ಬೆಂಗಳೂರು
ಸಿವಿಲ್ ಪೊಲೀಸ್ ಪೇದೆ ಹುದ್ದೆಗಳ ನೇಮಕಾತಿ ಪರೀಕ್ಷೆ ಪ್ರಶ್ನೆ ಪತ್ರಿಕೆಗಳ ಸೋರಿಕೆ ಸಂಬಂಧಿಸಿದಂತೆ ತನಿಖೆಯನ್ನು ತೀವ್ರಗೊಳಿಸಿರುವ ಸಿಸಿಬಿ ಪೆÇಲೀಸರಿಗೆ ಪ್ರಕರಣದ ಕಿಂಗ್ ಪಿನ್ ಶಿವಕುಮಾರ್ ಅಲಿಯಾಸ್ ಗೂರೂಜಿಯ ಟ್ರಂಕ್ನಲ್ಲಿ ಬಚ್ಚಿಟ್ಟಿದ್ದ 200 ಪ್ರಶ್ನೆ ಪತ್ರಿಕೆಗಳು ಪತ್ತೆಯಾಗಿವೆ.
ಅವುಗಳನ್ನು ವಶಪಡಿಸಿಕೊಂಡು ಗೂರೂಜಿ ಜೊತೆ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲು ಕೈ ಜೋಡಿಸಿದ ಬಸವರಾಜ್ಗಾಗಿ ಶೋಧ ಮುಂದುವರೆಸಿದ್ದಾರೆ.ಆತನ ಕುಟುಂಬಸ್ಥರು, ಆತನ ಜೊತೆ ಇದ್ದ ಹಲವಾರು ಏಜೆಂಟರನ್ನ ವಶಕ್ಕೆ ಪಡೆದು ಮತ್ತಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಶಿವಕುಮಾರ್ಗೆ ಈಗಾಗಲೇ 66 ವರ್ಷವಾದ ಕಾರಣ ಇತರೆ ಆರೋಪಿಗಳನ್ನ ವಿಚಾರಣೆ ಮಾಡುವ ರೀತಿ ಈತನನ್ನ ವಿಚಾರಣೆ ನಡೆಸಲು ಸಾಧ್ಯವಾಗದಿರುವುದರಿಂದ ಬಸವರಾಜ್ನನ್ನು ಬಂಧಿಸಿದರೆ ಹೆಚ್ಚಿನ ಮಾಹಿತಿ ಪಡೆಯಬಹುದು ಎನ್ನುವ ಲೆಕ್ಕಾಚಾರದೊಂದಿಗೆ ಹಗಳಿರುಳು ಆತನ ಪತ್ತೆಗೆ ಶ್ರಮಿಸುತ್ತಿದ್ದಾರೆ ಪ್ರಕರಣದ ಕಿಂಗ್ ಪಿನ್ ಶಿವಕುಮಾರ್ ಪ್ರಶ್ನೆ ಪತ್ರಿಕೆಯ ಟ್ರಂಕ್ ರಹಸ್ಯವನ್ನ ಶಿವಕುಮಾರ್ ಮನೆ ಕೆಲಸದಾಕೆ ಬಿಚ್ಚಿಟ್ಟಿದ್ದಾಳೆ. ಶಿವಕುಮಾರ್ ವಾಸವಿದ್ದ ನಗರದ ಅಪಾರ್ಟ್ಮೆಂಟ್ ಮೇಲೆ ಸಿಸಿಬಿ ದಾಳಿ ನಡೆಸಿದ ವೇಳೆ ಅಲ್ಲಿದ್ದ ಮನೆ ಕೆಲಸದಾಕೆ ಟ್ರಂಕ್ ತೋರಿಸಿದ್ದಾಳೆ. ಅದನ್ನು ಶೋಧಿಸಿದಾಗ ಅದರಲ್ಲಿ 200 ಪ್ರಶ್ನೆ ಪತ್ರಿಕೆಗಳು ಪತ್ತೆಯಾಗಿವೆ. ಅಷ್ಟು ಮಾತ್ರವಲ್ಲದೇ ಪ್ರಶ್ನೆ ಪತ್ರಿಕೆಯನ್ನ ಜೆರಾಕ್ಸ್ ಮಾಡಿದ ತುಮಕೂರು ಅಂಗಡಿಯನ್ನ ಕೂಡ ಪತ್ತೆ ಮಾಡಿದ್ದು, ಜೆರಾಕ್ಸ್ ಅಂಗಡಿ ಮಾಲೀಕರನ್ನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2018/12/4808-221457-Xerox-shop-in-C.gif)