಿದೆ.
ಕಾಲಿವುಡ್ನ ರಿಯಾಮಿಕಾ(26) ನೇಣಿಗೆ ಶರಣಾಗಿರುವ ಉದಯೋನ್ಮುಖ ನಟಿ. ರಿಯಾಮಿಕಾ ತಮಿಳು ಚಿತ್ರರಂಗದ ಉದಯೋನ್ಮುಖ ನಟಿ. ಈಕೆ ಕುಂಡ್ರತೈಲ್ ಕುಮಾರನುಕು ಕೊಂಡಾಟ್ಟಮ್ ಮತ್ತು ಅಘೋರಿ-ಯಿನ್ ಅಟ್ಟಮ್ ಆರಂಬಂ ಚಿತ್ರಗಳಲ್ಲಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ರಿಯಾಮಿಕಾ ತನ್ನ ಸಹೋದರ ಪ್ರಕಾಶ್ರೊಂದಿಗೆ ವಲಸರವಕ್ಕಮ್ನ ಶ್ರೀದೇವಿ ಕುಪ್ಪಂ ಪ್ರದೇಶದಲ್ಲಿ ಬಾಡಿಗೆ ಮನೆಯೊಂದರಲ್ಲಿ ಕಳೆದ ನಾಲ್ಕು ತಿಂಗಳಿನಿಂದ ವಾಸವಿದ್ದರು. ನ. 28ರಂದು ತನ್ನ ಸಹೋದರನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.
ಮಂಗಳವಾರ ತಡರಾತ್ರಿ ರಿಯಾಮಿಕಾ ಅವರು ತಮ್ಮ ಸ್ನೇಹಿತ ದಿನೇಶನಿಗೆ ಸಾಕಷ್ಟು ಬಾರಿ ಕರೆ ಮಾಡಿದ್ದಾಳೆ. ಆದರೆ, ಕರೆ ಸ್ವೀಕರಿಸಿದ ದಿನೇಶ್ ಮರುದಿನ ಬೆಳಗ್ಗೆ ರಿಯಾಮಿಕಾಳಿಗೆ ವಾಪಸ್ ಕರೆ ಮಾಡಿದಾಗ ನಾಟ್ ರೀಚಬಲ್ ಆಗಿದೆ. ತಕ್ಷಣ ಮನೆಗೆ ಹೋಗಿ ಪ್ರಕಾಶ್ ಬಳಿ ಕೇಳಿದ್ದಾನೆ.
ಪ್ರಕಾಶ್ ಹಾಗೂ ದಿನೇಶ್ ಆಕೆಯ ಕೋಣೆಯ ಬಳಿ ಹೋದಾಗ ಲಾಕ್ ಆಗಿದ್ದನ್ನು ಕಂಡು ಸಾಕಷ್ಟು ಬಾರಿ ಬಾಗಿಲು ಬಡಿದಿದ್ದಾರೆ. ಆದರೆ, ತೆಗೆಯದಿದ್ದಾಗ ಪ್ರಕಾಶ್ ಕಿಟಕಿಯನ್ನು ಒಡೆದು ನೋಡಲು ರಿಯಾಮಿಕಾ ನೇಣಿಗೆ ಶರಣಾಗಿರುವುದು ಕಂಡುಬಂದಿದೆ.
ತಕ್ಷಣ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತ ದೇಹವನ್ನು ವಶಕ್ಕೆ ಪಡೆದಿದ್ದಾರೆ. ಕೆಲವು ಚಿತ್ರಗಳಲ್ಲಿ ತೊಡಗಿಕೊಂಡಿದ್ದ ರಿಯಾಮಿಕಾ ಅವರಿಗೆ ಕಾಲಿವುಡ್‍ನಲ್ಲಿ ಹೆಚ್ಚು ಅವಕಾಶ ಬರುತ್ತಿತ್ತಂತೆ. ರಿಯಾಮಿಕ ಅವರಿಗೆ ಕಾಲಿವುಡ್‍ನಲ್ಲಿ ಸಾಕಷ್ಟು ಸಿನಿಮಾಗಳಿತ್ತು. ಆದರೆ ಅವರು ತುಂಬಾ ಒತ್ತಡದಲ್ಲಿದ್ದರು. ಕೆಲಸದ ಒತ್ತಡದಿಂದ ರಿಯಾಮಿಕ್ಕ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ