ಮಧುಗಿರಿ:
ಸಾರ್ವಜನಿಕರು ಸರಕಾರದ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಜೀವನಮಟ್ಟ ಸುಧಾರಿಸಿಕೊಳ್ಳಬೇಕೆಂದು ಶಾಸಕ ಎಂ.ವಿ.ವೀರಭದ್ರಯ್ಯ ಅಭಿಪ್ರಾಯ ಪಟ್ಟರು.
ಅವರು ಬುಧವಾರ ತಾಲ್ಲೂಕಿನ ಚಿನಕವಜ್ರ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಮತ್ತು ಸರ್ಕಾರಿ ಸೌಲಭ್ಯಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಂಚಾಯಿತಿಗೆ ಅವಶ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವೆ. ಸ್ಥಳೀಯವಾಗಿ ದೊರೆಯುವ ಎಲ್ಲಾ ಅಧಿಕಾರಿಗಳನ್ನು ಬಳಸಿಕೊಂಡು ನಾಗರಿಕರು ತಮಗೆ ಬೇಕಾದ ಸೌಲಭ್ಯ ಪಡೆದುಕೊಳ್ಳಿ ಎಂದು ತಿಳಿಸಿದರು.
ತಾಲ್ಲೂಕು ಸಂಪದ್ಭರಿತವಲ್ಲ. ಯಾವುದೇ ನೀರಾವರಿ ಸೌಲಭ್ಯ ಅಥವಾ ಬೃಹತ್ ಕಾರ್ಖಾನೆಗಳಿಲ್ಲ. ರೈತಾಪಿ ವರ್ಗವು ಸತತವಾದ ಬರಗಾಲಕ್ಕೆ ತುತ್ತಾಗುತ್ತಿದೆ. ಮುಂದಿನ ದಿನಗಳಲ್ಲಿ ಎತ್ತಿನಹೊಳೆಯ ನೀರು ಶೀಘ್ರದಲ್ಲಿ ತಾಲ್ಲೂಕಿನ 53 ಕೆರೆಗಳಿಗೆ ಹರಿಯಲಿದೆ ಎಂದರು.
ತಹಸೀಲ್ದಾರ್ ಎ.ತಿಪ್ಪೇಸ್ವಾಮಿ, ಕೃಷಿ ಅಧಿಕಾರಿ ಶಿವಣ್ಣ, ರುಕ್ಮಿಣಿ, ಗ್ರಾಪಂ. ಅಧ್ಯಕ್ಷೆ ನಾಗಮ್ಮ, ಉಪಾಧ್ಯಕ್ಷೆ ಗಿರಿಜಾ, ಸದಸ್ಯರಾದ ಬಸವರಾಜು, ಡಿ.ಚಿತ್ತಯ್ಯ, ಸಿದ್ದಲಿಂಗಮೂರ್ತಿ, ಮುಖಂಡರಾದ ತುಂಗೋಟಿ ರಾಮಣ್ಣ, ಕಾಮರಾಜು, ಕಾಟಯ್ಯ, ಪಿಡಿಓ ಉತ್ತಮ್ ಹಾಗೂ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
