ಫೆಬ್ರವರಿಯಲ್ಲಿ ಲೀಫಾ ರಾಷ್ಟ್ರೀಯ ಸಮಾವೇಶ

ಚಿತ್ರದುರ್ಗ:

       ಲೀಡ್ ಇಂಡಿಯಾ ಪಬ್ಲಿಷರ್ ಅಸೋಸಿಯೆಷನ್ ವತಿಯಿಂದ ಫೆಬ್ರವರಿ ತಿಂಗಳಿನಲ್ಲಿ ಲೀಫಾ ರಾಷ್ಟ್ರೀಯ ಸಮೇಳನ ಸಮಾವೇಶ ನಡೆಸಲು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಗಿದೆ ಎಂದು ಲೀಫಾ ರಾಜ್ಯಾಧ್ಯಕ್ಷ ಎಂ.ಎ. ಮಲಬವಾಡಿಯವರು ಸಭೆಗೆ ತಿಳಿಸಿದರು.

       ಖಾಸಗಿ ಹೋಟೆಲ್ ಒಂದರಲ್ಲಿ ಸಮಾವೇಶಗೊಂಡಿದ್ದ ಲೀಫಾ ಸಂಘಟನೆಯ ಕಾರ್ಯಕರ್ತರು ಸುದೀರ್ಘವಾಗಿ ಚರ್ಚಿಸಿ ರಾಷ್ಟ್ರೀಯ ಪತ್ರಿಕಾ ಮತ್ತು ಮಾದ್ಯಮಗಳ ರಾಷ್ಟ್ರೀಯ ಸಮಾವೇಶ ನಡೆಸುವ ಬಗ್ಗೆ ಚರ್ಚಿಸಿದ ಪದಾಧಿಕಾರಿಗಳು ಚಿತ್ರದುರ್ಗದಲ್ಲಿ ಫೆಬ್ರವರಿಯಲ್ಲಿ ರಾಷ್ಟ್ರೀಯ ಸಮಾವೇಶ ನಡೆಸಲು ನಿರ್ಧರಿಸಲಾಯಿತು ಎಂದು ಹೇಳಿದರು. \

        ಪತ್ರಿಕಾ ಮತ್ತು ಮಾದ್ಯಮಗಳ ರಾಷ್ಟ್ರೀಯ ಸಮಾವೇಶದಲ್ಲಿ ದೇಶದಲ್ಲಿ ಪತ್ರಕರ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹಲ್ಲೆ, ಹತ್ಯೆಯಂತಹ ಘಟನೆಗಳನ್ನು ಪ್ರಮುಖವಾಗಿ ಚರ್ಚಿಸಿ ಪತ್ರಕರ್ತರ ರಕ್ಷಣೆಗಾಗಿ ಸುರಕ್ಷಾ ಕಾನೂನನ್ನು ದೇಶಾದ್ಯಂತ ಜಾರಿಮಾಡುವಂತೆ ಸಮಾವೇಶದಲ್ಲಿ ಒತ್ತಾಯಿಸಲಾಗುತ್ತದೆ ಎಂದು ಹೇಳಿದರು.

        ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಿದ ಲೀಫಾ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಹಾಗೂ ಮಹಾರಾಷ್ಟ್ರದ ಲೀಫಾ ಅಧ್ಯಕ್ಷ ಜಯಪಾಲ್ ಪರಶುರಾಮ್ ಪಾಟೀಲ್ ಮಾತನಾಡಿ ಮಹರಾಷ್ಟ್ರದಲ್ಲಿ ಈಗಾಗಲೇ ಪತ್ರಕರ್ತರ ರಕ್ಷಣೆಗಾಗಿ ಸುರಕ್ಷ ಕಾನೂನನ್ನು ಜಾರಿಮಾಡಿಸಲಾಗಿದ್ದು, ಹಾಗೆಯೇ ದೇಶಾದ್ಯಂತ ಈ ಕಾನೂನು ಅನುಷ್ಠಾನಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲು ಚಿತ್ರದುರ್ಗದ ರಾಷ್ಟ್ರೀಯ ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

         ರಾಷ್ಟ್ರೀಯ ಸಮಾವೇಶಕ್ಕೆ ಉಪರಾಷ್ಟ್ರಪತಿ, ಕೇಂದ್ರ ಸಚಿವರು, ಆರ್.ಎನ್.ಐ. ರಾಷ್ಟ್ರೀಯ ಅಧಿಕಾರಿ ಮತ್ತು ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ಹಲವು ಸಚಿವರನ್ನು ಅಹ್ವಾನಿಸುವಂತೆ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದರು.

       ಚಿತ್ರದುರ್ಗ ಪ್ರಮುಖ ಐತಿಹಾಸಿಕ ಸ್ಥಳವಾಗಿರುವುದರಿಂದ ಮತ್ತು ರಾಷ್ಟ್ರ ಸಮ್ಮೇಳನ ನಡೆಸಲು ಸೂಕ್ತವಾದ್ದರಿಂದ ಇಲ್ಲಿ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

         ಪೂರ್ವಭಾವಿ ಸಮಾರಂಭದಲ್ಲಿ ಲೀಫಾ ಸಂಘದ ಜಿಲ್ಲಾಧ್ಯಕ್ಷ ಟಿ.ರವಿ, ಪ್ರಧಾನ ಕಾರ್ಯದರ್ಶಿ ಎಂ.ಹನೀಫ್, ರಾಜ್ಯಕಾರ್ಯಾಧಕ್ಷಯ ಮೈಲನಹಳ್ಳಿ ಡಿ.ತಿಪ್ಪೇಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿಂದೇ, ರಾಯಚೂರಿನ ಡಾ.ಜಲಾಲುದ್ದೀನ್, ಸರಸ್ವತಿ, ಬೆಂಗಳೂರಿನ ದೇವಿ, ರಾಮನಗರದ ಒಡೆಯರ್, ಬೆಂಗಳೂರಿನ ರಾಧಾಕೃಷ್ಣ, ದಾವಣಗೆರೆಯ ಭಾರಿ, ಚಳ್ಳಕೆರೆ ಶಿವಕುಮಾರ್, ದ್ಯಾಮಣ್ಣ, ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link