ನ್ಯೂಯಾರ್ಕ್:
ಇಡೀಯ ವಿಶ್ವದಲ್ಲಿ ಈಗ ಒಂದೇ ನಿನಾದ ಪಾಕಿಸ್ತಾನ ಭಯೋತ್ಪಾದಕರಿಗೆ ನೆರವು ನೀಡಬಾರದು ಮತ್ತು ನಿಗ್ರಹದಲ್ಲಿ ಬೇರೆ ದೇಶಗಳಿಗೆ ಸಹಾಯ ಮಾಡಬೇಕು ಮತ್ತು ಪಾಕಿಸ್ತಾನ ಮಿತ್ರ ರಾಷ್ಟ್ರಗಳ ಸೈನಿಕರನ್ನು ಕೊಲ್ಲುವ ತನ್ನ ನೀಚ ಕೃತ್ಯವನ್ನು ಮುಂದುವರಿಸಿರುವುದು ಆಕ್ಷೇಪಾರ್ಹ ಎಂದು ಅಮೇರಿಕ ವಿಶ್ವಸಂಸ್ಥೆ ರಾಯಭಾರಿ ನಿಕ್ಕಿ ಹ್ಯಾಲೆ ಅಭಿಪ್ರಾಯ ಪಟ್ಟಿದ್ದಾರೆ ಮತ್ತು ಇಂತಹ ನೀಚ ಪಾಕಿಸ್ತಾನಕ್ಕೆ ಯಾವ ದೇಶವೂ ಧನ ಸಹಾಯ ಮಾಡಬಾರದು ಮತ್ತು ಯಾವುದೇ ರೀತಿಯ ನೆರವೂ ಸಹ ನೀಡಬಾರದು ಒಂಟಿಯಾದಾಗಲೆ ಅಂತಹ ರಾಷ್ಟ್ರಗಲಿಗೆ ಬುದ್ದಿ ಬರುವುದು ಎಂದು ಕಿಡಿಕಾರಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಪಾಕಿಸ್ತಾನ ತಾನು ಎಸಗಿರುವಂತಹ ಕೃತ್ಯಕ್ಕೆ ಸರಿಯಾದ ಮತ್ತು ಸಮಂಜಸವಾದ ಸ್ಪಷ್ಟನೆ ನೀಡುವವರೆಗೂ ಅಮೆರಿಕಾ ಆ ದೇಶಕ್ಕೆ ಒಂದೇ ಒಂದು ಡಾಲರ್ ನೆರವನ್ನೂ ನೀಡಬಾರದು ಎಂದು ವಿಶ್ವಸಂಸ್ಥೆಯಲ್ಲಿ ಅಮೆರಿಕಾ ರಾಯಭಾರಿಯಾಗಿರುವ ನಿಕ್ಕಿ ಹ್ಯಾಲೆ ಹೇಳಿದ್ದಾರೆ.
ಅಮೆರಿಕಾ ಸಂಯುಕ್ತ ರಾಷ್ಟ್ರಗಳ ಒಕ್ಕೂಟದ ಅಧ್ಯಕ್ಷರ ಸಂಪುಟದಲ್ಲಿ ಕ್ಯಾಬಿನೆಟ್ ಸ್ಥಾನಕ್ಕೆ ನೇಮಕವಾದ ಮೊದಲ ಭಾರತೀಯ-ಅಮೆರಿಕನ್ ಆಗಿರುವ ನಿಕ್ಕಿ ಹ್ಯಾಲೆ ಅಮೆರಿಕಕ್ಕೆ ಹಾನಿಯನ್ನುಂಟು ಮಾಡುವ ಯಾವ ದೇಶಕ್ಕೂ ಹಣದ ನೆರವು ನೀಡುವ ಅಗತ್ಯವಿಲ್ಲ ಎಂದು ಹೇಲುವ ಮೂಲಕ ಪಾಕಿಸ್ತಾನಕ್ಕೆ ಭವಿಷ್ಯದ ದರ್ಶನ ಮಾಡಿಸಿದ್ದಾರೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








