ಬೆಂಗಳೂರು
ನಗರದ ಜೂಜಾಟದ ಅಡ್ಡೆಯ ಮೇಲೆ ದಾಳಿ ಮುಂದುವರೆಸಿರುವ ಸಿಸಿಬಿ ಪೊಲೀಸರು ವಸಂತನಗರ ಹಾಗೂ ವರ್ತೂರಿನಲ್ಲಿ ಜೂಜಾಟದ ಅಡ್ಡೆಯ ಮೇಲೆ ದಾಳಿ ನಡೆಸಿ 48 ಮಂದಿಯನ್ನು ಬಂಧಿಸಿದ್ದಾರೆ.
ವಸಂತನಗರ 11ನೇ ಮುಖ್ಯರಸ್ತೆಯ ಫೈವ್ ಸ್ಟಾರ್ ರೀಕ್ರಿಯೇಷನ್ ಅಸೋಸಿಯೇಷನ್ ಕ್ಲಬ್‍ನಲ್ಲಿ ನಡೆಸುತ್ತಿದ್ದ ಜೂಜಾಟದ ಅಡ್ಡೆಯ ಮೇಲೆ ದಾಳಿ ನಡೆಸಿ 19 ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತ ತಾರಕ್ (34), ಸಂದೀಪ್ ಕುಮಾರ್ (31), ಕೃಷ್ಣ (55), ನಾಗಾರ್ಜುನ (34), ರಂಗರಾವ್ (58), ಮುಸ್ತಫಾ (36), ರಾಜಾ ಸಾಹೇಬ್ (55), ರವಿ (60), ನರಸಿಂಹ (42) ಸೇರಿ 19 ಮಂದಿಯಿಂದ 2 ಲಕ್ಷ 25 ಸಾವಿರ ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಫೈವ್ ಸ್ಟಾರ್ ರೀಕ್ರಿಯೇಷನ್ ಅಸೋಸಿಯೇಷನ್ ಕ್ಲಬ್‍ನಲ್ಲಿ ಜೂಜಾಡುತ್ತಿದ್ದ ಖಚಿತ ಮಾಹಿತಿಯಾಧರಿಸಿ ದಾಳಿ ನಡೆಸಿ, ಬಂಧಿಸಿ ಹೈಗ್ರೌಂಡ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.
ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಾಚಮಾರನಹಳ್ಳಿಯಲ್ಲಿರುವ ಶ್ರೀ ಮಂಜುನಾಥ ಸ್ವಾಮಿ ಪ್ರಸನ್ನ ರಿಕ್ರಿಯೇಷನ್ ಕ್ಲಬ್‍ನಲ್ಲಿ ಇಸ್ಪೀಟ್ ಕ್ಲಬ್‍ನ ಮೇಲೆ ದಾಳಿ, 29 ಮಂದಿಯನ್ನು ಬಂಧಿಸಿ 3,92,500 ನಗದು, ಹಾಗೂ ರೂ.107500 ರೂ ಬೆಲೆಯ 274 ಟೋಕನ್ ಸೇರಿದಂತೆ ಒಟ್ಟು 5 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








