ಬೆಂಗಳೂರು
ಜಕ್ಕೂರು ವೈಮಾನಿಕ ತರಬೇತಿ ಕೇಂದ್ರದಲ್ಲಿ ತರಬೇತುದಾರರಾಗಿರುವ ಮಾಜಿ ವಿಂಗ್ ಕಮಾಂಡರ್ ಅಮರ್ಜಿತ್ ಸಿಂಗ್ ಮೇಲೆ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದ್ದು ಈ ಸಂಬಂಧ ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ.
ಜಕ್ಕೂರು ವೈಮಾನಿಕ ತರಬೇತಿ ಕೇಂದ್ರದಲ್ಲಿ ತರಬೇತುದಾರರಾಗಿದ್ದ ಅಮರ್ಜಿತ್ ಪೈಲೆಟ್ ಆಗುವ ಕನಸು ಹೊತ್ತ ಹೆಣ್ಣುಮಕ್ಕಳ ಬಾಳುಹಾಳು ಮಾಡುತ್ತಿದ್ದಾರೆ ಎಂದು ನೊಂದ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.ವಿದ್ಯಾರ್ಥಿನಿಗಳಿಗೆ ಮಂಚಕ್ಕೆ ಬಾರೇ ರೊಮ್ಯಾನ್ಸ್ ಮಾಡೋಣ ಎಂದು ಹೇಳಿ ಬೆಡ್ ರೂಂ ಫೋಟೋ ಕಳುಹಿಸಿ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ವಿದ್ಯಾರ್ಥಿನಿಯರಿಗೆ ಮಂಚಕ್ಕೆ ಬಾರೇ ಎಂದು ಕರೆದು ಬೆಡ್ ರೂಂ ಫೋಟೋ ಕಳುಹಿಸುತ್ತಾರೆ. ಅಲ್ಲದೇ ವಿದ್ಯಾರ್ಥಿನಿಗೆ ಐದು ತಿಂಗಳಲ್ಲಿ ಬರೋಬ್ಬರಿ 900 ಮೆಸೇಜ್ ಮಾಡಿದ್ದಾರೆ. ಅಮರ್ಜಿತ್ ವಿದ್ಯಾರ್ಥಿನಿಯರಿಗೆ ಕಳುಹಿಸಿರುವ ಪೋಲಿ ವಾಟ್ಸಪ್ ಮಸೇಜ್ ಗಳನ್ನು ಕಳುಹಿಸಿರುವುದು ಪತ್ತೆಯಾಗಿದೆ.
ಲೈಂಗಿಕ ಕಿರುಕುಳ ಆರೋಪ ಅಮರ್ಜಿತ್ ಮೇಲೆ ಬರುತ್ತಿರುವುದು ಇದೇ ಮೊದಲಲ್ಲ. ವಿದ್ಯಾರ್ಥಿಗಳು 2017ರಲ್ಲಿ ದೂರು ಕೊಡುತ್ತಿದ್ದಂತೆ ಅಮರ್ಜಿತ್ ರಾಜೀನಾಮೆಯನ್ನು ಕೂಡ ಕೊಟ್ಟಿದ್ದರು.
ನವೆಂಬರ್‍ನಲ್ಲಿ ಅಮರ್ಜಿತ್ ಗುತ್ತಿಗೆ ಅವಧಿ ಮುಗಿದರೂ ಮತ್ತೆ ಮುಂದುವರಿಸಲು ಸರ್ಕಾರ ಆದೇಶ ನೀಡಿದೆ. ತನ್ನ ವಿರುದ್ಧ ಮಾತನಾಡಿದ ಯುವತಿಯರಿಗೆ ಅಮರ್ಜಿತ್ ಸಿಂಗ್ ಗೇಟ್‍ಪಾಸ್ ನೀಡುತ್ತಿದ್ದ ವಿಚಾರ ತಿಳಿದು ಭಯಗೊಂಡು ವಿದ್ಯಾರ್ಥಿನಿಯರು ಸುಮ್ಮನಾಗುತ್ತಿದ್ದರು ಎನ್ನುವ ವಿಚಾರ ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








