ಚಳ್ಳಕೆರೆ
ಇಲ್ಲಿನ ನಗರಸಭೆಯಲ್ಲಿ ಪೌರನೌಕರರಾಗಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಪೌರಕಾರ್ಮಿಕರಿಗೆ ನಿಯಮಬದ್ದವಾಗಿ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ಪೌರಾಯುಕ್ತ ಜೆ.ಟಿ.ಹನುಮಂತರಾಜು ತಿಳಿಸಿದ್ಧಾರೆ.
ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ ಅವರು, ಇಲ್ಲಿನ ಪೌರನೌಕರರನ್ನು ಹಂತ ಹಂತವಾಗಿ ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಗೆ ಕಳುಹಿಸಿ ಪ್ರತಿಯೊಬ್ಬ ನೌಕರರನ ಆರೋಗ್ಯ ತಪಾಸಣೆಯನ್ನು ನಡೆಸಲಾಗುತ್ತಿದೆ. ಆಸ್ಪತ್ರೆಯ ವೈಧ್ಯರ ತಂಡ ಹಾಗೂ ಸಿಬ್ಬಂದಿ ಪೌರನೌಕರರ ಆರೋಗ್ಯವನ್ನು ಪರಿಶೀಲನೆ ನಡೆಸುತ್ತದೆ. ಪ್ರತಿಯೊಂದು ಹಂತದ ಪರೀಕ್ಷೆಯನ್ನು ನಡೆಸಲಾಗುತ್ತದೆ.
ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ನಿರ್ಮಲ ಮತ್ತು ಸಿಬ್ಬಂದಿ ವರ್ಗ ಎಲ್ಲಾ ಪೌರನೌಕರರನ್ನು ಚಿತ್ರದುರ್ಗಕ್ಕೆ ಕರೆದ್ಯೊಯ್ದು ತಜ್ಞ ವೈದ್ಯರಿಂದ ಆರೋಗ್ಯ ಪರೀಕ್ಷೆ ನಡೆಸಲಾಗುತ್ತದೆ. ಪ್ರತಿಯೊಬ್ಬ ಪೌರ ನೌಕರ ಆರೋಗ್ಯದ ಬಗ್ಗೆ ನಗರಸಭೆ ವಿಶೇಷ ಗಮನವನ್ನು ಹರಿಸುತ್ತದೆ ಎಂದು ಅವರು ತಿಳಿಸಿದ್ಧಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ