ಶ್ರುತಿ ಹರಿಹರನ್ ಮೀ ಟೂ ಪ್ರಕರಣಕ್ಕೆ ಮತ್ತೊಂದು ಕಂಟಕ…!!!

ಬೆಂಗಳೂರು

        ಚಿತ್ರನಟಿ ಶ್ರುತಿ ಹರಿಹರನ್ ಮೀ ಟೂ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿರುವ ಕಬ್ಬನ್ ಪಾರ್ಕ್ ಪೊಲೀಸರಿಗೆ ಆರೋಪಪಟ್ಟಿ(ಚಾರ್ಜ್ ಶೀಟ್) ಸಲ್ಲಿಸಲು ಸಾಕ್ಷಿಗಳ ಕೊರತೆ ಉಂಟಾಗಿದೆ

       ಪ್ರಕರಣ ದಾಖಲಾಗಿ 90 ದಿನಗಳ ಒಳಗೆ ಚಾರ್ಜ್‍ಶೀಟ್ ಸಲ್ಲಿಸಬೇಕಾದದ್ದು ನಿಯಮವಾಗಿದೆ. ಆದರೆ ಚಾರ್ಜ್‍ಶೀಟ್ ದಾಖಲಿಸಲು ಸಜ್ಜಾಗಿರುವ ಪೆÇಲೀಸರಿಗೆ ಪ್ರಕರಣಕ್ಕೆ ಬೇಕಾದ ಸೂಕ್ತ ಸಾಕ್ಷಿಗಳ ಕೊರತೆ ಉಂಟಾಗಿದೆ. ಇಲ್ಲಿಯವರೆಗೆ ಸುಮಾರು 40 ಸಾಕ್ಷಿಗಳನ್ನು ಚಾರ್ಜ್‍ಶೀಟ್‍ನಲ್ಲಿ ನಮೂದಿಸಲು ಪೆÇಲೀಸರು ನಿರ್ಧರಿಸಿದ್ದರು. ಆದರೆ 40 ಸಾಕ್ಷಿಗಳಿರಲಿ 10 ಸಾಕ್ಷಿಗಳನ್ನು ಒದಗಿಸಲು ಪೆÇಲೀಸರಿಗೆ ಕಷ್ಟವಾಗಿದೆ

       ಇನ್ನು ಹೆಚ್ಚಾಗಿ ಶ್ರುತಿ ಹರಿಹರನ್ ಕೊಟ್ಟ ದೂರು ಹೈ  ಪ್ರಕರಣವಾಗಿರುವುದರಿಂದ ನಟ ಅರ್ಜುನ್ ಸರ್ಜಾ ವಿರುದ್ಧವಾಗಿ ನಿಲ್ಲಲು ಸಾಕ್ಷಿದಾರರು ಹೆದರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚಾರ್ಜ್‍ಶೀಟ್ ಸಲ್ಲಿಸಲು ಬೇಕಾದ ಯಾವುದೇ ಬಲವಾದ ಸಾಕ್ಷಿ ಸಿಗುತ್ತಿಲ್ಲವೆಂದು ತಿಳಿದುಬಂದಿದೆ.

         ಅಲ್ಲದೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶ್ರುತಿ ಯಾವುದೇ ಬಲವಾದ ಸಾಕ್ಷಿ ಕೂಡಾ ನೀಡಿಲ್ಲ. ಜೊತೆಗೆ ಪ್ರಕರಣ ನಡೆದು 2 ವರ್ಷಗಳ ನಂತರ ಶ್ರುತಿ ದೂರು ದಾಖಲಿಸಿದ್ದಾರೆ.ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಿತ್ರೀಕರಣ ನಡೆದ ಸ್ಥಳದ ಮಹಜರು ಕೂಡಾ ನಡೆಸಲಾಗಿದೆ. ಆದರೆ ಚಿತ್ರೀಕರಣದಲ್ಲಿ ಏನಾಗಿತ್ತು, ಅಲ್ಲಿ ಭಾಗಿಯಾಗಿದ್ದ ಸಹನಟರು ಇದರ ಬಗ್ಗೆ ಏನು ಹೇಳುತ್ತಾರೆ..? ಈ ಎಲ್ಲಾ ಆಯಾಮದಲ್ಲೂ ಸಾಕ್ಷಿಗಳ ಹುಡುಕಾಟದಲ್ಲಿದ್ದ ಪೊಲೀಸರಿಗೆ ಹಿನ್ನಡೆ ಉಂಟಾಗಿದೆ ಎಂದು ಹೇಳಲಾಗಿದ್ದು ಆದರೂ ಆರೋಪಪಟ್ಟಿ ಸಲ್ಲಿಸಲು ತಯಾರಿ ನಡೆಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link