ಚೆನ್ನೈ :
ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಚೆನ್ನೈನ ರೇಲಾ ಆಸ್ಪತ್ರೆಯಿಂದ ಶೀಘ್ರದಲ್ಲಿಯೇ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.
ಇಂದು ಶ್ರೀಗಳನ್ನು ಸ್ಪೆಷಲ್ ವಾರ್ಡ್‍ಗೆ ಶಿಫ್ಟ್ ಮಾಡುವ ಕುರಿತು ವೈದ್ಯ ಡಾ.ಪರಮೇಶ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಶ್ರೀಗಳ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆಯಾಗಿದೆ. ಬುಧವಾರ ರಾತ್ರಿಯಿಂದ ಇಡ್ಲಿ ಹಾಗೂ ಬೇಯಿಸಿದ ಬೇಳೆಯನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಕಿರಿಯ ಶ್ರೀಗಳ ಮನವಿ:
ಶ್ರೀಗಳನ್ನು ನೋಡಲು ಯಾರೂ ಬರಬೇಡಿ. ಮತ್ತೊಮ್ಮೆ ಶ್ರೀಗಳಿಗೆ ಸೋಂಕಾದರೆ ಕಷ್ಟದ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಆದ್ದರಿಂದಲೇ ಈ ನಿರ್ಣಯ ಕೈಗೊಳ್ಳಲಾಗಿದೆ. ಮುಂದಿನ ವಾರದಿಂದ ಭಕ್ತರು ಶ್ರೀಗಳನ್ನು ಮಠದಲ್ಲೇ ನೋಡಬಹುದು. ಶ್ರೀಗಳನ್ನು ನೋಡಲು ಬರೋರ ಸಂಖ್ಯೆ ಹೆಚ್ಚಾದರೆ ಅಕ್ಕಪಕ್ಕದ ರೋಗಿಗಳಿಗೂ ತೊಂದರೆಯಾಗುತ್ತೆ. ಹೀಗಾಗಿ ಯಾರೂ ಬರಬೇಡಿ ಎಂದು ಸಿದ್ದಗಂಗಾ ಮಠದ ಕಿರಿಯ ಶ್ರೀಗಳು ಮನವಿ ಮಾಡಿದ್ದಾರೆ.
ಅಲ್ಲದೇ ಶ್ರೀಗಳನ್ನು ನೋಡಲು ಬರುವ ಗಣ್ಯರ ಜೊತೆ ಶ್ರೀಗಳು ಹೆಚ್ಚು ಮಾತನಾಡುವ ಹಾಗೂ ಅವರಿಗೆ ಸೋಂಕು ತಗುಲುವ ಸಾಧ್ಯತೆ ಇರುವುದರಿಂದ ವಾರ್ಡ್ ಗೆ ಶಿಫ್ಟ್ ಮಾಡುವುದನ್ನು ವೈದ್ಯರು ಮುಂದೂಡಿದ್ದರು ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ