ಚೇಳೂರು
ರೈತರು ಯಾವುದೇ ಬೆಳೆಗಳನ್ನು ಬೆಳೆಯಬೇಕಾದರೆ ಸಾವಯವ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡು ಬೇಸಾಯ ಮಾಡಿದರೆ .ಉತ್ತಮ ಪೋಷಕಾಂಶವಿರುವ ಪಸಲು ದೊರೆಯುತ್ತದೆ ಎಂದು ಪ್ರಗತಿಪರ ರೈತ ಕೊಡಿಯಾಲದ ಕೆ.ಎಸ್. ರಮೇಶ್ ತಿಳಿಸಿದರು.
ಇವರು ಚೇಳೂರು ಹೋಬಳಿಯ ಕೊಡಿಯಾಲ ಗ್ರಾಮದಲಿ ಕೇಂದ್ರ ತೆಂಗು ಆಭಿವೃದ್ಧಿ ಹಾಗು ತೆಂಗು ಉತ್ಪಾದಕರ ಒಕ್ಕೂಟದವತಿಯಿಂದ ಸಂಘದ ಸದಸ್ಯರಿಗೆ ಬೇವಿನ ಇಂಡಿ.ಟ್ರೈಕೋಡರ್ಮ.ಬೋರಾಕ್ಸ್ ಉಚಿತ ವಿತರಣೆ ಕಾರ್ಯಕ್ರಮದಲಿ ಮಾತನಾಡುತ್ತಾ, ತೆಂಗು ಮತ್ತು ಅಡಕೆ ಬೆಳೆಗಳಿಗೆ ಬೇವಿನ ಇಂಡಿಯ ಜೊತೆಗೆ ಟ್ರೈಕೋಡರ್ಮಬೋರಾಕ್ಸ್ ಅನ್ನು ಮಿಶ್ರಣ ಮಾಡಿ ಗೀಡದ ಬುಡಕ್ಕೆ ಹಾಕಬೇಕು. ಇದರ ಜೊತೆಗೆ ಕೊಟ್ಟಿಗೆ ಗೊಬ್ಬರವನ್ನು ಸಹ ಗೀಡದಿಂದ ಮೂರು ಅಡಿಗಳ ಅಂತರದಲ್ಲಿ ಇರುವ ಮಣ್ಣಲ್ಲಿ ಮಿಶ್ರಣ ಮಾಡಿ ನೀರು ಹಾಯಿಸಬೇಕಾಗಿದೆ.
ಯಾವುದೇ ಬೆಳೆಗಳನ್ನು ಬೆಳೆಯುವಾಗ ನೀರು ಕಡಿಮೆ ಇದ್ದಾಗ ಹನಿ ನೀರಾವರಿ ಮತ್ತು ತುಂತುರು ನೀರಾವರಿ ಪದ್ದತಿಯನ್ನು ಅಳವಡಿಸಿ ಹೆಚ್ಚು ಗಿಡ-ಮರಗಳನ್ನು ಬೆಳೆಸಲು ಸಾಧ್ಯವಾಗುತ್ತದೆ.
ಗಿಡಕ್ಕೆ ಅಗತ್ಯವಾದ ನೀರನ್ನು ಮಾತ್ರ ನೀಡಬೇಕು ತೆಂಗು ಬೆಳೆಯುವ ರೈತರು ಒಕ್ಕೂಟಕವತಿಯಿಂದ ಮಾಹಿತಿಯನ್ನು ಪಡೆದು ಉತ್ತಮ ಬೆಳೆಯನ್ನು ಬೆಳೆಯ ಬಹುದು. ಜೊತೆಗೆ ರೈತರು ಒಬ್ಬರಿಂದ ಒಬ್ಬರು ಸಂಘಟಿತರಾದರೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಪಡೆಯಬಹುದು ಎಂದರು.ಒಕ್ಕೂಟದ ಅಧ್ಯಕ್ಷ ಎಸ್.ಎಂ ಶಿವಕುಮಾರ್, ಕಾರ್ಯದರ್ಶಿ ಸಿ,ಎಂ ಹರೀಶ್,ಕೆ.ಬಿ.ಸಿದ್ದಪ್ಪ, ರೇಣುಕಾರಾಧ್ಯ, ಸಿದ್ದಪ್ಪ, ಜಗದೀಶ್, ಹಾಗೂ ಇತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ