ದಾವಣಗೆರೆ:
ಇತಿಹಾಸ ಸಂಶೋಧಕ ಡಾ.ಮಾಡಲಗೇರಿ ಕೊಟ್ರೇಶ್ ಅವರನ್ನು ಭಾರತ ಸರಕಾರವು ಇಂಡಿಯನ್ ಕೌನ್ಸಿಲ್ ಫಾರ್ ಹಿಸ್ಟಾರಿಕಲ್ ರಿಸರ್ಚ್ (ಐ.ಸಿ.ಹೆಚ್.ಆರ್)ನ ಸದಸ್ಯರನ್ನಾಗಿ ನೇಮಿಸಿದೆ.
ಮೂಲತಹ ಹರಪನಹಳ್ಳಿ ತಾಲೂಕಿನವರಾಗಿರುವ ಕೊಟ್ರೇಶ್ ಅವರು ರಾಜ್ಯದಿಂದ ಐ.ಸಿ.ಹೆಚ್.ಆರ್ ನೇಮಕವಾದವರಲ್ಲಿ ಎರಡನೆಯ ಸಂಶೋಧಕರಾಗಿದ್ದಾರೆ. ಇವರು ನಡೆಸಿದ್ದ ಉಚ್ಚಂಗಿದುರ್ಗ ಕುರಿತ ಸಂಶೋಧನೆ ವ್ಯಾಪಕ ಪ್ರಶಂಶೆಗೆ ಪಾತ್ರವಾಗಿತ್ತು. ಕೋಟೆಗಳು, ರಕ್ಷಣಾ ಸ್ಮಾರಕಗಳು, ಕುರಿತು ಹಲವರು ಕೃತಿಗಳನ್ನು ರಚಿಸಿದ್ದಾರೆ.
ಪ್ರಸ್ತುತ ತುಮಕೂರು ವಿ.ವಿಯ ಇತಿಹಾಸ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ
ದಾವಣಗೆರೆ ವಿ.ವಿ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ವೆಂಕಟರಾವ್ ಎಂ. ಪಾಲಾಟಿ, ಸಂಶೋಧಕ ಡಾ. ಜೆ.ಕೆ.ಮಲ್ಲಿಕಾರ್ಜುನಪ್ಪ, ಡಾ.ಪಿ.ನಾಗಭೂಷಣಗೌಡ, ಡಾ.ಬಿ.ಸಿ.ರಾಕೇಶ್ ಅಭಿನಂದಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ