ಬೆಂಗಳೂರು
ಕಾನೂನು ಬಾಹಿರವಾಗಿ ಕಲ್ಯಾಣನಗರದ ಬಳಿ ನಡೆಸುತ್ತಿದ್ದ ಹುಕ್ಕಾ ಲಾಂಜ್ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಸಂಜಯ್ ನಗರದ ಚಿರಾಗ್ (25), ಅಚ್ಚುತ್ (28) ಬಂಧಿತ ಆರೋಪಿಗಳಾಗಿದ್ದಾರೆ ಅವರಿಂದ ಹುಕ್ಕಾ ಲಾಂಝ್ಗೆ ಬಳಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.
ಕಲ್ಯಾಣ ನಗರದ ಹೆಚ್.ಬಿ.ಆರ್ ಲೇಔಟ್ನ ಡ್ರಾಗ ಕೆಫೆಯಲ್ಲಿ ಹುಕ್ಕಾ ಲಾಂಜ್ಗಳನ್ನು ತೆರೆದು ಹುಕ್ಕಾ ದಂಧೆ ನಡೆಸುತ್ತಿದ್ದ ಮಾಹಿತಿಯಾಧರಿಸಿ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.ಆರೋಪಿಗಳು ಕಾನೂನುಬಾಹಿರವಾಗಿ ಹುಕ್ಕಾ ಲಾಂಜ್ ತೆರೆದು ವೃತ್ತಿಪರ ಕಾಲೇಜುಗಳ ವಿದ್ಯಾರ್ಥಿಗಳು, ಐಟಿ-ಬಿಟಿ ಕಂಪನಿಗಳ ಉದ್ಯೋಗಿಗಳಿಗೆ ಹುಕ್ಕಾ ಸೇದಲು ಅವಕಾಶ ಮಾಡಿಕೊಡುತ್ತಿದ್ದರು ಆರೋಪಿಗಳ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
