ಪ.ನಾ.ಹಳ್ಳಿ
ಕನಕದಾಸರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿರಲಿಲ್ಲ. ಜಾತಿ ಭೇದ ದೂರ ಮಾಡಿ ಸಮಾಜದಲ್ಲಿ ಸರ್ವರೂ ಸಮಾನರು ಎಂಬ ಸಂದೇಶ ಜಗತ್ತಿಗೆ ಕೊಟ್ಟ ಮಹಾನ್ ಕೀರ್ತಿನಕಾರ ಕನಕದಾಸರ ಆದರ್ಶ ಯುವ ಪೀಳಿಗೆಗೆ ಮಾದರಿ ಎಂದು ಬಿಜೆಪಿ ಮುಖಂಡ ಬಿ.ಕೆ.ಮಂಜುನಾಥ್ ಹೇಳಿದರು.
ಶಿರಾ ತಾಲ್ಲೂಕಿನ ವೀರಗಾನಹಳ್ಳಿ ಗ್ರಾಮದ ಕನಕ ಸ್ನೇಹ ಜೀವಿ ಬಳಗ ಭಾನುವಾರ ಆಯೋಜಿಸಿದ್ದ ಶ್ರೀಕನಕ ದಾಸರ 531 ನೆ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನಕದಾಸರ ಕೀರ್ತನೆ ಮತ್ತುತತ್ವಗಳನ್ನು ಸರ್ಕಾರ ಜಗತ್ತಿಗೆ ಸಾರುವಂತಹ ಕಾರ್ಯ ಮಾಡುವ ಮೂಲಕ ಕನ್ನಡ ನಾಡಿನ ಸಂಸ್ಕತಿಕ ಪರಂಪರೆ ಮತ್ತಷ್ಟು ಶ್ರೀಮಂತಗೊಳ್ಳುವಂತೆ ಮಾಡಬೇಕಿದೆ ಎಂದರು.
ಮುಖಂಡರಾದ ಬೀರಪ್ಪನಾಗಾವರ, ಚೇತನ್, ತಾಪಂ ಮಾಜಿ ಸದಸ್ಯ ಕೆ.ಎಸ್.ನಾಗರಾಜು, ಗ್ರಾಪಂ ಸದಸ್ಯರಾದ ವಿ.ಆರ್.ಈಶ್ವರಪ್ಪ, ಆಂಜನಪ್ಪ, ಲಿಂಗರಾಜು, ಭಾಗ್ಯಮ್ಮಈಶ್ವರಪ್ಪ, ಕೆ.ಪಿ.ಪುಟ್ಟರಾಜು, ಲಕ್ಷ್ಮೀದೇವಮ್ಮ, ಸೇರಿದಂತೆ ಕನಕ ಸ್ನೇಹ ಜೀವಿ ಗೆಳೆಯರ ಬಳಗದ ನೂರಾರು ಯುವಕರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ