ದತ್ತಿ ಉಪನ್ಯಾಸ ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ

ಹರಪನಹಳ್ಳಿ:

        ಟಿವಿ, ಕಂಪ್ಯೂಟರ್ ಮನುಷ್ಯನ ಶತ್ರುಗಳಲ್ಲ. ಅವುಗಳಿಂದ ಸಾಕಷ್ಟು ಸದುಪಯೋಗವಿದ್ದು, ಜ್ಞಾನಾರ್ಜನೆ ಹೆಚ್ಚಿಸುವ ನಿಟ್ಟನಿನಲ್ಲಿ ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಂಜುಳಾ ಶಿವಪ್ಪ ಉಂಡಿ ಅಭಿಪ್ರಯಾಯ ವ್ಯಕ್ತಪಡಿಸಿದರು.

           ಕನ್ನಡ ಸಾಹಿತ್ಯ ಪರಿಷತ್ತು, ಕಾನೂನು ಸೇವಾ ಸಮಿತಿ ಆಶ್ರಯದಲ್ಲಿ ತಾಲ್ಲೂಕಿನ ಅನಂತನಹಳ್ಳಿ ಬಳಿಯ ಆದರ್ಶ ಶಾಲೆಯಲ್ಲಿ ಬುಧವಾರ ಏರ್ಪಡಿಸಲಾಗಿದ್ದ ದತ್ತಿ ಉಪನ್ಯಾಸ ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

           `ಗುರಿ ಇಲ್ಲದ ಜೀವನ ನಿರರ್ಥಕ. ಗುರಿ ಮುಟ್ಟಲು ಸತತ ಅಭ್ಯಾಸ ಮಾಡಬೇಕು. ವಿದ್ಯಾರ್ಥಿ ದೆಸೆಯಲ್ಲಿಯೇ ಉತ್ತಮ ಆಲೋಚನೆ, ಹವ್ಯಾಸ ರೂಢಿಸಿಕೊಂಡಲ್ಲಿ ಮುಂದಿನ ಭವಿಷ್ಯ ಉಜ್ವಲವಾಗುತ್ತದೆ. ವೀವೇಕ ಬದುಕಿನಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತೆ. ವಿವೇಕವಿಲ್ಲದಿದ್ದರೆ ನಾವು ಎಷ್ಟೇ ಓದಿದರು ಉಪಯೋಗಕ್ಕೆ ಬಾರದು. ಸುಲಭದಲ್ಲಿ ಯಶಸ್ಸು ಗಳಿಸುವುದೂ ಅಸಾಧ್ಯ. ಹಾಗಾಗಿ ನಿರಂತರ ಶ್ರಮದ ಜೀವನ ನಮ್ಮದಾಗಬೇಕು’ ಎಂದರು.

          `ಪರೀಕ್ಷೆ ಎದುರಿಸಲು ನೆನಪಿನ ಶಕ್ತಿ ಬಹು ಮುಖ್ಯ. ಟಾನಿಕ್ ಗಳಿಂದ ನೆನಪಿನ ಶಕ್ತಿ ಬರಲ್ಲ. ಬಾಲ್ಯದಲ್ಲಿಯೇ ಇದಕ್ಕೆ ಸೂಕ್ತ ಭದ್ರತೆ ಬೀಳಬೇಕು. ಭವಿಷ್ಯ ರೂಪಗೊಳ್ಳಲು ಆಲೋಚನೆ, ಜೀವನದ ಕ್ರಮ, ನಮ್ಮ ಇಚ್ಚಾಶಕ್ತಿಯನ್ನು ಒಳಗೊಂಡಿರುತ್ತದೆ. ವಿವೇಕಾನಂದರು, ಅಬ್ದುಲ್ ಕಲಾಂ, ಅಂಬೇಡ್ಕರ್ ಅವರ ಜೀವನ ಪದ್ಧತಿ ನಮಗೆ ಮಾದರಿ ಆಗಬೇಕು. ಎಲ್ಲದಕ್ಕೂ ದೇವರನ್ನು ಬೇಡುವ ಬದಲು ನಮ್ಮ ಕರ್ತವ್ಯ ಪಾಲಿಸಬೇಕು. ತಂದೆ-ತಾಯಿ, ಶಿಕ್ಷಕರಿಗೆ ಗೌರವ ನೀಡಬೇಕು. ಅಂದಾಗ ಪರಿಪೂರ್ಣ ವ್ಯಕ್ತಿಯಾಗಲು ಸಾಧ್ಯ’ ಎಂದು ಹೇಳಿದರು.

           `ಕನ್ನಡ ಭಾಷೆ ಶ್ರೀಮಂತ ಭಾಷೆ. ವ್ಯವಹಾರಿಕವಾಗಿ ಆಂಗ್ಲ ಭಾಷೆ ಕಲಿಕೆಯೂ ಅನಿವಾರ್ಯ ಆಗಿದೆ. ಕನ್ನಡ ಭಾಷೆ ಬಳಕೆ ಸಮೃದ್ಧವಾಗಬೇಕು. ಅನ್ಯ ಭಾಷೆ ವ್ಯವಹಾರಕ್ಕೆ ಸೀಮಿತವಾಗಬೇಕು. ಜನಸೇವೆ ತೋರಿಕೆಗೆ ಆಗದೇ ಜನಪರವಾಗಿರಬೇಕು. ಹಿರಿಯರ ನೆನಪಿಗಾಗಿ ಅವರ ಹೆಸರಲ್ಲಿ ದತ್ತಿ ಕಾರ್ಯಕ್ರಮ ನಡೆಸುವುದು ಶ್ಲಾಘನೀಯ ಕಾರ್ಯ. ಇದರಿಂದ ಕನ್ನಡ ಭಾಷೆಯ ಬೆಳೆವಣಿಗೆಯೂ ಆಗುತ್ತದೆ’ ಎಂದರು.

           ವಕೀಲ ಕಣವಿಹಳ್ಳಿ ಮಂಜುನಾಥ್ ಮಾತನಾಡಿ, `ಕನ್ನಡ, ನಾಡಿನ ಸೇವೆ ನಮ್ಮ ಮನೆಯ ಕೆಲಸವಾಗಬೇಕು. ಕೇವಲ ಕನ್ನಡ ಉಳಿಸಿ ಬೆಳೆಸಿ ಎಂದರೆ ಸಾಲದು. ಕನ್ನಡದಲ್ಲಿ ಸಹಿ ಮಾಡುವುದನ್ನು ಕಲಿತು ಮಾತೃಪ್ರೇಮ ಮೆರೆಯಬೇಕು. ಆಟದಲ್ಲಿನ ಕ್ರಿಯಾಶೀಲತೆ ಓದಿನಲ್ಲೂ ಬರಬೇಕು’ ಎಂದರು.

        `ಬನ್ನಿ ವಿದ್ಯಾರ್ಥಿಗಳೇ ವಿಜಯಿಗಳಾಗೋಣ’ ವಿಷಯ ಕುರಿತು ಜಗಳೂರಿನ ಮಂಜುನಾಥ ಸಾಹುಕಾರ ಉಪನ್ಯಾಸ ನೀಡಿದರು. ಕಸಾಪ ಅಧ್ಯಕ್ಷ ಡಿ.ರಾಮನಮಲಿ ಅಧ್ಯಕ್ಷತೆ ವಹಿಸಿದ್ದರು. ದತ್ತಿ ದಾನಿಗಾಳದ ಬಾಗಳಿ ಆರ್.ಕೆಂಚನಗೌಡರ, ಎಂ.ಪ್ರಕಾಶಪ್ಪ, ಶಾಲಾ ಸಮಿತಿ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಮಾತನಾಡಿದರು.

         ಮುಖ್ಯೋಪಾಧ್ಯಾಯರು ಕೆ.ಶಿವಾನಂದ, ಕಸಾಪ ಗೌರವ ಕಾರ್ಯದರ್ಶಿಗಳಾದ ಸಿ.ಗಂಗಾಧರ, ಹೇಮಣ್ಣ ಮೋರಿಗೇರಿ, ಶಿಕ್ಷಕ ಕುಬೇರನಾಯ್ಕ ಇತರರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link