ರೆಡ್‍ಕ್ರಾಸ್‍ಸಂಸ್ಥೆ ವತಿಯಿಂದ ಉಚಿತ ನೇತ್ರ ತಪಾಸಣೆ ಶಿಬಿರ

ಹಿರಿಯೂರು :
               ಭಾರತೀಯ ರೆಡ್‍ಕ್ರಾಸ್‍ಸಂಸ್ಥೆ ಸದಾಸಮಾಜಮುಖಿಯಾಗಿ ಆರೋಗ್ಯರಕ್ಷಣೆಯಂತಹ ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತಿರುವುದಕ್ಕೆ ರಾಜ್ಯಪ್ರಶಸ್ತಿಗಳನ್ನು ಪಡೆಯಲು ಸಾಧ್ಯವಾಗಿದೆ ಎಂದು ರಾಜ್ಯ ರೆಡ್‍ಕ್ರಾಸ್ ಚೇರ್ಮನ್ ಬಸ್ರೂರ್ ಬಸವರಾಜಶೆಟ್ಟಿ ಹೇಳಿದರು.

         ನಗರದ ರೋಟರಿಸಭಾಭವನದಲ್ಲಿ ರೋಟರಿಸಂಸ್ಥೆ, ಇನ್ಹರ್‍ವ್ಹೀಲ್, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಜಿಲ್ಲಾ ಆರ್ಯೋಗ್ಯ ಮತ್ತು ಕುಟುಂಬ ಇಲಾಖೆ ಜಿಲ್ಲಾ ಅಂದತ್ವ ನಿವಾರಣ ಸಮಿತಿ, ತಾಲ್ಲೂಕು ಆರೋಗ್ಯ ಅಧಿಕಾರಿಗಳು ಮತ್ತು ಸಾರ್ವಜನಿಕ ಆಸ್ಪ್ರತೆ, ಕೊಂಡ್ಳಳ್ಳಿ ಎಂ.ಆರ್.ಟಿ ಕಣ್ಣಿನಆಸ್ಪತ್ರೆ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಭಿರ ಹಾಗೂ ವೀಕಲಚೇತನರಿಗೆ ಉಚಿತ ವ್ಹೀಲ್‍ಚೇರ್ ವಿತರಣಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

           ರೆಡ್‍ಕ್ರಾಸ್‍ಸಂಸ್ಥೆ ಬಡವರಿಗಾಗಿ ಅತೀಕಡಿಮೆ ಬೆಲೆಯಲ್ಲಿ ಔಷಧಿಗಳು ದೊರೆಯುವಂತೆ ಜನೌಷಧಿಕೇಂದ್ರವನ್ನು ತೆರೆದಿದೆ, ಈ ಸಂಸ್ಥೆಯ ಸಾರ್ವಜನಿಕ ಸೇವಾ ಕಾರ್ಯಕ್ರಮಗಳ ಪಟ್ಟಿಗಳನ್ನು ನೋಡಿದಾಗ ನನಗೆ ಸಹಾಯಹಸ್ತ ನೀಡಬೇಕೆಂದು ಅನಿಸುತ್ತದೆ. ಎಂದರಲ್ಲದೆ ಪ್ರತಿಯೊಬ್ಬರೂ ತಮ್ಮ ಮರಣ ನಂತರದ ಎರಡು ಕಣ್ಣುಗಳನ್ನು ಇಬ್ಬರು ಅಂಧರ ಕಣ್ಣುಗಳಿಗೆ ನೀಡಿದರೆ ನೀವುಗಳು ಅತಿದಾನವಂತರಾಗುತ್ತೀರಿ ಎಂದು ತಿಳಿಸಿದರು.

         ರೋಟರಿ ಅಧ್ಯಕ್ಷ ಎಂ.ಎಸ್.ರಾಘವೇಂದ್ರ ಮಾತನಾಡಿ, ಬೆಂಗಳೂರು ಸದಾಶಿವ ನಗರದ ರೋಟರಿಯವರಿಂದ 13 ಜನ ವಿಕಲಚೇತನರಿಗೆ ಉಚಿತವಾಗಿ ವೀಲ್‍ಚೇರ್‍ಗಳನ್ನು ನೀಡಲಾಗಿದೆ. ಅಧ್ಯಕ್ಷರಾದ ಪ್ರೊ||ಹೆಚ್.ಇ.ಶಶಿಧರ್ ಕಾರ್ಯದರ್ಶಿ ಅಯ್ಯಪ್ಪ, ಭಗವಾನ್ ಮಹಾವೀರ್ ವಿಕಲಚೇತನ ಸಮಿತಿ, ಅಹಮದಾಬಾದ್‍ನ ರೋ||ಪರೇಕ್‍ರವರನ್ನು ತುಂಬುಹೃದಯದಿಂದ ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ ಎಂದರು.

          ವೇದಿಕೆಯಲ್ಲಿ ರೆಡ್‍ಕ್ರಾಸ್ ಉಪಾಧ್ಯಕ್ಷ ಹೆಚ್.ಎಸ್.ಸುಂದರ್‍ರಾಜ್, ಛೇರ್ಮನ್ ಬಿ.ಎಸ್.ನವಾಬ್‍ಸಾಬ್, ಪ್ರೋ.ಶಶಿಧರ್, ಅಯ್ಯಪ್ಪಸ್ವಾಮಿ, ಪರೇಖ್, ಎಂ.ಎನ್.ಸೌಭಾಗ್ಯವತೀದೇವರ್, ಹೆಚ್.ವೆಂಕಟೇಶ್, ಎಸ್.ಜೋಗಪ್ಪ, ಇನ್ಹರ್‍ವ್ಹೀಲ್ ಅಧ್ಯಕ್ಷೆ ಸ್ವಪ್ನಾಸತೀಶ್ ಉಪಸ್ಥಿತರಿದ್ದರು.

          ಕಾರ್ಯಕ್ರಮದಲ್ಲಿ ರೋಟೇರಿಯನ್‍ಗಳಾದ ಹೆಚ್.ಎಸ್.ಪ್ರಶಾಂತ್, ಹೆಚ್.ಪಿ.ರವೀಂದ್ರನಾಥ್, ಆರ್.ಜೋಗಾರಾಮ್, ವೈ.ಎಸ್.ಉಮಾಶಂಕರ್, ತ್ರಿಯಂಬಕೇಶ್ವರ್, ರೆಡ್‍ಕ್ರಾಸ್‍ನ ಮಹಾಬಲೇಶ್ವರಶೆಟ್ಟಿ, ಪಿ.ಆರ್.ಸತೀಶ್‍ಬಾಬು, ದೇವರಾಜ್‍ಮೂರ್ತಿ, ಬಸವರಾಜ್, ನೇತ್ರ ವೈದ್ಯ ಡಾ||ಕೆ.ನಾಗರಾಜ್, ಮತ್ತು ಸಿಬ್ಬಂದಿಗಳಾದ ಪಂಚಾಕ್ಷರಯ್ಯ, ಇದ್ದರು. ಈ ಶಿಬಿರದಲ್ಲಿ ಸುಮಾರು 75 ಜನರಿಗೆ ನೇತ್ರ ತಪಾಸಣೆ ನಡೆಸಿ ಅವಶ್ಯವಿದ್ದ 20 ಜನರಿಗೆ ಉಚಿತ ನೇತ್ರ ಚಿಕಿತ್ಸೆಗೆ ಕೊಂಡೊಯ್ದು ಮಸೂರಗಳನ್ನು ಅಳವಡಿಸಲಾಗುವುದು ಎಂದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link