ಮೈಸೂರು :
ಸರ್ಕಾರ ಹಾಗೂ ನೌಕರರ ನಡುವಿನ ಜಟಾಪಟಿಯಿಂದ ಡಿ.14 ರಂದು ನಾಡ ದೇವತೆ ಚಾಮುಂಡೇಶ್ವರಿ ಭಕ್ತರಿಗೆ ದರ್ಶನ ಸಿಗುವ ಸಾಧ್ಯತೆ ಕಡಿಮೆ ಇದೆ.
ಚಾಮುಂಡೇಶ್ವರಿ ದೇಗುಲದಲ್ಲಿನ ನೌಕರರು ಹಾಗು ಮೂಹ ದೇವಾಲಯಗಳ ನೌಕರರ ಸಂಘ ಪ್ರತಿಭಟನೆಗೆ ಮುಂದಾಗಿದ್ದು, ಡಿಸೆಂಬರ್ 14ರಂದು ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಕರ್ತವ್ಯ ಸ್ಥಗಿತಗೊಳಿಸಲು ಮುಂದಾಗಿದ್ದಾರೆ.
6 ನೇ ವೇತನ ಆಯೋಗದ ನಿಯಮಾನುಸಾರ, ಶೇ. 30 ರಷ್ಟು ವೇತನ ಹೆಚ್ಚಿಸಬೇಕು, ಹೆಚ್ಚುವರಿ ತುಟ್ಟಿಭತ್ಯೆ ಆದಾಗ ಮಂಜೂರು ಮಾಡಿಕೊಳ್ಲಲು ಖಾಯಂ ಆದೇಶ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆಗೆ ಕರೆ ನೀಡಿದ್ದಾರೆ.
ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಆದೇಶವಿದ್ದರೂ ನಮಗೆ ಬೋನಸ್ ಸಿಕ್ಕಿಲ್ಲ. ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದರೂ, ಸುಮಾರು 70 ಕ್ಕೂ ಹೆಚ್ಚು ನೌಕರರನ್ನು ಖಾಯಂ ಮಾಡಿಕೊಳ್ಳಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ ಎಂದು ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ