ಗೋಡಾನ್ ಕಾರ್ಮಿಕರ ಮೇಲೆ ರ‍್ಯಾಕ್ ಕುಸಿತ!!

 ಬೆಂಗಳೂರು:

      ಗೋಡಾನ್ ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಕಬ್ಬಿಣದ ರ‍್ಯಾಕ್ ಗಳು ಕುಸಿದಿದ್ದು, ಹಲವರು ಕಾರ್ಮಿಕರು, ಕಬ್ಬಿಣದ ರ‍್ಯಾಕ್ ಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ನಡೆಯುತ್ತಿದೆ

       ನಗರದ ಹೊರವಲಯದ ಕಾಡುಗೋಡಿಯ ಶೀಗೆಹಳ್ಳಿ ಗೇಟ್‍ನಲ್ಲಿರುವ ಮಾರ್ಕೆಟಿಂಗ್ ಕಂಪನಿಯೊಂದರ ಹೋಲ್ ಸೇಲ್ ಗೋಡಾನ್‍ನಲ್ಲಿ ಅವಘಡ ಸಂಭವಿಸಿದ್ದು, ಒಳಭಾಗದಲ್ಲಿದ್ದ ರಾಕ್ ಏಕಾಏಕಿ ಕುಸಿದು ಬಿದ್ದ ಪರಿಣಾಮ ಕಾರ್ಮಿಕರು ರಾಕ್ ನಡಿ ಸಿಲುಕಿದ್ದರು. ಇದೂವರೆಗೆ ಐವರು ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದ್ದು, ಇನ್ನೂ ನಾಲ್ಕೈದು ಮಂದಿ ಕಾರ್ಮಿಕರು ರಾಕ್ ನಡಿ ಸಿಲುಕಿರುವ ಶಂಕೆ ವ್ಯಕ್ತಪಡಿಸಲಾಗಿದೆ.

      ಸ್ಥಳಕ್ಕೆ ಎನ್‍ಡಿಆರ್‍ಎಫ್ ತಂಡ, ಶ್ವಾನ ಪಡೆ ಆಗಮಿಸಿದೆ. ನಾಲ್ಕು ಅಂಬುಲೆನ್ಸ್ ಸ್ಥಳದಲ್ಲಿ ಬೀಡುಬಿಟ್ಟಿವೆ. ಕಾರ್ಮಿಕರಲ್ಲಿ ಆತಂಕ ಮನೆ ಮಾಡಿದೆ. ರ‍್ಯಾಕ್ ನಡಿ ಸಿಲುಕಿರುವ ಕಾರ್ಮಿಕರ ಬಂಧುಗಳ ಆಕ್ರಂದನ ಮುಗಿಲುಮುಟ್ಟಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link