ಚಳ್ಳಕೆರೆ
ಸಾರ್ವಜನಿಕರಿಂದ ಕಂದಾಯ ಹಾಗೂ ಮನೆಕಂದಾಯ ವಸೂಲಾತಿಯಲ್ಲಿ ಇಲ್ಲಿನ ನಗರಸಭೆ ನಡೆಸಿದ ಎರಡು ದಿನಗಳ ವಸೂಲಾತಿ ಅಂದೋಲನ ಯಶಸ್ಸಿಯಾಗಿದೆ. ಎರಡು ದಿನಗಳಲ್ಲಿ 5.30 ಲಕ್ಷ ತೆರಿಗೆ ಪಾವತಿಸಿದ ಎಲ್ಲಾ ನಾಗರೀಕರನ್ನು ಅಭಿನಂದಿಸುವುದಾಗಿ ಪೌರಾಯುಕ್ತ ಜೆ.ಟಿ.ಹನುಮಂತರಾಜು ತಿಳಿಸಿದ್ಧಾರೆ.
ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ ಅವರು, ಇಲ್ಲಿನ 10 ಮತ್ತು 11ನೇ ವ್ಯಾಪ್ತಿಯಲ್ಲಿ ಶನಿವಾರ ಮತ್ತು ಭಾನುವಾರ ಎರಡೂ ದಿನಗಳ ಕಾಲ ಸರ್ಕಾರಿ ರಜೆ ಹಿನ್ನೆಲೆಯಲ್ಲಿ ಕಂದಾಯ ಪಾವತಿಯ ಅಂದೋಲವನ್ನು ಹಮ್ಮಿಕೊಂಡಿದ್ದು, ನಗರದ ನಾಗರೀಕರು ನಿರೀಕ್ಷೆಗೂ ಮೀರಿ ಹೆಚ್ಚು ಸಂತಸವನ್ನು ವ್ಯಕ್ತ ಪಡಿಸಿದ ಕಂದಾಯವನ್ನು ಪಾವತಿಸಿದ್ದಾರೆಂದು ಅವರು ತಿಳಿಸಿದ್ಧಾರೆ. ಪ್ರಾರಂಭದ ದಿನದಂದು 1.50 ಲಕ್ಷ ಪಾವತಿಸಿದ ನಾಗರೀಕರು ಎರಡನೇ ದಿನವಾದ ಭಾನುವಾರ 3.80 ಲಕ್ಷ ಪಾವತಿಸಿದ್ದು, ಒಟ್ಟು ಈ ಅಂದೋಲನ 5.30 ಲಕ್ಷ ತೆರಿಗೆ ಹಣ ವಸೂಲಾಗಿದೆ ಎಂದಿದ್ಧಾರೆ.
ಮಾಜಿ ಸೈನಿಕ ಎಸ್.ಟಿ.ಬಸವರೆಡ್ಡಿ ತಮ್ಮ ಆಸ್ಪತ್ರೆ ಹಾಗೂ ಮನೆ ಕಂದಾಯ ಒಟ್ಟು 1.20 ಲಕ್ಷ ಹಣವನ್ನು ಪಾವತಿಸುವ ಮೂಲಕ ನಗರಸಭೆಯ ಕಾರ್ಯಕ್ಕೆ ಯಶಸ್ಸು ಹಾರೈಸಿದ್ದಾರೆ. ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಎಸ್.ಜಯಣ್ಣ, ಐಸಿಐಸಿಐ ಬ್ಯಾಂಕ್ ವ್ಯವಸ್ಥಾಪಕ ಜಿ.ಶ್ರೀನಿವಾಸ್, ಕಂದಾಯಾಧಿಕಾರಿ ವಿ.ಈರಮ್ಮ, ಸಮುದಾಯ ಅಧಿಕಾರಿ ಪಿ.ಪಾಲಯ್ಯ, ಹಿರಿಯ ಆರೋಗ್ಯ ನಿರೀಕ್ಷಕ ಮಹಲಿಂಗಪ್ಪ, ನಗರಸಭಾ ಸಿಬ್ಬಂದಿಯಾದ ಮಂಜುನಾಥ, ತಿಪ್ಪೇಸ್ವಾಮಿ, ಎಲ್.ಮಂಜು ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








