ಸಿಎಂ ಆಗಲು ನನ್ನನ್ನು ಬಿಡಲಿಲ್ಲ : ಸಿದ್ದರಾಮಯ್ಯ

ಚಿಕ್ಕೋಡಿ :

     ಐದು ವರ್ಷಗಳ ಕಾಲ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿದ್ದರಿಂದ ನನ್ನ ಏಳಿಗೆ ಸಹಿಸದವರು ನಾನು ಮುಖ್ಯಮಂತ್ರಿಯಾಗದಂತೆ ನನ್ನ ತಡೆದರು ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

      ಚಿಕ್ಕೋಡಿಯ ನಗರಮುನ್ನೋಳಿ ಗ್ರಾಮದಲ್ಲಿ ಮಂಗಳವಾರ ಜರುಗಿದ 531ನೇ ಕನಕದಾಸ ಜಯಂತ್ಯುತ್ಸವ ಹಾಗೂ ಅಂತಾರಾಜ್ಯ ಟಗರಿನ ಕಾಳಗ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದ ಅವರು, ದೇಶದಲ್ಲಿ ಜಾತಿ ವ್ಯವಸ್ಥೆ ರಾಜಕಾರಣಕ್ಕೆ ಬಳಕೆಯಾಗುತ್ತಿರುವುದು ವಿಪರ್ಯಾಸ. ಇಂತಹ ಜಾತಿ ವ್ಯವಸ್ಥೆ ತೊಲಗಿಸುವವರಿಗೆ ರಾಜಕೀಯ ಪ್ರೋತ್ಸಾಹದ ಅಗತ್ಯವಿದೆ ಎಂದರು.

      ಐದು ವರ್ಷಗಳ ಆಡಳಿತದಲ್ಲಿ ಹಿಂದಿನ ಸರ್ಕಾರಗಳಿಗಿಂತ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ನಾನೊಬ್ಬ ಹಿಂದೂ ಆದರೂ ನನ್ನನ್ನು ಹಿಂದೂ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ಮಾಡಿದರು. ಆದರೆ ನಾನು ಸಮಾಜದಲ್ಲಿ ಸಮಾನತೆಯನ್ನು ತರುವ ಪ್ರಯತ್ನ ಮಾಡಿದ್ದೇನೆ. ಟಿಪ್ಪು ಜಯಂತಿಯಂದು ನನ್ನ ಬಗ್ಗೆ ಏನೇನೋ ಆರೋಪ ಮಾಡಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link