ಬೆಂಗಳೂರು
ಚಿತ್ರನಟ ನಟ ಪ್ರಕಾಶ್ ರೈ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ.ಪ್ರಸುತ್ತ ನಟ ಪ್ರಕಾಶ್ ರೈ ಮೂರು ಮತದಾರರ ಗುರುತಿನ ಚೀಟಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಅವರ ವಿರುದ್ಧ ಈ ದೂರು ದಾಖಲಿಸಲಾಗಿದೆ. ಒಬ್ಬರು ಒಂದೇ ವೋಟರ್ ಐಡಿ ಕಾರ್ಡ್ ಹೊಂದಿರಬೇಕೆಂಬ ನಿಯಮವಿದೆ. ಪ್ರಕಾಶ್ ರೈ ಕಾನೂನು ಬಾಹಿರವಾಗಿ 3 ವೋಟರ್ ಐಡಿ ಹೊಂದಿದ್ದಾರೆಂದು ಆರೋಪಿಸಿ, ರೈ ವಿರುದ್ಧ ಬೆಂಗಳೂರಿನ ಜಗನ್ ಕುಮಾರ್ ಮತ್ತು ಸತೀಶ್ ಎಂಬುವವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಪ್ರಕಾಶ್ ರೈ ತಮಿಳುನಾಡಿನ ವೇಲಚ್ಚೇರಿ ವಿಧಾನಸಭೆಯಲ್ಲಿಯೇ ಎರಡು ವೋಟರ್ ಐಡಿ ಹೊಂದಿದ್ದಾರೆ. ಅಲ್ಲದೇ, ಆಂಧ್ರದ ರಂಗಾರೆಡ್ಡಿ ಜಿಲ್ಲೆಯ ಸೇರಿಲಿಂಗಮ್ ಪಲ್ಲಿ ವಿಧಾನಸಭೆಯಲ್ಲಿ ಮತದಾನ ಹಕ್ಕು ಹೊಂದಿದ್ದಾರೆಂಬ ಆರೋಪವಿದೆ.
ಸೆಲೆಬ್ರಿಟಿಗಳು ಸಮಾಜಕ್ಕೆ ಪೂರಕವಾಗಿಬೇಕು. ಆದರೆ ನಟ ಪ್ರಕಾಶ್ ರೈ ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಿದ್ದಾರೆ. ಪ್ರಕಾಶ್ ರೈ ನಡೆ ದೇಶಕ್ಕೆ ಮಾರಕವಾಗುತ್ತಿದೆ. ಆದ್ದರಿಂದ ಪ್ರಕಾಶ್ ರೈ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಜಗನ್ ಕುಮಾರ್ ಮತ್ತು ಸತೀಶ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








