ಹರಿಹರ :
ನಗರದ ಶಿವಮೊಗ್ಗ ರಸ್ತೆಯಲ್ಲಿರುವ ಶಾಸಕ ಎಸ್ ರಾಮಪ್ಪನವರ ಜನಸಂಪರ್ಕ ಕಚೇರಿಯಲ್ಲಿ ಇಂದು ದಾಸ ಶ್ರೇಷ್ಠ ಶ್ರೀ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು.
ಮಾಜಿ ಸಚಿವ ಹಾಗೂ ನಟ ಅಂಬರೀಶ್ ಹಾಗೂ ಕೇಂದ್ರ ಮಾಜಿ ಸಚಿವ ಜಾಫರ್ ಷರೀಫ್ ಅವರ ಮರಣದ ನಿಮಿತ್ತ ಮುಂದೂಡಲಾಗಿದ್ದ ಕಾರಣ ಇಂದು ಆಚರಿಸಲಾಗುತ್ತಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ.ಹನುಮಂತಪ್ಪ ತಿಳಿಸಿದರು.
ಸಭೆಯಲ್ಲಿ ನಗರಸಭಾ ಅಧ್ಯಕ್ಷೆ ಶ್ರೀಮತಿ ಸುಜಾತಾ ರೇವಣಸಿದ್ದಪ್ಪ, ನಗರಸಭಾ ಸದಸ್ಯ ಬಿ. ರೇವಣಸಿದ್ದಪ್ಪ, ಹನಗವಾಡಿ ಹನುಮಂತಪ್ಪ ,ಈ ಸಂದರ್ಭದಲ್ಲಿ ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷ ರಾಗಿ ನೂತನವಾಗಿ ಆಯ್ಕೆಯಾದ ಕೆ.ಜಡಿಯಪ್ಪ, ಕಾರ್ಯದರ್ಶಿಯಾಗಿ ಆಯ್ಕೆಯಾದ ಕೆ.ಟಿ.ಗಂಗಾಧರ್ ಮತ್ತು ರಾಜ್ಯ ಮಟ್ಟದಲ್ಲಿ ವಾಲಿಬಾಲ್ ತಂಡಕ್ಕೆ ಆಯ್ಕೆಯಾದ ಕ್ರೀಡಾಪಟು ಸಾಯಿ ಮಯೂರ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ವೇಳೆ ಹಾಲುಮತ ಸಮಾಜದ ಹಿರಿಯರಾದ ಕುಂಬಳೂರು ಹಾಲಪ್ಪ, ನಗರಸಭೆ ಸದಸ್ಯೆ ರತ್ನಮ್ಮ, ಮಾಜಿ ಸದಸ್ಯೆ ಡಿ.ವೈ. ಇಂದಿರಾ, ವೈ.ಭಾಗ್ಯ ದೇವಿ,ಕಾಂಗ್ರೆಸ್ ಮುಖಂಡರಾದ ಅಮರಾವತಿ ರೇವಣಸಿದ್ದಪ್ಪ, ಬಾಲರಾಜ್ ,ಗಂಗಾಧರ್, ನಜೀರ್ ಅಹ್ಮದ್, ಖಾನ್ ಸಾಬ್ ,ಗ್ರಾಮ ಪಂಚಾಯಿತಿ ಸದಸ್ಯೆ ಇಂದಿರಮ್ಮ, ಮಲೇಬೆನ್ನೂರು ಪುರಸಭೆ ಸದಸ್ಯ ನಿಜಲಿಂಗಪ್ಪ, ಸಿದ್ದನಗೌಡ್ರು, ಫೈರೋಜ್’ ಅಬು ಸಲೇಹ,ಶ್ಯಾಮಸನ್ ಮೇಸ್ತ್ರಿ ,ರೆಹಮಾನ್, ರಹಮತ್, ಮೊಹಿಸಿನ್ ಮುಂತಾದ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








