ಗಾಂಧಾರಿ ವಿದ್ಯೆಯಿಂಂದ ಕಣ್ಣಿನ ದೋಷ ನಿವಾರಣೆ

ಚಿತ್ರದುರ್ಗ;

       ಮಕ್ಕಳ ಮನಸ್ಸಿನ ಏಕಾಗ್ರತೆಗೆ ಗಾಂಧಾರಿ ವಿದ್ಯೆ ಹಾಗೂ ಕಲಿತ ವಿಷಯ ನೆನಪಿನಲ್ಲಿಟ್ಟುಕೊಳ್ಳಲು ಏಕಲವ್ಯ ವಿದ್ಯೆ ಸಹಕಾರಿ. ಗಾಂಧಾರಿ ವಿದ್ಯೆಯಿಂದ ಕಣ್ಣಿನ ದೋಷ ನಿವಾರಣೆಯಾಗುತ್ತದೆ. ಏಕಲವ್ಯ ವಿದ್ಯೆಯಿಂದ ಜ್ಞಾಪಕ ಶಕ್ತಿ ವೃದ್ಧಿಸುತ್ತದೆ ಎಂದು ಗಾಂಧಾರಿ ವಿದ್ಯೆ ಗುರುಗಳಾದ ಶಶಿಧರ ಗುರೂಜಿ ತಿಳಿಸಿದರು.

        ಚಿತ್ರದುರ್ಗ ನಗರದಲ್ಲಿ ಹಮ್ಮಿಕೊಂಡಿದ್ದ ಋಷಿ ಪ್ರಣೀತ ಅತಿಜ್ಞಾತ ರಾಜ ವಿದ್ಯೆಗಳಾದ ಏಕಲವ್ಯ ವಿದ್ಯೆ ಹಾಗೂ ಗಾಂಧಾರಿ ವಿದ್ಯೆ ಕಲಿಕಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಗಾಂಧಾರಿ ತನಗೆ ಕಣ್ಣಿದ್ದರೂ ಪತಿ ನೋಡದ ಜಗತ್ತನ್ನು ತಾನೂ ನೋಡುವುದಿಲ್ಲ ಎಂದು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಜೀವನ ನಡೆಸಿದಳು. ಇನ್ನು ಏಕಲವ್ಯ ತಾನು ಬಯಸಿದ ಶಬ್ಧವೇದಿ ವಿದ್ಯೆಯನ್ನು ಗುರುಗಳ ಆಶೀರ್ವಾದ ಹಾಗೂ ಕಠಿಣ ಪರಿಶ್ರಮದಿಂದ ಕಲಿತ ಎಂದರು.

        ಅದರಂತೆ ಇಲ್ಲಿನ ಶಿಬಿರದಲ್ಲಿ ಮಕ್ಕಳು ಕೆಲವೇ ದಿನಗಳಲ್ಲಿ ವಿಶೇಷ ದೃಷ್ಠಿ ಹಾಗೂ ವಿಶೇಷ ಜ್ಞಾಪಕ ಶಕ್ತಿ ಪಡೆದುಕೊಳ್ಳುತ್ತಾರೆ. ಗಾಂಧಾರಿ ವಿದ್ಯೆ ಕಲಿತ ಮಕ್ಕಳು ಕಣ್ಣು ಮುಚ್ಚಿಕೊಂಡು ಓದುವುದು, ಬರೆಯುವುದು, ಡ್ರಾಯಿಂಗ್ ಮಾಡುವುದು, ವಿವಿಧ ವಸ್ತುಗಳು ಅವುಗಳ ಬಣ್ಣಗಳನ್ನು ಗುರುತಿಸುವುದು, ಕಣ್ಣು ಕಟ್ಟಿಕೊಂಡು ಸೈಕಲ್, ಬೈಕ್, ಕಾರು ಚಾಲನೆ ಮಾಡುವ ಸಾಮಥ್ರ್ಯ ಪಡೆಯುತ್ತಾರೆ. ಗಾಂಧಾರಿ ವಿದ್ಯೆ ಕಲಿಯುವುದರಿಂದ ಮಕ್ಕಲು ಮನಸ್ಸಿನ ಏಕಾಗ್ರತೆ ಸಾಧಿಸುತ್ತಾರೆ. ಅಲ್ಲದೇ ಕಣ್ಣು ಕಾಣದಂತೆ ಮುಚ್ಚಿದರೂ ತಮ್ಮ ಒಳಗಣ್ಣಿನಿಂದ ಎಲ್ಲವನ್ನೂ ಗುರುತಿಸಬಲ್ಲರು ಎಂದು ಹೇಳಿದರು.

        ಏಕಲವ್ಯ ವಿದ್ಯೆ ಗುರುಗಳಾದ ಎರ್ರಿಸ್ವಾಮಿ ಗುರೂಜಿ ಮಾತನಾಡಿ, ಕಲಿತ ವಿದ್ಯೆ ಜೀವನ ಕೊನೆಯವರೆಗೆ ಇರಬೇಕು. ಅಲ್ಲದೇ ಸಕಾಲದಲ್ಲಿ ಜ್ಞಾಪಕಕ್ಕೆ ಬರಬೇಕು. ಅದು ನಿಜವಾದ ವಿದ್ಯೆ. ಏಕಲವ್ಯ ವಿದ್ಯೆಯಿಂದ ಮಕ್ಕಳಲ್ಲಿ ಇಂತಹ ಸಾಮಥ್ರ್ಯ ಬರುತ್ತದೆ. ಇಂದಿನ ಶಾಲಾ ಕಾಲೇಜುಗಳಲ್ಲಿ ಓದುವ ವಿದ್ಯೆಯು ಕೇವಲ ಕೆಲವು ದಿನಗಳು ಅಥವಾ ಪರೀಕ್ಷೆ ಮುಗಿಯುವವರೆಗೆ ಮಾತ್ರ ನೆನಪಿನಲ್ಲಿರುತ್ತದೆ. ಆದರೆ ಇಲ್ಲಿ ಕಲಿಯುವ ವಿದ್ಯೆ ಜೀವನ ಪರ್ಯಂತ ಶಾಶ್ವತವಾಗಿರುತ್ತದೆ ಎಂದರು.

          ಶಾಲಾ ಕಾಲೇಜುಗಳಲ್ಲಿ ನೀಡುವ ಆಧುನಿಕ ಶಿಕ್ಷಣ ಪದ್ಧತಿ. ಇಲ್ಲಿ ಪಠ್ಯವಿಷಯ ಕಲಿಯುವುದು ಕಷ್ಟ. ಆದರೆ ಮರೆಯುವುದು ಸುಲಭ. ಬೇಗನೆ ಮರೆತು ಹೋಗುತ್ತದೆ. ಇಲ್ಲಿ ನಾವು ಗುರುಕುಲ ಪದ್ಧತಿ ಶಿಕ್ಷಣ ನೀಡುತ್ತೇವೆ. ಇಲ್ಲಿನ ವಿಷಯಗಳನ್ನು ಕಲಿಯುವುದು ಸುಲಭ. ಮರೆಯುವುದು ಕಷ್ಟ. ಇಲ್ಲಿ ಕಲಿತ ವಿಷಯ ಶಾಶ್ವತವಾಗಿ ಮನಸ್ಸಿನಲ್ಲಿ ಉಳಿಯುತ್ತದೆ. ಏಕಲವ್ಯ ವಿದ್ಯೆ ಕಲಿತ ಮಕ್ಕಳು ಶಾಲಾ ಕಾಲೇಜಿನಲ್ಲಿ ವರ್ಷ ಪೂರ್ತಿ ಕಲಿಯುವ ಪಠ್ಯವಿಷಯಗಳನ್ನು ಕೆಲವೇ ದಿನಗಳಲ್ಲಿ ಕಲಿತು ಜ್ಞಾಪಕದಲ್ಲಿಟ್ಟುಕೊಳ್ಳುತ್ತಾರೆ ಎಂದು ಹೇಳಿದರು.

       ಗಾಂಧಾರಿ ವಿದ್ಯೆ ಕಲಿತ ಟಿ.ಪ್ರೀತಮ್ ದೊರೆ, ವಿಖ್ಯಾತ್ ಅರಸ್, ಅಕ್ಷರಾ ಹಾಗೂ ಏಕಲವ್ಯ ವಿದ್ಯೆ ಕಲಿತ ಮಕ್ಕಳಾದ ಚಿನ್ಮಯಿ, ನವ್ಯಾ ಮತ್ತಿತರ ಮಕ್ಕಳು ತಾವು ಕಲಿತ ವಿದ್ಯೆ ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನರು ಮಕ್ಕಳ ವಿದ್ಯೆ ಪ್ರದರ್ಶನ ಕಂಡು ಮೂಕ ವಿಸ್ಮಿತರಾದರು. ಕರತಾಡನ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಮಕ್ಕಳ ಪೋಷಕರು, ಸಾರ್ವಜನಿಕರು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap