ದೇವರ ಅವಹೇಳನಕಾರರಿಗೆ ತಕ್ಕ ಉತ್ತರ ನೀಡಿ

ದಾವಣಗೆರೆ:
 
       ಹಿಂದೂ ಧರ್ಮ ಗ್ರಂಥ ಹಾಗೂ ದೇವರುಗಳ ಬಗ್ಗೆ ಅಹವೇಳನ ಮಾಡುವವರಿಗೆ ತಕ್ಕ ಉತ್ತರ ನೀಡಬೇಕೆಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್‍ನ  ಶಿವಮೊಗ್ಗ ಜಿಲ್ಲಾ ಮುಖ್ಯಸ್ಥೆ ರಂಜಿನಿ ದತ್ತಾತ್ರಿ ಕರೆ ನೀಡಿದರು.
       ನಗರದ ರೋಟರಿ ಬಾಲ ಭವನದಲ್ಲಿ ಭಾನುವಾರ ನಡೆದ ಅಖೀಲ ಭಾರತೀಯ ಸಾಹಿತ್ಯ ಪರಿಷತ್‍ನ ಜಿಲ್ಲಾ ಘಟಕ ಉದ್ಘಾಟನೆ ಮತ್ತು ಯಕ್ಷಲೋಕದ ಮಾಸದ ಬಣ್ಣ ಕೃತಿ ವಿಮರ್ಶೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
      ನಾನು ಅಖೀಲ ಕರ್ನಾಟಕ ಸಾಹಿತ್ಯ ಪರಿಷತ್‍ನ ಜಿಲ್ಲಾ ಘಟಕದ ಸಕ್ರಿಯ ಕಾರ್ಯಕರ್ತೆಯಾಗಿಯೂ ಕಾರ್ಯನಿರ್ವಹಿಸಿದ್ದೇನೆ. ರಾಯಚೂರು ಮತ್ತು ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲೂ ಭಾಗವಹಿಸಿದ್ದೆ. ಈ ಎರಡೂ ಸಾಹಿತ್ಯ ಸಮ್ಮೇಳನದಲ್ಲಿ ಗಮನಿಸಿದ ಅಂಶಗಳೆಂದರೆ, ಹಿಂದೂ ಧರ್ಮ ಗ್ರಂಥದ ಆಚಾರ, ವಿಚಾರ ಮತ್ತು ಹಿಂದೂ ದೇವರುಗಳಾದ ಗಣಪತಿ, ಗೌರಿ, ಪರಮೇಶ್ವರರ ಬಗ್ಗೆ ಅವಹೇಳನ ಮಾಡುವ ಮನಸ್ಸುಗಳಿರುವುದು ಕಂಡು ಬಂದಿದ್ದು, ಈ ಮನಸ್ಸುಗಳಿಗೆ ತಕ್ಕ ಉತ್ತರ ಕೊಡಲು ನಮ್ಮ ಧರ್ಮ ಗ್ರಂಥ ಸೇರಿದಂತೆ ಅಗಾದವಾಗಿರುವ ಸಾಹಿತ್ಯವನ್ನು ಓದಿ ಸಿದ್ಧರಾಗಬೇಕೆಂದು ಕಿವಿಮಾತು ಹೇಳಿದರು.
       ಇತ್ತೀಚಿನ ದಿನಗಳಲ್ಲಿ ನಾವು ಓದುವುದರಲ್ಲಿ ಎಡವುತ್ತಿದ್ದೇವೆ. ಮಕ್ಕಳಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ನೀಡುವ ಬದಲು, ಮೊಬೈಲ್, ಆಟದ ಮೊಬೈಲ್‍ಗಳನ್ನು ಕೊಡುವ ಮೂಲಕ ಮಕ್ಕಳನ್ನು ಟಿವಿ, ಮೊಬೈಲ್‍ಗಳ ದಾಸರನ್ನಾಗಿ ಮಾಡುತ್ತಿರುವುದು ಸರಿಯಲ್ಲ. ಇದರ ಬದಲು ಮಕ್ಕಳಲ್ಲಿ ದಿನ ಪತ್ರಿಕೆ ಮತ್ತು ಒಳ್ಳೆಯ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸುವತ್ತ ಪೋಷಕರು ಗಮನ ಹರಿಸಬೇಕೆಂದು ಸಲಹೆ ನೀಡಿದರು.
        ಇತ್ತೀಚಿನ ದಿನಗಳಲ್ಲಿ ತಂದೆ-ತಾಯಂದಿರು ಇಲ್ಲದ ಚಿಕ್ಕ ಮತ್ತು ವಿಸ್ತತ ಕುಟುಂಬಗಳ ಸಂಖ್ಯೆ ಹೆಚ್ಚಾಗುತ್ತಿದೆ. ತಾಯಿಯ ನಂದಾ ದೀಪ, ಯಜಮಾನನ ದಕ್ಷತೆಯ ದೀಪ, ಅತಿಥಿ ಅಭಾಣೀತರ ದೀಪ, ನಗುವ ಮಕ್ಕಳ ಕಲರವದ ದೀಪ ಹಾಗೂ ದೇವರ ಮುಂದೆ ಬೆಳಗುವ ನಂದ ದೀಪ ಈ ಪಂಚ ದೀಪಗಳಿಲ್ಲದ ಮನೆಗಳಲ್ಲಿ ಎಂದೂ ಸಮೃದ್ಧತೆ ಇರಲಾರದು ಎಂದರು.
          ಪ್ರಸ್ತುತ ಮಕ್ಕಳನ್ನು ಪಠ್ಯಕ್ಕೆ ಸೀಮಿತ ಮಾಡುವ ಮೂಲಕ ಅಂಕ ಪಡೆಯುವ ಯಂತ್ರಗಳನ್ನಾಗಿ ಮಕ್ಕಳನ್ನು ಮಾಡಿದ್ದೇವೆ. ಮಕ್ಕಳಿಗೆ ಶಿಕ್ಷಣ ಕೊಡಿಸುವುದರ ಜತೆಗೆ ಅವರಲ್ಲಿ ಮಾನವೀಯ ಮೌಲ್ಯಗಳನ್ನು ಸಹ ಬೆಳೆಸಬೇಕೆಂದು ಸಲಹೆ ನೀಡಿದರು.
 
         ಕಲಾ ಕುಂಚ ಪ್ರತಿಷ್ಠಾನದ ಅಧ್ಯಕ್ಷ ಗಣೇಶ್ ಶೆಣೈ ಯಕ್ಷಲೋಕದ ಮಾಸದ ಬಣ್ಣ ಕೃತಿಯನ್ನು ವಿಮರ್ಶಿಸಿದರು.  ಅಖಿಲ ಭಾರತೀಯ ಸಾಹಿತ್ಯ ಪರಿಷತ್‍ನ ಪ್ರಧಾನ ಕಾರ್ಯದರ್ಶಿ ರಘುನಂದನ್ ಭಟ್ ನರೂರ ನೂತನ ಜಿಲ್ಲಾ ಘಟಕವನ್ನು ಉದ್ಘಾಟಿಸುವರು. ಸಾಹಿತಿ, ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಕೆ. ಹಂಪಣ್ಣ  ಅಧ್ಯಕ್ಷತೆ  ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಸಂಚಾಲಕ ಅಜಯ್ ಭಾರತೀಯ, ಜಿಲ್ಲಾ ಪ್ರಧಾನ ಕರ್ಯದರ್ಶಿ ಡಾ. ಸುಧಾಕರ ಹೊಸಳ್ಳಿ ಮತ್ತಿತರರು ಉಪಸ್ಥಿತರಿದ್ದರು.
  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link