ಯಡಿಯೂರಪ್ಪ ಅವರಿಂದಾಗಿ ಎರಡು ದಿನದ ಕಲಾಪ ವ್ಯರ್ಥ: ಕುಮಾರ ಸ್ವಾಮಿ

ಬೆಳಗಾವಿ

         ಸದನದಲ್ಲಿ ಸಾಲಮನ್ನಾ ಕುರಿತು ಸಂಪೂರ್ಣ ಮಾಹಿತಿ ನೀಡಲು ಬಿಜೆಪಿ ಅವಕಾಶ ಕೊಡಲಿಲ್ಲ. ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರಿಂದಾಗಿ ದೆರಡು ದಿನದ ಕಲಾಪ ವ್ಯರ್ಥವಾಯಿತು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

         ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸದನದಲ್ಲಿ ತಾವೆಂದೂ ಉದ್ಧಟತನದಿಂದ ಮಾತನಾಡಲಿಲ್ಲ. ಆದರೆ ಯಡಿಯೂರಪ್ಪ ಅವರು ವಿನಾಕಾರಣ ತಮ್ಮ ಮೇಲೆ ಆರೋಪ ಹೊರಿಸಿದ್ದಾರೆ. ತಾವೆಂದೂ ಬೃಹಸ್ಪತಿ, ಬುದ್ಧಿವಂತ ಎಂದು ಹೇಳಿಕೊಂಡಿಲ್ಲ. ಸಾಲಮನ್ನಾ ವಿಚಾರದಲ್ಲಿ ಬಿಜೆಪಿಯವರಿಗೆ ಸಲಹೆ ಕೊಡಿ ಎಂದು ಹೇಳಿದ್ದೇ. ತಮ್ಮದು ಮಾದರಿ ಸಾಲಮನ್ನಾ ಯೋಜನೆಯಾಗಿದ್ದು, ಬೃಹಸ್ಪತಿ ಎಂದುಕೊಂಡು ಸಾಲಮನ್ನಾ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.

           ವಿಧಾನಸಭೆಯಲ್ಲಿ 9.5 ಗಂಟೆಗಳ ಕಾಲ ಉತ್ತರ ಕರ್ನಾಟಕ ಭಾಗದ ಕುರಿತು ಚರ್ಚೆಯಾಗಿದ್ದು, ಸರ್ಕಾರ ಎಲ್ಲಾ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಕೊಟ್ಟಿದೆ. ಅಧಿವೇಶನದ ಆರಂಭದಲ್ಲಿ ಉಭಯ ಸದನಗಳು ಚೆನ್ನಾಗಿ ನಡೆದಿವೆ. ಅಧಿವೇಶನ ಉತ್ತಮವಾಗಿ ನಡೆಸಿಕೊಟ್ಟ ಸಭಾಧ್ಯಕ್ಷರು ಮತ್ತು ಸಭಾಪತಿಗಳಿಗೆ ಅಭಿನಂದನೆಗಳು ಎಂದರು.

          ಸಚಿವ ಸಂಪುಟ ವಿಸ್ತರಣೆ ಕುರಿತು ಕೇಳಲಾದ ಪ್ರಶ್ನೆಗೆ, ಈ ವಿಚಾರದ ಬಗ್ಗೆ ಕಾಂಗ್ರೆಸ್ ನಾಯಕರಿಂದ ತಮಗೆ ಈವರೆಗೆ ಯಾವುದೇ ಮಾಹಿತಿ ಬಂದಿಲ್ಲ ಎಂದರು.

           ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಪ್ರತಿನಿಧಿಸಸುವ ಹಾಸನದ ದುದ್ದ ಬಳಿ 47 ಮಂದಿ ಕಾರ್ಮಿಕರನ್ನು ಜೀತಕ್ಕೆ ಇರಿಸಿಕೊಂಡಿದ್ದ ಪ್ರಕರಣದ ಬಗ್ಗೆ ಪ್ರತಿಕ್ರಯಿಸಿದ ಕುಮಾರ ಸ್ವಾಮಿ, ತಾವು ಸಂಬಂಧಪಟ್ಟ ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತರೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap