ಬೆಂಗಳೂರು
ಕ್ಷುಲಕ ಕಾರಣಕ್ಕೆ ಉಂಟಾದ ಜಗಳದಿಂದ ರೊಚ್ಚಿಗೆದ್ದು ಪತ್ನಿಯ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿರುವ ಪತಿ ದೊಡ್ಡಬೆಳವಂಗಲ ಪೆÇಲೀಸ್ ಠಾಣೆ ಹೋಗಿ ಶರಣಾಗಿದ್ದಾನೆ.
ದೊಡ್ಡಬಳ್ಳಾಪುರದ ಜೋಡಿ ಕಾರೇಪುರದ ಲಕ್ಷ್ಮಮ್ಮ (25)ಎಂದು ಕೊಲೆಯಾದವರನ್ನು ಗುರುತಿಸಲಾಗಿದೆ, ಪತ್ನಿ ಲಕ್ಷ್ಮಮ್ಮರನ್ನು ಕೊಲೆಗೈದ ನಂಜಪ್ಪ (32) ಪೊಲೀಸರ ಮುಂದೆ ಶರಣಾಗಿದ್ದು ಆತನನ್ನು ಬಂಧಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಕೆಲ ವರ್ಷಗಳ ಹಿಂದೆ ಲಕ್ಷ್ಮಮ್ಮ ಅವರನ್ನು ವಿವಾಹವಾಗಿದ್ದ ನಂಜಪ್ಪ ಕೃಷಿ ಕೆಲಸ ಮಾಡಿಕೊಂಡಿದ್ದು ದಂಪತಿ ನಡುವೆ ಇತ್ತೀಚಿಗೆ ಕೌಟುಂಬಕ ಕಾರಣಗಳಿಗಾಗಿ ಜಗಳ ನಡೆಯುತ್ತಿತ್ತು. ಶನಿವಾರ ದಂಪತಿ ನಡುವಿನ ಜಗಳ ವಿಕೋಪಕ್ಕೆ ತಿರುಗಿದೆ. ಆಕ್ರೋಶಗೊಂಡ ನಂಜಪ್ಪ ಮಲಗಿದ್ದ ಪತ್ನಿಯ ಮೇಲೆ ಕಲ್ಲು ಹಾಕಿ ಕೊಲೆ ಮಾಡಿ ನೇರವಾಗಿ ದೊಡ್ಡಬೆಳವಂಗಲ ಪೊಲೀಸ್ ಠಾಣೆಗೆ ಹೋಗಿ ನಂಜಪ್ಪ ಶರಣಾಗಿದ್ದಾನೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








