ಟ್ವಿಟರ್ ಸಿಇಒ ವಿರುದ್ಧ ಸಿಡಿದೆದ್ದ ವಿಪ್ರ ಸಮಾಜ…!

ಜೋಧ್​ಪುರ:

ಪ್ರಸ್ತುತ ಸಮಾಜಿಕ ಜಾಲತಾಣದ ದಿಗ್ಗಜರಲ್ಲಿ ಒಂದಾದ ಟ್ವಿಟರ್ ಈಗ ಮುಜುಗರಕ್ಕೆ ಒಳಗಾಗುವ ಪ್ರಸಂಗ ಎದುರಾಗಿದೆ ಟ್ವಿಟರ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಾಕ್ ಡಾರ್ಸಿ ವಿರುದ್ಧ ಎಫ್​ಐಆರ್ ದಾಖಲಿಸುವಂತೆ ಜೋಧ್​ಪುರ ಅಧೀನ ನ್ಯಾಯಾಲಯ ಆದೇಶಿಸಿದೆ ಎಂದು ವರದಿಯಾಗಿದೆ.

ಪ್ರಕರಣದ ವಿವರ :

         ಬ್ರಾಹ್ಮಣಿಕೆಯ ಯಜಮಾನಿಕೆ ಅಂತ್ಯಗೊಳಿಸಿ ಎಂಬ ಕರಪತ್ರದ ಚಿತ್ರವು ಟ್ವಿಟರ್​ನಲ್ಲಿ ಇತ್ತೀಚಿಗೆ ವೈರಲ್ ಆಗಿತ್ತು. ಇದರಿಂದ ಆಕ್ರೋಶಕೊಳಗಾದ ವಿಪ್ರ ಪ್ರತಿಷ್ಠಾನ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಮಾನನಷ್ಟ ಮೊಕದ್ದಮೆ ದಾಖಲಿಸಿಕೊಳ್ಳಲು ಮನವಿ ಮಾಡಿದೆ ಎಂದು ತಿಳಿದು ಬಂದಿದೆ.

      ವಿಪ್ರ ಸಮುದಾಯದ ಅರ್ಜಿ ಪುರಸ್ಕರಿಸಿದ ನ್ಯಾಯಾಲಯ, ಸಿಇಒ ವಿರುದ್ಧ ಎಫ್​ಐಆರ್ ದಾಖಲಿಸಲು ಸೂಚಿಸಿದ್ದಾರೆ ಎಂದು ತಿಳಿಸಿಲಾಗಿದೆ.ಟ್ವಿಟರ್ ನ ಈ ನಡವಳಿಕೆಗಳಿಂದ ಧರ್ಮ ಹಾಗೂ ಸಮುದಾಯದ ಭಾವನೆಗಳಿಗೆ ಹಾನಿಯುಂಟು ಮಾಡಿದೆ ಎಂದು ಸಮಾಜ ಆರೋಪಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಹುಟ್ಟಿಸುವ ಪೋಸ್ಟ್ ಹಾಕಲಾಗಿದೆ. ಇದರಿಂದ ವಿಪ್ರ ಸಮಾಜದ ಮಾನಕ್ಕೆ ಹಾನಿಯಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link