ಪ್ರೀತಿ ನಿರಾಕರಿಸಿದಕ್ಕೆ ಆತ್ಮಹತೆ ಮಾಡಿಕೊಂಡ ಯುವಕ

ಬೆಂಗಳೂರು

     ಪ್ರೀತಿ ನಿರಾಕರಿಸಿದಕ್ಕೆ ಕಾಲ್ ಸೆಂಟರ್ ಉದ್ಯೋಗಿಯೊಬ್ಬರು ಯುವತಿ ಮುಂದೆಯೇ ಕಟ್ಟಡದಿಂದ ಐದನೇ ಮಹಡಿಯಿಂದ 3 ಮೂರನೇ ಮಹಡಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಹೆಚ್‍ಎಸ್‍ಆರ್ ಲೇಔಟ್‍ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

       ಹೈದ್ರಾಬಾದ್ ಮೂಲದ ರೋಷನ್(24) ಆತ್ಮಹತ್ಯೆ ಮಾಡಿಕೊಂಡವರನ್ನು ಗುರುತಿಸಲಾಗಿದೆ. ಹೆಚ್‍ಎಸ್‍ಆರ್ ಲೇಔಟ್‍ನ ಕಾಲ್‍ಸೆಂಟರ್‍ವೊಂದರಲ್ಲಿ ಉದ್ಯೋಗಿಯಾಗಿದ್ದ ರೋಷನ್ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅನ್ಯ ಕೋಮಿನ ಯುವತಿಯನ್ನು ಪ್ರೀತಿಸುತಿದ್ದ. ಅಲ್ಲದೇ ಪ್ರೀತಿಸು ಎಂದು ಆಕೆಗೆ ಪದೇ ಪದೇ ಪೀಡಿಸುತಿದ್ದ. ಆದರೆ ಯುವತಿ ನಮ್ಮ ಧರ್ಮ ಬೇರೆ. ಅಲ್ಲದೇ ನಾನು ನಿನ್ನನ್ನು ಪ್ರೀತಿಸುವುದಿಲ್ಲಾ ಕೂಡ ಎಂದು ನಿರಾಕರಿಸಿದ್ದರು.

       ಪ್ರೀತಿಸುವಂತೆ ಪೀಡಿಸುತ್ತಿದ್ದ ರೋಷನ್ ಕಾಟ ತಾಳಲಾರದೆ ಕೆಲಸ ಬಿಟ್ಟು ಯುವತಿಯು ಅದೇ ಕಟ್ಟಡದ ಮೂರನೇ ಮಹಡಿಯ ಬೇರೆ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದಳು. ಈ ಹಿನ್ನೆಲೆ ಯುವಕ ಯುವತಿಯ ಮುಂದೆಯೇ ತಾನು ಕೆಲಸ ಮಾಡುವ ಕಂಪೆನಿಯ 5ನೇ ಮಹಡಿಯಿಂದ 3 ನೇ ಮಹಡಿಗೆ ಹಾರಿ ಬಿದ್ದು ಪ್ರಾಣ ಬಿಟ್ಟಿದ್ದಾನೆ.

       ಇನ್ನು ಯುವಕನ ಆತ್ಮಹತ್ಯೆಯ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಹೆಚ್‍ಎಸ್‍ಆರ್ ಲೇಔಟ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಮುಂದುವರೆದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link