ತೋವಿನಕೆರೆ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತೋವಿನಕೆರೆ ಗ್ರಾಮದಲ್ಲಿ ಜನವರಿ ತಿಂಗಳಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನು ನಡೆಸಲಾಗುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಬಿ.ಶ್ರೀನಿವಾಸ ತಿಳಿಸಿದರು. ಗ್ರಾಮದಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಒಂಟಿಯಾಗಿ ಸತ್ಯನಾರಾಯಣ ಪೂಜೆಯನ್ನು ಮಾಡಲು ಸಾವಿರಾರು ರೂಗಳನ್ನು ಖರ್ಚು ಮಾಡಬೇಕಾಗುತ್ತದೆ. ಸಾಮೂಹಿಕವಾಗಿ ನಡೆಸಿದರೆ ಹೆಚ್ಚಿನ ಹೊರೆ ಇಲ್ಲದೆ ಎಲ್ಲಾ ಜನಾಂಗದವರು ನಡೆಸಿ ನೆಮ್ಮದಿಯನ್ನು ಕಾಣಬಹುದು ಎಂದರು.
ಪೂಜೆಯಲ್ಲಿ ಭಾಗವಹಿಸುವವರು ತಲಾ 101 ರೂ.ಗಳನ್ನು ನೀಡಿ ಪೂಜೆಯಲ್ಲಿ ಭಾಗವಹಿಸಬಹುದು. ತೋವಿನಕೆರೆ, ಕುರಂಕೋಟೆ, ಸಿದ್ಧರಬೆಟ್ಟ ಮತ್ತು ಬುಕ್ಕ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ 500 ದಂಪತಿಗಳು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸ ಬಹುದು. ಇದಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಳ್ಳ ಬೇಕಾಗಿದೆ ಎಂದರು.
ತೋವಿನಕೆರೆಯ ಜನರ ಪೆತ್ಸಾಹದಿಂದ ಯೋಜನೆ ಮೂಲಕ ಅನೇಕ ಕಾರ್ಯಕ್ರಮಗಳು ನಡೆದಿದ್ದು, ತಾಲ್ಲೂಕಿಗೆ ಮಾದರಿಯಾಗಿದೆ ಎಂದು ಹರ್ಷ ವ್ಯಕ್ತ ಪಡಿಸಿದರು.
ಇದೇ ಸಂದರ್ಭದಲ್ಲಿ ವಲಯದ ಮುಖಂಡರ ಸಮಿತಿಯನ್ನು ರಚಿಸಲು ತಿರ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಮುಖಂಡ ಟಿ.ಡಿ.ಪ್ರಸನ್ನಕುಮಾರ್ ವಹಿಸಿದ್ದರು. ಬಿ.ಹನುಮಂತರಾಯಪ್ಪ, ವಲಯಾಧಿಕಾರಿ ಮಧುಕಿರಣ್, ಕೃಷಿಕ ಎಚ್.ಜೆ. ಪದ್ಮರಾಜು ಮಾತನಾಡಿದರು. ಒಕ್ಕೂಟದ ಅಧ್ಯಕ್ಷೆ ಕೆಂಪಮ್ಮ, ಸೂರೇನಹಳ್ಳಿ ಮೋಹನ ಕುಮಾರ್ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ