ಜಗಳೂರು:
ಸರ್ಕಾರದ ಅವಧಿಯೊಳಗೆ ಭದ್ರಾ ನೀರನ್ನು ಈ ಜಗಳೂರು ತಾಲೂಕಿಗೆ ಹರಿಸಲಾಗುವುದು ಎಂದು ಸಣ್ಣ ಕೈಗಾರಿಕೆ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಶ್ರೀನಿವಾಸ್ ಹೇಳಿದರು.
ಜಗಳೂರು ಪಟ್ಟಣದ ಗುರುಭವನದ ಆವರಣ್ಲ ನ್ಯೂ ಕಬ್ಬಡಿ ಫೆಡರೇಷನ್ ಆಫ್ ಇಂಡಿಯಾ, ಕರ್ನಾಟಕ ಕಬ್ಬಡಿ ಅಸೋಸಿಯೇಷನ್, ದಾವಣಗೆರೆ ಜಿಲ್ಲಾ ಕಬ್ಬಡಿ ಅಸೋಸಿಯೇಷನ್, ಜಿ.ಎಂ.ಸಿದ್ದೇಶ್ವರ, ಅಭಿಮಾನ ಬಳಗ ಸಂಯುಕ್ತಾಶ್ರಯದಲ್ಲಿ ಶಾಸಕ ಎಸ್.ವಿ.ರಾಮಚಂದ್ರ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ರಾಜ್ಯಮಟ್ಟದ ಪುರುಷ ಮತ್ತು ಮಹಿಳೆಯರ ಹೊನಲು ಬೆಳಕಿನ ಮ್ಯಾಟ್ ಕಬ್ಬಡಿ ಪಂದ್ಯಾವಳಿಗಳ ಸಮರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಬರಪೀಡಿತ ತಾಲೂಕುಗಳಿಗೆ ತಲಾ 50 ಲಕ್ಷರೂ ಬಿಡುಗಡೆ ಮಾಡಿದೆ. ವಿಧಾನ ಸಭೆ ಅಧಿವೇಶನ ಮುಗಿಯುತ್ತಿದ್ದಂತೆ ಜಗಳೂರಿಗೆ ಬರುತ್ತೇನೆ. ಇಲ್ಲಿನ ಸಮಸ್ಯೆಯನ್ನು ಅವಲೋಕಿಸುತ್ತೇನೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆಂದರು.
ಇಂತಹ ಬರಪೀಡಿತ ಪ್ರದೇಶದ ತಾಲೂಕಿನಲ್ಲಿ ಅದ್ಬುತವಾದ ಕ್ರೀಡಾಕೂಟವನ್ನು ಆಯೋಜಿಸುವ ಮೂಲಕ ಈ ಭಾಗದ ಶಾಸಕರು ಹೃದಯ ವೈಶಾಲ್ಯತೆಯನ್ನು ಮೆರೆದಿದ್ದಾರೆ. ಗ್ರಾಮೀಣ ಕ್ರೀಡೆಗಳು ನಶಿಸಿ ಹೋಗುತ್ತಿರುವ ಇಂದಿನ ದಿನಮಾನದಲ್ಲಿ ಅತ್ಯಂತ ಅದ್ಬತವಾಗಿ ಕ್ರೀಡಾಕೂಟ ನಡೆದಿವೆ. ನಮ್ಮ ಕಡೆ ಕೊಕ್ ಆಟವಾಡಿಸುತ್ತೇವೆ. ಆದರೆ ಎಸ್.ವಿ.ರಾಮಚಂದ್ರ ಆಯೋಜಿಸಿರುವ ಅದ್ಬುತವಾಗಿದೆ. ಕ್ರೀಡಾಂಗಣವನ್ನು ಸೃಷ್ಠಿಸಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕ್ರೀಡಾಕೂಟ ನಮಗೂ ಮಾದರಿ ಎಂದರು.
ದೈಹಿಕ ಶ್ರಮವಿಲ್ಲದಿದ್ದರೆ ಆಯುಸ್ಸು, ಆರೋಗ್ಯ ಇರುವುದಿಲ್ಲ. ಆರೋಗ್ಯವಂತ ಮನಸ್ಸು ಮತ್ತು ದೇಹಕ್ಕೆ ದೈಹಿಕ ಶ್ರಮ ಅತ್ಯಗತ್ಯ ವಾಗಿದೆ. ಈ ಹಿಂದೆ ನಮ್ಮ ತಾತ ಮುತ್ತಾತರರು ಹೊಲ ಹೂಳುತ್ತಿದ್ದರು. ಆದರೆ ಇಂದಿನ ದಿನಮಾನಗಳಲ್ಲಿ 30 ವರ್ಷಕ್ಕೆ ಮೂಲೆ ಸೇರಿಕೊಳ್ಳುತ್ತಿದ್ದಾರೆಂದು ಬೇಸರವ್ಯಕ್ತಪಡಿಸಿದರು.
ನಿಮ್ಮನ್ನು ನೀರು ರೂಪಿಸಿಕೊಳ್ಳಲು ಕ್ರೀಡೆ ಅತ್ಯಂತ ಮುಖ್ಯವಾಗಿದೆ. ಬಹುಶಃ ಶಾಸಕ ಎಸ್.ವಿ.ರಾಮಚಂದ್ರ ಅವರು ಈ ಕೆಲಸವನ್ನು ಮಾಡಿದ್ದಾರೆಂದು ಶ್ಲಾಘಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಸಾಣೆಹಳ್ಳಿ ಮಠದ ಪಟ್ಟಾಧ್ಯಕ್ಷ ಡಾ, ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ ಕ್ರೀಡೆ, ಸಾಂಸ್ಕøತಿಕ ಕಾರ್ಯಕ್ರಮಗಳು ಎಲ್ಲಿ ಜರುಗುತ್ತವೆ ಅಲ್ಲಿ ಬದುಕು ಭವ್ಯವಾಗುತ್ತದೆ. ಎಂದರು.
ಜಗಳೂರು ತಾಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸಲು ಈಗಾಗಲೇ ಸರ್ಕಾರದ ಮೇಲೆ ಒತ್ತಡ ಹೇರಲಾಗಿದೆ. ಆದಷ್ಟೂ ಬೇಗ ಈ ಕೆಲಸ ಸರ್ಕಾರದಿಂದ ಆಗಬೇಕಿದೆ ಎಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಉಸ್ತುವಾರಿ ಸಚಿವರನ್ನು ಒತ್ತಾಯಿಸಿದರು.
ಎಸ್.ವಿ.ರಾಮಚಂದ್ರ ಮಾತನಾಡಿ ನನ್ನನ್ನು ಅತ್ಯಂತ ಹೆಚ್ಚು ಮತಗಳಿಂದ ಗೆಲ್ಲಿಸಿದ್ದೀರಿ ಅದಕ್ಕಾಗಿ ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತೇನೆ. ನಮ್ಮಲ್ಲಿ ಬರವಿರಬಹುದು. ಹೃದಯ ಶ್ರೀಮಂತಿಕೆಗೆ ಬರವಿಲ್ಲ. ಬರದಲ್ಲೂ ತರಳಬಾಳು ಹುಣ್ಣಿಮೆಯಂತಹ ಕಾರ್ಯಕ್ರಮ ನಡೆಸಿಕೊಟ್ಟಿದ್ದೇವೆ. ಪ್ರತಿವರ್ಷ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತೇನೆ. ಮುಂದಿನ ದಿನಗಳಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುವುದು ಎಂದರು.
ಜಗಳೂರು ತಾಲೂಕಿನಲ್ಲಿ ಬರವಿದೆ. ಕುಡಿಯುವ ನೀರಿಗೆ ಸಮಸ್ಯೆ ಇದೆ. ನಮಗೆ ಒಳ್ಳೆಯ ಜಿಲ್ಲಾ ಉಸ್ತುವಾರಿ ಸಿಕ್ಕಿದ್ದಾರೆ. ಇದು ನಮಗೆ ಭಾಗ್ಯ ಎಂದರು. ಕೊಟ್ಟ ಮಾತಿಗೆ ತಪ್ಪದ ವ್ಯಕ್ತಿ ವಾಸು ಹೇಳಿದಂತೆ ನಡೆದುಕೊಳ್ಳುತ್ತಾರೆಂದರು. ಬರವಿದೆ ಎಂದು ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ನಿಮ್ಮನ್ನು ಬಿಟ್ಟು ನಾನಿಲ್ಲ. ಇನ್ನಾರು ತಿಂಗಳು ಕಷ್ಟ ಪಡೋಣ. ಜಗಳೂರು ತಾಲೂಕಿಗೆ ಅಪ್ಪರ್ ಭದ್ರಾ ನೀರು ಹರಿಸುವವರೆಗೂ ನಾನು ನಿದ್ರಿಸುವುದಿಲ್ಲ. ಮಾತನಾಡದೇ ಅದನ್ನು ಮಾಡಿ ತೋರಿಸ್ತಿನಿ ಎಂದರು.
ತೆರೆ ಕಂಡ ಕ್ರೀಡಾಕೂಟ
ಜಗಳೂರು ಪಟ್ಟಣದ ಮೂರು ದಿನಗಳಿಂದ ನಡೆದ ರಾಜ್ಯಮಟ್ಟದ ಕಬ್ಬಡಿ ಕ್ರೀಡಾಕೂಟವನ್ನು ಜಗಳೂರು ತಾಲೂಕಿನ ಕ್ರೀಡಾಭಿಮಾನಿಗಳು ಕಣ್ತುಂಬಿಕೊಂಡರು.
ಪಟ್ಟಣದ ಗುರುಭವನದ ಆವರಣದಲ್ಲಿ ಸ್ಥಾಪಿಸಲಾಗಿರುವ ಆಟದ ಮೈದಾನದಲ್ಲಿ ಅತ್ಯಂತ ರೋಚಕ ರೀತಿಯಲ್ಲಿ ಸ್ಪರ್ಧೆ ನೀಡುತ್ತಿದ್ದ ಆಟಗಾರರಿಗೆ, ಕಿಕ್ಕಿರಿದು ತುಂಬಿದ್ದ ಕ್ರೀಡಾಭಿಮಾನಿಗಳು ಸಿಳ್ಳೆ ಕೇಕೆ ಹಾಕಿ ಹುರಿ ದುಬ್ಬಿಸಿದರು.ಶುಕ್ರವಾರ ಆರಂಭವಾದ ಕ್ರೀಡಾಕೂಟದಲ್ಲಿ ಮೂರು ದಿನಗಳ ಕಾಲ ವೇದಿಕೆಯ ಕಾರ್ಯಕ್ರಮಗಳು ನಡೆದವು. ಶಿವಮೊಗ್ಗ ಸಂಸದ ರಾಘವೇಂದ್ರ ಅವರು ಅಧಿಕೃತವಾಗಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಕೊಡುಗು, ಬಿಜಾಪುರ, ಬೆಂಗಳೂರು, ದಾರವಾಡ ಬಿ.ಟೀಮ್, ಭದ್ರಾವತಿ ಕ್ಲಬ್, ಗದಗ, ಡಿವೈಎಸ್ಎಸ್ ತುಮಕೂರು, ಹೊನ್ನಪ್ಪ ಅಕಾಡಮೆ, ಬಳ್ಳಾರಿ, ಹಾಸನ, ಬೆಂಗಳೂರು ಎ ಟೀಮ್, ದಾವಣಗೆರೆ, ಸೆವೆನ್ ಟೈಗರ್, ಚಿತ್ರದುರ್ಗ, ಶಿವಮೊಗ್ಗ ಚಿಕ್ಕಮಂಗಳೂರು, ಬಿಎಂಟಿಸಿ ಬೆಂಗಳೂರು, ಚಿಕ್ಕಬಳ್ಳಾಪುರ, ರಾಮನಗರ, ಬಾಗಲಕೋಟೆ, ಮಂಡ್ಯ, ಬೆಳಗಾಂ ಕಬ್ಬಡಿ ಬಾಬು, ಉಡುಪಿ, ಹಾವೇರಿ, ಮೈಸೂರು, ಬೀದರ್ ಸೇರಿದಂತೆ ಮತ್ತಿತತರ ಕಬ್ಬಡಿ ತಂಡಗಳು ಭಾಗವಹಿಸಿದ್ದವು.
ಸಂಸದ ಜಿ.ಎಂ.ಸಿದ್ದೇಶ್ವರ, ಗಾಯತ್ರಿ ಸಿದ್ದೇಶ್ವರ, ಇಂದಿರಾ ರಾಮಚಂದ್ರ, 22 ಕೆರೆ ಹೋರಾಟ ಸಮಿತಿ ಅಧ್ಯಕ್ಷ ಡಾ, ಮಂಜುನಾಥ ಗೌಡ್ರು, ಜೆಡಿಎಸ್ ಮುಖಂಡ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ, ಹರಪನಹಳ್ಳಿ ಡಿವೈಎಸ್ಪಿ ನಾಗೇಶ್ ಐತಾಳ್, ಪತ್ರಕತರ ಸಂಘದ ಅಧ್ಯಕ್ಷ ಚಿದಾನಂದ ಜಿ.ಎಸ್., ಹಿರಿಯ ಪತ್ರಕರ್ತರಾದ ಬಿ.ಪಿ.ಸುಭಾನ್, ಜಿಲ್ಲಾ ಉಪಾಧ್ಯಕ್ಷರಾದ ಕೊಟ್ರೇಶ್. ಪೊಲೀಸ್ ಅಧಿಕಾರಿ ತಿಪ್ಪೇಸ್ವಾಮಿ, ಎಪಿಎಂಸಿ ಸದಸ್ಯ ಎನ್.ಎಸ್.ರಾಜು, ಈಜುಪಟು ರೇವತಿನಾಯಕ, ನೆಟ್ಟಕಲ್ ಕರಿಬಸಪ್ಪ, ಜೆಡಿಎಸ್ ರಾಜ್ಯ ಎಸ್ಟಿ ಘಟಕದ ಅಧ್ಯಕ್ಷ ಹೊದಿಗೆರೆ ರಮೇಶ್, ಏಷಿಯನ್ ಕಬ್ಬಡಿ ಫೆಡರೇಷನ್ ಅಧ್ಯಕ್ಷ ಎಂ.ವಿ.ಪ್ರಸಾದ್ ಬಾಬು, ಕರ್ನಾಟಕ ರಾಜ್ಯ ಕಬ್ಬಡಿ ಅಸೋಷಿಯೇಷನ್ ಎಂ.ಎಸ್.ವೆಂಕಟೇಶ್, ಗೌರವಾಧ್ಯಕ್ಷ ವೆಂಕಟೇಶ್, ಕರ್ನಾಟಕ ರಾಜ್ಯ ಕಬ್ಬಡಿ ಅಸೋಷಿಯೇಷನ್ ಪ್ರಧಾನ ಕಾರ್ಯದರ್ಶಿ ಹೊನ್ನಪ್ಪ ಗೌಡ, ದಾವಣಗೆರೆ ಜಿಲ್ಲಾ ಕಬ್ಬಡಿ ಜಿಲ್ಲಾಧ್ಯಕ್ಷ ದೊಡ್ಡಪ್ಪ, ಪ್ರಧಾನ ಕಾರ್ಯದರ್ಶಿ ಮಟ್ಟಿಕಲ್ ಕರಿಬಸಪ್ಪ, ಸೇರಿದಂತೆ ಮತ್ತಿತರರು ಇದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ