ಜಗಳೂರು
2018ರ ನಂತರ ನಾನು ಅಧಿಕಾರಕ್ಕೆ ಬಂದು 7 ತಿಂಗಳು ಕಳೆದಿದ್ದು ನನ್ನ ಅವಧಿಯಲ್ಲಿ ಕ್ಷೇತ್ರದ ಯಾವುದೇ ಪಂಚಾಯಿತಿಯಲ್ಲಿ ಭ್ರಷ್ಟಾಚಾರ ನಡೆದಿಲ್ಲ. ನನ್ನ ಕ್ಷೇತ್ರದಲ್ಲಿ ತನಿಖೆ ನಡೆಸುವ ಅವಶ್ಯಕತೆಲ್ಲ ಎಂದು ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.ಪಟ್ಟಣದ ವಿದ್ಯಾನಗರದಲ್ಲಿರುವ ಪತ್ರಿಕಾಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಜಗಳೂರಿನಲ್ಲಿ ಅತೀ ಹೆಚ್ಚು ಅವ್ಯವಹಾರ ನಡೆದಿದೆ ಎಂದು ಕಳೆದೆರಡು ದಿನಗಳ ಹಿಂದೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು ದೂರಿದ್ದಾರೆ. ಇದನ್ನು ನಾನು ಸಹಿಸುವುದಿಲ್ಲ. 2016-17ರಲ್ಲಿ ವಿವಿಧ ಗ್ರಾಮ ಪಂಚಾಯಿತಿಯಲ್ಲಿ ನಡೆದ ಅಕ್ರಮಗಳ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ನಾನೇ ಆಗ್ರಹಿಸಿದ್ದೇನೆ. ಅವುಗಳು ತನಿಖೆಯಲ್ಲಿ ಹಂತದಲ್ಲಿದೆ. ಹಾಲಿ ಇರುವ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಅಶ್ವತಿ ಉತ್ತಮ ಅಧಿಕಾರಿಯಾಗಿದ್ದಾರೆ. ಅವರು ಹಿಂದೆಯು ಸಹ ತಪ್ಪಿತಸ್ಥರ ಗ್ರಾಮ ಪಂಚಾಯಿತಿ ಅಧ್ಯಕ್ಷ, ಅಧಿಕಾರಿಗಳ ವಿರುದ್ದ ಕ್ರಮಕೈಗೊಂಡಿದ್ದರು. ಇಂತಹ ಅಧಿಕಾರಿಗಳ ವಿರುದ್ಧ ಆರೋಪ ಮಾಡುವುದು, ತನಿಖೆಗೆ ಒತ್ತಾಯಿಸುವುದನ್ನು ನಾನು ಸಹಿಸುವುದಿಲ್ಲ.
ಅವುಗಳ ಬಗ್ಗೆ ನಾನು ಮಾತನಾಡುವುದಿಲ್ಲ. ನನ್ನ ಗಮನಕ್ಕೆ ಬಾರದೆ ನನ್ನ ಕ್ಷೇತ್ರದ ಬಗ್ಗೆ ಮೂಗು ತೂರಿಸುವುದು ಸರಿಯಲ್ಲ. ಎಂದು ಹಾಲಿ ಜಿ.ಪಂ.ಅಧ್ಯಕ್ಷೆ ಮಂಜುಳಾ ವಿರುದ್ಧ ಹೆಸರೇಳದೇ ತರಾಟೆ ತೆಗೆದುಕೊಂಡರು. ನಮ್ಮದು ಬರಪೀಡಿತ ತಾಲ್ಲೂಕು, ನರೇಗಾ ಯೋಜನೆ ಬಿಟ್ಟರೆ ವಿಶೇಷ ಅನುದಾನಗಳು ನಮಗೆ ಇಲ್ಲ. ಇದನ್ನು ಸದ್ಭಳಕೆ ಮಾಡಿಕೊಂಡು ಕ್ಷೇತ್ರವನ್ನು ಅಭಿವೃದ್ಧಿಪಡಿಸಬೇಕಿದೆ. ಆದ್ದರಿಂದ ಏನೇ ಸಮಸ್ಯೆಗಳಿದ್ದರೆ ನನ್ನಬಳಿ ಕುಳಿತು ಚರ್ಚೆ ಮಾಡಲಿ ಅದನ್ನು ಬಿಟ್ಟು ನಮ್ಮ ಕ್ಷೇತ್ರ ವ್ಯಾಪ್ತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಗಳ ವಿರುದ್ದ ಆರೋಪ ಮಾಡಿದರೆ ಸರಿ ಇರುವುದಿಲ್ಲ. ತಪ್ಪಿದ್ದರೆ ನನ್ನ ಗಮನಕ್ಕೆ ತನ್ನಿ, ಅದನ್ನು ಬಿಟ್ಟು ವಿನಾಕಾರಣ ಅಧಿಕಾರಿಗಳಿಗೆ ಕಿರುಕುಳ ಕೊಟ್ಟರೆ ಸಹಿಸಲಾಗುವುದು.
ಸಿಇಓ ಅಶ್ವತಿಯವರು ದಕ್ಷ ಅಧಿಕಾರಿಯಾಗಿದ್ದು. ತಾಲ್ಲೂಕಿನ ಅಭಿವೃದ್ದಿ ವಿಶೇಷ ಗಮನಹರಿಸಿದ್ದಾರೆ. ಹಳ್ಳಿ ಹಳ್ಳಿಗೆ ಹೋಗಿ ಶೌಚಾಲಯಗಳನ್ನು ದಾಖಲೆಯ ಮೂಲಕ ಕಟ್ಟಿಸಿದ್ದಾರೆ. ಇಂತವರ ಬಗ್ಗೆ ಆರೋಪ ಮಾಡುವುದು ಸರಿಯಲ್ಲ. ವಿನಾಕಾರಣ ನಮ್ಮ ಕ್ಷೇತ್ರದ ಬಗ್ಗೆ ಪದೇ ಪದೇ ಪ್ರಸ್ತಾಪ ಮಾಡಿ ಹಸ್ತಕ್ಷೇಪ ಮಾಡಿದರೆ ಪಕ್ಷದ ನಾಯಕರ ಗಮನಕ್ಕೆ ತರಲಾಗುವುದು ಎಂದು ಎಚ್ಚರಿಸಿದ್ದಾರೆ.
ನನ್ನ ಕ್ಷೇತ್ರದಲ್ಲಿ ಅಧಿಕಾರಿಗಳು ದಕ್ಷತೆಯಿಂದ ಕೆಲಸಮಾಡುತ್ತಿದ್ದಾರೆ. ಸರಿಯಾಗಿ ಕೆಲಸ ಮಾಡದವರನ್ನು ನಾನು ಇಟ್ಟುಕೊಳ್ಳುವುದಿಲ್ಲ. ನಾನು ಅಧಿಕಾರಕ್ಕೆ ಬಂದ ಮೇಲೆ ಒಂದು ಕೇಸ್ ಹಾಗಲು ಬಿಟ್ಟಿಲ್ಲ.
ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಹಲವಾರು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಕೊಡಲಾಗುತ್ತಿದೆ. ಉದ್ಯೋಗ ಖಾತ್ರಿಯಲ್ಲೇ ಗ್ರಾಮ ಪಂಚಾಯಿತಿ,ಅಂಗನವಾಡಿ ಬಿಲ್ಡಿಂಗ್ ಸೇರಿದಂತೆ ಇತರೇ ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಬರ ಪೀಡಿತ ಈ ಕ್ಷೇತ್ರದ ಮೂರು ಬಿಳಿಚೋಡು, ಹಾಲೇಕಲ್ಲು, ತುಪ್ಪದಹಳ್ಳಿ ಕೆರೆಗಳಿಗಳಿ ತುಂಗಾಭದ್ರಾ ಏತನೀರಾವರಿ ಯೋಜನೆಯಿಂದ ನೀರು ಸರಿಯಾಗಿ ಬಂದಿಲ್ಲ. ಭದ್ರಾಮೇಲದ್ದಂಡೆಯೋಜನೆ ಮಂಜೂರಾತಿಯಾಗಿದ್ದರೂ ಕಾಮಗಾರಿ ಮುಗಿದಿಲ್ಲ, ಸಿರಿಗೆರೆ ಶ್ರೀಗಳ ಒತ್ತಡದಿಂದ 52 ಕೆರೆಗಳಿಗೆ ಟಿಪಿಆರ್ ಆಗಿದ್ದು ಜರೂರಾಗಿ ಹಣ ಬಿಡುಗಡೆಗೊಂಡು ಕಾಮಗಾರಿ ತುರ್ತಾಗಿ ಮಾಡುವಂತೆ ಬೆಳಗಾವಿ ಅಧಿವೆಶನದಲ್ಲಿ ಸರ್ಕಾರದ ಗಮನಕ್ಕೆ ತಂದಿದ್ದೇನೆ. ಇಂತಹ ಕೆಲಸ ಮಾಡುವಾಗ ತಾಲ್ಲೂಕಿನ ವಿನಾಕಾರಣ ನಮ್ಮ ಕ್ಷೇತ್ರದ ಬಗ್ಗೆ ಪದೇ ಪದೇ ಪ್ರಸ್ತಾಪ ಮಾಡಿ ಹಸ್ತಕ್ಷೇಪ ಮಾಡಿದರೆ ಸಹಿಸುವುದಿಲ್ಲವೆಂದು ಹಾಲಿ ಜಿ.ಪಂ.ಅಧ್ಯಕ್ಷೆ ಹೆಸರೇಳದೇ ಅಧ್ಯಕ್ಷೆಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಪಂಚಾಯ್ತಿ ಅಧ್ಯಕ್ಷ ಡಿ.ವಿ.ನಾಗಪ್ಪ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಹೆಚ್.ನಾಗರಾಜ್, ಅರಸಿಕೆರೆ ಕ್ಷೇತ್ರದ ಮುಖಂಡ ಮಂಜಣ್ಣ, ಕಾಟಪ್ಪ, ರಂಗಾಪುರ ಹನುಮಂತಣ್ಣ, ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ