ಕೊಲಂಬೋ:
ಇಷ್ಟು ದಿನ ಕಗಂಟಾಗಿದ್ದ ಉಳಿದಿದ್ದ ರಾಷ್ಟ್ರ ಪ್ರಧಾನಿ ಪಟ್ಟಕ್ಕೆ ಮತ್ತೆ ವಿಕ್ರಮಸಿಂಘೆ ಪುನರಾಯ್ಕೆಯಾಗಿದ್ದು ಸದ್ಯ ರಾಜಕೀಯ ಅಸಮತೋಲನ ಶಾಂತವಾಗಿದೆ ಎಂದು ಹೇಳಲಾಗಿದೆ ಯುನೈಟೆಡ್ ನ್ಯಾಷನಲ್ ಪಾರ್ಟ್ ಅಧ್ಯಕ್ಷ ರನೀಲ ವಿಕ್ರಮಸಿಂಘೆ ಶ್ರೀಲಂಕಾ ಪ್ರಧಾನಿಯಾಗಿ ಮತ್ತೆ ಅಧಿಕಾರಕ್ಕೇರಿದ್ದು .ವಿಕ್ರಮಸಿಂಘೆ ಅವರು ಇಂದು ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂದು ಅಲ್ಲಿನ ಮಾದ್ಯಮಗಳು ಸುದ್ದಿ ಮಾಡಿವೆ. ಕಳೆದ 51 ದಿನಗಳ ಕಾಲ ನಡೆಯುತ್ತಿದ್ದ ರಾಜಕೀಯ ಬಯಲಾಟಕ್ಕೆ ತೆರೆ ಬಿದ್ದಿದೆ.
ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಇಷ್ಟೆಲ್ಲಾ ಬೆಳವಣಿಗೆ ಆದ ಮೇಲೆ ಹಳೆಗಂಡನ ಪಾದವೇ ಗತಿ ಎಂದು ವಿಕ್ರಮಸಿಂಘೆ ಬಳಿ ಬಂದಿದ್ದಾರೆ ಎಂದು ರಾಜಕೀಯ ವಿಷ್ಲೇಶಕರು ಅಣಕವಾಡಿದ್ದಾರೆ . ಕಳೆದ ಅಕ್ಟೋಬರ್ 26 ರಂದು ನಡೆದ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಪ್ರಧಾನಿ ಹುದ್ದೆಯಿಂದ ಕೆಳಗಿಳಿದಿದ್ದ ವಿಕ್ರಮಸಿಂಘೆ ಅವರು ಇಂದು ಮತ್ತೆ ಅಧಿಕಾರ ಸ್ವೀಕರಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








