ಹಿರಿಯೂರು :
ತಾಲ್ಲೂಕಿನ ಹುಲಿತೊಟ್ಟಿಲು ಗ್ರಾಮದಲ್ಲಿ, ಕಲಬೆರಕೆ ವಿಷಆಹಾರ ಸೇವನೆಯಿಂದ ಮೃತಪಟ್ಟ ಕೃಷಿಕ ಚಿತ್ತಯ್ಯನವರ ಕುಟುಂಬಕ್ಕೆ ಹಿರಿಯೂರು ತಹಶೀಲ್ದಾರ್ ಜೆ.ಸಿ.ವೆಂಕಟೇಶಯ್ಯ ಗ್ರಾಮದ ಅವರ ಮನೆಗೆ ಭೇಟಿನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹುಲಿತೊಟ್ಟಿಲು ಗ್ರಾಮದಲ್ಲಿ, ಮೊನ್ನೆ ಒಂದೇ ಮನೆಯಲ್ಲಿ ವಿಷಆಹಾರ ಸೇವಿಸಿ ನಾಲ್ವರು ಮೃತಪಟ್ಟಿದ್ದರು. ಚಿತ್ತಯ್ಯನ ಪತ್ನಿ ಶಾಂತಮ್ಮ ಮತ್ತು ಮಗ ಸದಾಶಿವ ಇವರಿಗೆ ತಾಲ್ಲೂಕು ಆಡಳಿತದ ವತಿಯಿಂದ ಮೃತಪಟ್ಟವರಿಗೆ ತಲಾ 5 ಸಾವಿರ ರೂಗಳ ಚೆಕ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರೇಡ್ 2 ತಹಶೀಲ್ದಾರ್ ಚಂದ್ರಕುಮಾರ್, ಉಪತಹಶೀಲ್ದಾರ್ ಮಂಜಪ್ಪ, ಸತೀಶ್ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
