ದರೋಡೆ ಕತೆ ಕಟ್ಟಿದ ಪತ್ನಿ…!

ಬೆಂಗಳೂರು

         ಮನೆಯಲ್ಲಿ ಅಡಗಿದ್ದ ದುಷ್ಕರ್ಮಿಯೊಬ್ಬ 25 ವರ್ಷದ ಒಂಟಿ ಮಹಿಳೆಯನ್ನು ಚಾಕುವಿನಿಂದ ಬೆದರಿಸಿ ಅವರ ಮೈಮೇಲಿದ್ದ ಒಡವೆಗಳನ್ನು ದೋಚಿದ್ದ ಶಂಕಾಸ್ಪದ ಪ್ರಕರಣವನ್ನು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೆಲೀಸರು ಭೇದಿಸಿದ್ದು ಪತಿ ರಾತ್ರಿ ತಡವಾಗಿ ಮನೆಗೆ ಬರುತ್ತಿದ್ದರಿಂದ ರೋಸಿ ಹೋದ ಮಹಿಳೆಯೇ ದರೋಡೆ ಕತೆ ಕಟ್ಟಿದ್ದರು ಎನ್ನುವುದನ್ನು ಪತ್ತೆಹಚ್ಚಿದ್ದಾರೆ.

        ಕೆಲಸ ಮುಗಿಸಿ ಬಂದು ರಾತ್ರಿ ಮಲಗುವ ಕೋಣೆಗೆ ಹೋದ ಪತ್ನಿಯ ಮೇಲೆ ಅಲ್ಲಿ ಅಡಗಿದ್ದ ದುಷ್ಕರ್ಮಿಯೊಬ್ಬ ಚಾಕು ತೋರಿಸಿ ಹಲ್ಲೆ ಮಾಡಿ ಮೈಮೇಲಿದ್ದ ಹಾಗೂ ಬೀರುನಲ್ಲಿದ್ದ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿದ್ದಾಗಿ ಸಂಧ್ಯಾ (ಹೆಸರು ಬದಲಾಯಿಸಲಾಗಿದೆ) ಎಂಬುವರ ಪತಿ ದೂರು ನೀಡಿದ್ದರು.

         ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿದ ಡಿಸಿಪಿ ಅಣ್ಣಾಮಲೈ ತನಿಖೆ ನಡೆಸಿದಾಗ, ಪತಿ ರಾತ್ರಿ ವೇಳೆ ಮನೆಗೆ ಬಾರದಿದ್ದರಿಂದ ಬೇಸರಗೊಂಡಿದ್ದ ಮಹಿಳೆ ಈ ನಾಟಕ ಆಡಿದ್ದರು ಎನ್ನುವುದು ಗೊತ್ತಾಗಿದೆ. ಬೆಂಗಳೂರು ವಿವಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡಿಕೊಂಡಿರುವ ಸಂಧ್ಯಾ ಅವರು ಡಿ. 9ರಂದು ನಾನು ಕೆಲಸ ಮುಗಿಸಿ ಮನೆಗೆ ಬಂದಿದ್ದರು ಸಂಜೆ 5.30ರ ವೇಳೆಗೆ ಪತಿ ನನಗೆ ಕರೆ ಮಾಡಿ `ನಾನು ಸ್ನೇಹಿತರನ ಮನೆಗೆ ಹೋಗುತ್ತಿದ್ದೇನೆ.

         ಬರುವುದು ಲೇಟಾಗುತ್ತದೆ ಎಂದು ತಿಳಿಸಿದ್ದರು. ಬಳಿಕ ನಾನು ತ್ಯಾಗರಾಜನಗರದಲ್ಲಿರುವ ತಾಯಿ ಮನೆಗೆ ಹೋಗಿ ರಾತ್ರಿ 8.30 ರ ಸುಮಾರಿಗೆ ವಾಪಸಾದೆ. ರಾತ್ರಿ ಊಟ ಮುಗಿಸಿ, ಟಿವಿ ನೋಡಿದ ನಂತರ 9.30ರ ಸುಮಾರಿಗೆ ಮಲಗುವ ಕೋಣೆಗೆ ಹೋಗಿದ್ದೆ. ಇನ್ನೇನು ಮಲಗಬೇಕೆನ್ನುವಷ್ಟರಲ್ಲಿ ದುಷ್ಕರ್ಮಿಯೊಬ್ಬ ಬಂದು ಚಾಕು ತೋರಿಸಿ ಮೈಮೇಲಿದ್ದ ಚಿನ್ನದ ಸರವನ್ನು ಕಿತ್ತು, ಬೀರುವಿನಲ್ಲಿದ್ದ ಚಿನ್ನಾಭರಣಗಳನ್ನೂ ದೋಚಿದ್ದ ಎಂದು ದೂರಿನಲ್ಲಿ ವಿವರಿಸಿದ್ದರು. ದೂರಿನಲ್ಲಿರುವ ಸಂಗತಿಗಳು ಹಾಗೂ ಸ್ಥಳಕ್ಕೆ ಭೇಟಿ ನೀಡಿದ್ದ ಪೆಲೀಸರಿಗೆ ನೀಡಿದ ವಿವರಗಳು ಬೇರೆಬೇರೆಯಾಗುತ್ತಿದ್ದವು. ಪರಿಚಿತರದ್ದೇ ಕೃತ್ಯ ಎನ್ನುವ ಅನುಮಾನ ಪೆಲೀಸರದಾಗಿತ್ತು. ಏಕೆಂದರೆ ಬಲವಂತವಾಗಿ ಯಾರೂ ಮನೆಯನ್ನು ಪ್ರವೇಶಿಸಿದ ಕುರುಹುಗಳು ಇರಲಿಲ್ಲ. ಎರಡು ದಿನಗಳ ನಂತರ ಮಹಿಳೆಯನ್ನು ಸಮಾಧಾನದಿಂದ ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಗೆ ಬಂದಿದೆ.

         ಮಹಿಳೆಗೆ ಮದುವೆ ಆಗಿ 8 ತಿಂಗಳಷ್ಟೇ ಕಳೆದಿದೆ. ಆದರೆ ಪತಿ ತಮ್ಮ ವ್ಯವಹಾರದ ಕಾರಣಕ್ಕೆ ರಾತ್ರಿ ತಡವಾಗಿ ಮನೆಗೆ ಬರುತ್ತಿದ್ದರು. ಪತ್ನಿಗೆ ವೀಕೆಂಡ್‍ನಲ್ಲಿ ಮಾತ್ರ ಪತಿ ಜತೆ ಕಳೆಯಲು ಸಮಯ ಸಿಗುತ್ತಿತ್ತು. ಇಬ್ಬರೂ ಕೆಲಸ ಮಾಡುವುದರಿಂದ ಉಳಿದ ದಿನಗಳಲ್ಲಿ ಮಾತನಾಡಲೂ ಸಮಯ ಸಿಗುತ್ತಿರಲಿಲ್ಲ. ವೀಕೆಂಡ್‍ನಲ್ಲಾದರೂ ಪತಿ ಜತೆಗೆ ಇರಲಿ ಎನ್ನುವುದು ಅವರ ಇಚ್ಚೆಯಾಗಿತ್ತು. ಆ ದಿನವೂ ಪತಿ ರಾತ್ರಿ ತಡವಾಗಿ ಬರುವುದಾಗಿ ಕರೆ ಮಾಡಿದ್ದರಿಂದ ಪತ್ನಿ ಬೇಸರ ಮಾಡಿಕೊಂಡಿದ್ದರು. ಪತಿ ತಮ್ಮ ಕಡೆಗೆ ಹೆಚ್ಚಿನ ಗಮನ ಕೊಡಲಿ ಎನ್ನುವ ಕಾರಣಕ್ಕೆ ಈ ರೀತಿ ಕತೆ ಕಟ್ಟಿದ್ದರು. ಒಡವೆಗಳನ್ನು ತಾವೇ ಬಚ್ಚಿಟ್ಟು ಕತೆ ಸೃಷ್ಟಿಸಿದ್ದಾಗಿ ಎಂದು ಪೆಲೀಸರು ಮಾಹಿತಿ ನೀಡಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link