ಚಿತ್ರದುರ್ಗ:
ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಭಾನುವಾರದಂದು ಕಾರ್ಯಕರ್ತರು ಹಾಗೂ ಪಕ್ಷದ ವಿವಿಧ ಘಟಕಗಳ ಮುಖಂಡರು ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಗೂ ಸಮೀಪದ ತೀಕ್ಷ್ಣ ಅಂಧರ ಶಾಲೆ ಮಕ್ಕಳಿಗೆ ಸಿಹಿ ಹಂಚಿದರು.
ಯುವ ಕಾಂಗ್ರೆಸ್‍ವತಿಯಿಂದ ತೀಕ್ಷ್ಣ ಅಂಧರ ಪುನಶ್ವೇತನ ಸಂಸ್ಥೆಯಲ್ಲಿ ಮಕ್ಕಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಸೋನಿಯಾ ಗಾಂಧಿ ಅವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಧುಪಾಲೇಗೌಡ, ಉಪಾಧ್ಯಕ್ಷ ಕರಿಯಪ್ಪ, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೈಯದ್ ಖುದ್ದೂಸ್ ಹಾಗೂ ಇನ್ನಿತರರು ಹಾಜರಿದ್ದರು
ಆಸ್ಪತ್ರೆಯಲ್ಲಿ ಹಣ್ಣು ವಿತರಣೆ
ಎ.ಐ.ಸಿ.ಸಿ. ವರಿಷ್ಟೆ ಸೋನಿಯಾಗಾಂಧಿರವರ 72 ನೇ ಹುಟ್ಟುಹಬ್ಬದ ಅಂಗವಾಗಿ ಕೆ.ಪಿ.ಸಿ.ಸಿ.ರಾಜ್ಯ ಪ್ರಧಾನ ಕಾರ್ಯದರ್ಶಿ ಮುನಿರಾ ಎ.ಮಕಾಂದಾರ್ ಭಾನುವಾರ ಜಿಲ್ಲಾ ಆಸ್ಪತ್ರೆ ಹೆರಿಗೆ ವಿಭಾಗದಲ್ಲಿ ಬಾಣಂತಿಯರಿಗೆ ಹಣ್ಣುಗಳನ್ನು ವಿತರಿಸಿದರು.
ಹಣ್ಣುಗಳನ್ನು ವಿತರಿಸಿ ಮಾತನಾಡಿದ ಮುನಿರಾ ಎ.ಮಕಾಂದಾರ್ ದೇಶದ ಅತ್ಯುನ್ನತ ಪ್ರಧಾನಿ ಹುದ್ದೆಯನ್ನು ಬೇಡವೆಂದು ದೇಶ ಸೇವೆಗಾಗಿ ಮುಡುಪಾಗಿರುವ ಸೋನಿಯಾಗಾಂಧಿರವರಲ್ಲಿರುವ ಪಕ್ಷ ನಿಷ್ಟೆ ಮತ್ತು ದೇಶಭಕ್ತಿಯನ್ನು ಕಾಂಗ್ರೆಸ್‍ನವರು ಮೈಗೂಡಿಸಿಕೊಂಡು ಮುಂಬರುವ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಕೋಮುವಾದಿ ಬಿಜೆಪಿ.ಯನ್ನು ತೊಲಗಿಸುವಂತೆ ಹೇಳಿದರು.
ಇಂದಿರಾಗಾಂಧಿ ಕುಟುಂಬ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದೆ. ಇಂದಿರಾಗಾಂಧಿ, ರಾಜೀವ್‍ಗಾಂಧಿರವರ ಮಾರ್ಗದಲ್ಲಿಯೇ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ಸೋನಿಯಾಗಾಂಧಿರವರ ಕೈಬಲಪಡಿಸಿ ಮುಂದೆ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿ ಕಾರ್ಯಕರ್ತರು ಹಾಗೂ ಮುಖಂಡರುಗಳ ಮೇಲಿದೆ ಎಂದರು.
ಕರ್ನಾಟಕ ಪ್ರದೇಶ ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯೆ ಮೋಕ್ಷರುದ್ರಸ್ವಾಮಿ ಮಾತನಾಡಿ ಪ್ರಧಾನಿ ಹುದ್ದೆಯನ್ನು ಬೇಡವೆಂದು ತ್ಯಜಿಸಿ ದೇಶ ಸೇವೆಗಾಗಿ ನಿಂತಿರುವ ಎ.ಐ.ಸಿ.ಸಿ.ಅಧಿನಾಯಕಿ ಸೋನಿಯಾಗಾಂಧಿರವರ ಆದರ್ಶ, ವಿಚಾರ ಧಾರೆಗಳ ಮೂಲಕ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಿ ಮುಂದಿನ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ತರಬೇಕು ಎಂದು ತಿಳಿಸಿದರು.ಎ.ಹೆಚ್.ಮಕಾಂದಾರ್, ಕು.ನೇಹ, ಮಹಿಳಾ ವೈದ್ಯೆ ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








