ನಿಷ್ಠೆ ಹಾಗೂ ಭಕ್ತಿಗೆ ಮತ್ತೊಂದು ಹೆಸರೇ ಹನಮ : ಶ್ರೀ ಶಾಂತವೀರ ಮಹಾ ಸ್ವಾಮೀಜಿ

ಮಡಕಶಿರಾ:

     ಸೇವೆ, ತ್ಯಾಗ, ನಿಷ್ಠೆ ಹಾಗೂ ಭಕ್ತಿಗೆ ಮತ್ತೊಂದು ಹೆಸರೇ ಹನಮ ಎಂದು ಹೊಸದುರ್ಗದ ಶ್ರೀ ಜಗದ್ಗುರು ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ಶಾಂತವೀರ ಮಹಾ ಸ್ವಾಮೀಜಿ ಆಶೀರ್ವಚನ ನೀಡಿದರು.

      ಆಂಧ್ರಪ್ರದೇಶದ ಅನಂತಪುರ ಜಿಲ್ಲೆ ಮಡಕಶಿರಾ ತಾಲೂಕಿನ ತಮಡೇಹಳ್ಳಿ ಕೆಂಕೆರೆ ಗ್ರಾಮಗಳಲ್ಲಿ ಹನಮ ಜಯಂತಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಕಲಿಯುಗದಲ್ಲಿ ತಂದೆ-ತಾಯಿ, ಗುರು-ಹಿರಿಯರು ಧರ್ಮ-ದೇವರು ಎಂದು ತಗ್ಗಿ ಬಗ್ಗಿ ನಡೆದರೆ ವಿನಯ ಶೀಲರಾಗಿ ಸಂಪನ್ನ-ಸದ್ಗುಣಗಳನ್ನು ಆ ವ್ಯಕ್ತಿಯಲ್ಲಿ ಕಾಣಬಹುದು. ಬಸವಣ್ಣ ಅದನ್ನೇ ಹೇಳಿದ್ದು ಎನಗಿಂತ ಕಿರಿಯರಿಲ್ಲ, ಶಿವ ಭಕ್ತರಿಗಿಂತ ಹಿರಿಯರಿಲ್ಲ ಎನ್ನುವ ತತ್ವ ನಮ್ಮನ್ನು ಉನ್ನತಿಗೆ ಕೊಂಡೊಯ್ಯುತ್ತದೆ ಎಂದು ತಿಳಿಸಿದರು.

    ತುಂಬಿದ ಕೊಡದ ಹಾಗೆ ತುಳುಕದಂತೆ ಇರುವವರು ಜ್ಞಾನಿ. ರಾಮನ ಭಕ್ತ ಹನುಮ ತನ್ನ ಭಕ್ತಿ ನಿಷ್ಠೆಯಿಂದ ಇಂದು ಜಗತ್ತಿಗೆ ಆದರ್ಶ ಪುರುಷೋತ್ತಮನಾಗಿ ಆರಾಧಿಸಲ್ಪಡುತ್ತಿದ್ದಾನೆ ಎಂದು ಆಶೀರ್ವಾಚನ ನೀಡಿದರು.

      ಸಮಾರಂಭದನ್ನು ದೊಡ್ಡರಾಜಪ್ಪ ಉದ್ಘಾಟನೆ ಮಾಡಿದರು. ವಡ್ಡಗೆರೆ ತಾಡಿ ಶಿರಿವಾಳದ ಪಟ್ಟದ ಪೂಜಾರರು ಹಾಗು ತಮ್ಮಡೆಹಳ್ಳಿ ದೇವಸ್ಥಾನದ ಅಧ್ಯಕ್ಷರು, ಕಮಿಟಿ ಸದಸ್ಯರು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link