ಕೂಳಗೇರಿ ಮಂಡಳಿಯ ಅಧಿಕಾರಿಗಳಿಂದ ಸ್ಥಳ ಪರಿಸಿಲನೆ

ಹರಿಹರ:

       ರಾಜ್ಯ ಕೂಳಗೇರಿ ನಿಗಮ ಮಂಡಳಿಯಿಂದ ಹರಿಹರ ಬೆಂಕಿನಗರ ಹಾಗೂ ಭೀಮ್‍ನಗರಗಳಲ್ಲಿ ನಿರ್ಮಾಣಗೋಳ್ಳುತ್ತಿರುವ ವಸತಿ ನಿವೇಶನಗಳ ಗುಣಮಟ್ಟ ಹಾಗೂ ನಿರ್ಮಾಣಕ್ಕೆ ಬಳಸುತ್ತಿರುವ ಸಾಮಗ್ರಿಗಳನ್ನು ರಾಜ್ಯ ಕೂಳಗೇರಿ ಮಂಡಳಿಯ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಸಿಲನೆ ನಡೆಸಿದರು.

        ವಸತಿ ನಿವೇಶನಗಳನ್ನು ನಿರ್ಮಿಸುತ್ತಿರುವ ಸ್ಥಳಕ್ಕೆ ಆಗಮಿಸಿದ್ದ ರಾಜ್ಯ ಕೂಳಗೇರಿ ಅಭಿವೃದ್ಧಿ ನಿಗಮದ ತಾಂತ್ರಿಕ ನಿರ್ದೇಶಕರಾದ (2) ಬಾಲರಾಜ ಎನ್.ಪಿ ರವರು ನಿರ್ಮಾಣಗೊಂಡಿರುವ ಮನೆಗಳ ಹಾಗೂ ನಿರ್ಮಾಣ ಹಂತದಲ್ಲಿರುವ ಪ್ರತಿಯೋಂದು ಮನೆಯ ಗುಣಮಟ್ಟ ಹಾಗೂ ಕಟ್ಟಡ ನಿರ್ಮಾನಕ್ಕಾಗಿ ಗುತ್ತಿಗೆಧಾರರು ಬಳಸುತ್ತಿರುವ ಪ್ರತಿಯೋಂದು ಸಾಮಗ್ರಿಗಳ ಗುಣಮಟ್ಟವನ್ನು ಪರಿಸಿಲಿಸಿದರು.

         ರಾಜ್ಯದ ಕೂಳಗೇರಿಯಲ್ಲಿ ವಾಸಿಸುವ ಬಡವರ, ಕೂಲಿಕಾರ್ಮಿಕರ, ನಿರ್ಗತಿಕರಿಗೆ ಉತ್ತಮ ಗುಣಮಟ್ಟದ ಸುಂದರ ಮನೆಗಳನ್ನು ನಿರ್ಮಿಸಿ ಅವರಿಗೆ ಹಸ್ತಾಂತಿಸಿಸುವುದರೊಂದಿಗೆ ಅವರು ನೆಮ್ಮದಿಯ ಜೀವನ ನಡೆಸಲು ಕರ್ತವ್ಯ ನಿರ್ವಹಿಸುವುದೆ ರಾಜ್ಯ ಕೂಳಚೆ ನಿರ್ಮೂಲನ ಮಂಡಳಿಯ ಮುಖ್ಯ ಕಾರ್ಯವಾಗಿದೆ. ಬಡವರ ಮನೆಗಳನ್ನು ನಿರ್ಮಿಸುವುದಕ್ಕಾಗಿ ಗುತ್ತಿಗೆಪಡೆದಿರುವ ಗುತ್ತಿಗೆಧಾರರು ಉತ್ತಮಗುಣಮಟ್ಟದ ಸಾಮಗ್ರಿಗಳನ್ನು ಬಳಸುವುದರೊಂದಿಗೆ ಯೋಜನೆಯಮೇಲೆ ಬೆಳಕುಚಲ್ಲುವ ಕೆಲಸ ಮಾಡಬೇಕೆಮದು ರಾಜ್ಯ ಕೂಳಗೇರಿ ಅಭಿವೃದ್ಧಿ ನಿಗಮದ ತಾಂತ್ರಿಕ ನಿರ್ದೇಶಕರಾದ (2) ಬಾಲರಾಜ ಎನ್.ಪಿ ರವರು ಕರೆನೀಡಿದರು.

           ಜಿಲ್ಲಾ ಕೂಳಗೇರಿ ಅಭಿವೃದ್ಧಿ ನಿಗಮದ ಕಾರ್ಯಪಾಲಕ ಅಭಿಯಂತರರಾದ ಎಸ್.ಎಲ್ ಆನಂದಪ್ಪ ಮಾತನಾಡಿ, ಹರಿಹರ ನಗರಸಭೆ ವ್ಯಾಪ್ತಿಯಲ್ಲಿ ಬರುವ ಬೆಂಕಿ ನಗರದಲ್ಲಿ ಹಾಗೂ ಬೀಮನಗರದಲ್ಲಿ ಒಟ್ಟು 811 ಮನೆಗಳನ್ನು ನಿರ್ಮಿಸಲು ನಿಗಮದಿಂದ ಅನುಮತಿ ಪಡೆಯಲಾಗಿದೆ.

          ಈಗಾಗಲೆ ಬೆಂಕಿನಗರದ 176 ಜನ, ಬೀಮಗರದ 112 ಜನ ಫಲಾನುಭವಿಗಳು ತಮ್ಮ ವಂತಿಕೆ ಹಣವನ್ನು ನಿಗಮಕ್ಕೆ ಭರಿಸಿದ್ದಾರೆ. ಬೆಂಕಿನಗರದಲ್ಲಿ 12, ಬೀಮನಗರದಲ್ಲಿ 40 ಮನೆಗಳು ನಿರ್ಮಾಣ ಮುಕ್ತಾಯ ಹಮತಕ್ಕೆ ತಲುಪಿವೆ. ಬೆಂಕಿ ನಗರದಲ್ಲಿ 70, ಬೀಮ ನಗರದಲ್ಲಿ 40 ಮನೆಗಳಿಗೆ ಆರ್‍ಸಿಸಿ ಮೇಲ್ಛಾವಣೆ ಹಾಕುವ ಹಂತಕ್ಕೆ ತಲುಪಿವೆ. ಉಳಿದಿರುವ ಎಲ್ಲಾ ಮನೆಗಳನ್ನು 2019ನೇ ಮಾರ್ಚ ಅಂತ್ಯದೊಳಗಾಗಿ ಮುಕ್ತಾಯಗೊಳಿಸಲು ರಾಜ್ಯ ಕೂಳಗೇರಿ ಅಭಿವೃದ್ಧಿ ನಿಗದ ಹಿರಿಯ ಅಧಿಕಾರಿಗಳು ನಿರ್ದೇಶನ ನೀಡಿದ್ದಾರೆಂದು ತಿಳಿಸಿದರು.

         ಮೈಕಾನ್ ಕಟ್ಟಡ ನಿರ್ಮಾಣ ನಿಯಮಿತದ ಮುಖ್ಯ ಕಾರ್ಯನಿರ್ವಣಾದಿಕಾರಿಗಳದ ರವಿಶಂಕರ.ಡಿ.ಎ. ಮಾತನಡಿ, ರಾಜ್ಯದ ಬಡವರು, ಕೂಲಿ ಕಾರ್ಮಿಕರು, ಹಾಗು ನಿರ್ಗತಿಕರೆಂದು ಗುರುತಿಸಿರುವ ಕೂಳಗೇರಿ ನಿವಾಸಿಗಳಿಗೆ ಉತ್ತಮ ಗುಣಮಟ್ಟದ ಮನೆಗಳನ್ನು ನಿರ್ಮಿಸುವುದಕ್ಕಾಗಿ ರಾಜ್ಯ ಕೂಳಗೆರಿ ಅಭಿವೃದ್ಧಿ ನಿಗಮದ ನಮಗೆ ನೀಡಿರುವ ಜವ್ಹಾಬ್ದಾರಿ ಕೆಲಸವನ್ನು ಉತ್ತಮವಾಗಿ ನಿರ್ಮಿಸಲು ನಾವು ಹಗಲಿರುಳೆನ್ನದೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೆವೆ. ಅದಕ್ಕೆ ಪ್ರತಿಯೋಬ್ಬ ಫಲನಾಭವಿಗಳು ಮತ್ತು ಸಾರ್ವಜನಿಕರು, ಚುನಾಯಿತ ಪ್ರತಿನಿಧಿಗಳು ಸಹಕರಿಸಬೇಕೆಂದು ಹೇಳಿದರು. ಕೂಳಗೇರಿ ಅಭಿವೃದ್ಧಿ ನಿಗಮದ ಕಾರ್ಯಪಾಲಕ ಅಭಿಯಂತರರಾದ ಮಂಡಿಗಿರಿ, ಎಸ್.ಡಿ ಪಾಟೀಲ, ಕಂದಾಯ ಅಧಿಕಾರಿಗಳಾದ ಎಫ್.ಮುನಿರಾಜು, ಪ್ರಕಾಶ, ಯೋಜನಾ ಪ್ರಗತಿ ನಿರಿಕ್ಷಕರಾದ ಮಾರುತಿರಾವ್ ಮೇಲ್ಮನೆ, ವ್ಹಿ.ಪ್ರಾಣೆಶ ಆಚಾರ್, ವ್ಯೆವಸ್ಥಾಪಕರಾದ ಹೆಚ್.ಎಂ ಗೋಕಲೆ, ಬೆಂಕಿ ನಗರದ ಮುಖಂಡರಾದ ಅಜ್ಜಗರಲಿ, ಆರ್ಪಿವುಲ್ಲಾ, ಮಂಜುನಾಥ ಪೂಜಾರ, ಜಡಿಯಪ್ಪ,

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link