ವಾಷಿಂಗ್ ಟನ್: 

ಸರ್ವ ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆ ಕೇಳಿಬಂದ ಹಿನ್ನೆಲೆಯಲ್ಲಿ ನೆರೆಯ ಪಾಕಿಸ್ತಾನ ಸೇರಿದಂತೆ 10 ದೇಶಗಳನ್ನು ಕಪ್ಪು ಪಟ್ಟಿಗೆ ಸೇರಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಪಾಕ್ ಗೆ ಅವಮಾನವಾಗುವಂತಹ ಘಟನೆಗೆ ಸಾಕ್ಷಿಯಾಗಿದೆ .
ಅಮೆರಿಕ ಕಾರ್ಯದರ್ಶಿ ಮೈಕ್ ಪೊಂಪೆಯೊ ಈ ಬಗ್ಗೆ ಮಾಹಿತಿ ನೀಡಿದ್ದು, ಚೀನಾ, ಪಾಕಿಸ್ತಾನ, ಇರಾನ್, ಉತ್ತರ ಕೊರಿಯಾ, ಎರಿಟ್ರಿಯಾ, ಮ್ಯಾನ್ಮಾರ್, ಸೌದಿ ಅರೇಬಿಯಾ, ಸುಡಾನ್, ತುರ್ಕಮೆನಿಸ್ತಾನ್ ಮತ್ತು ತಜಾಕಿಸ್ಥಾನ್ ರಾಷ್ಟ್ರಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಅವುಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ತಿಳಿಸಿದ್ದಾರೆ.
ಆಯಾ ದೇಶದಲ್ಲಿ ಜನತೆ ಅನುಭವಿಸುತ್ತಿರುವ ಧಾರ್ಮಿಕ ಶೋಷಣೆಯ ಪ್ರಮಾಣವನ್ನು ಮಾನದಂಡವಾಗಿಸಿಕೊಂಡು ಮಾಡಲಾಗಿರುವಂತಹ ಸರ್ವೆಯಿಂದ ಬಂದ ಫಲಿತಾಂಶ ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








