ಸಮುದಾಯ ಭವನದ ಶಂಕುಸ್ಥಾಪನೆ ಕಾರ್ಯಕ್ರಮ

ತುರುವೇಕೆರೆ :

         ಇಸ್ರೋದ ಬಾಹ್ಯಾಕಾಶ ಉಪಗ್ರಹ ಯಂತ್ರದ ಬಿಡಿಭಾಗಗಳ ತಯಾರಿಕಾ ಘಟಕವು ತುಮಕೂರಿನಲ್ಲಿ ಶೀಘ್ರದಲ್ಲೇ ಪ್ರಾರಂಭವಾಗಲಿದ್ದು ಇದರಿಂದ ಇಡೀ ಜಗತ್ತೇ ಜಿಲ್ಲೆಯತ್ತ ನೋಡುವಂತಾಗುವುದು ಎಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ಹೇಳಿದರು.

         ತಾಲ್ಲೂಕಿನ ಕೊಳಾಲ ಗ್ರಾಮದಲ್ಲಿ ಕೊಳಾಲ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ, ಶುದ್ದ ಕುಡಿಯುವ ನೀರಿನ ಘಟಕದ ಉದ್ಘಾಟನೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಮುದಾಯ ಭವನದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

         ಜಪಾನ್ ಸೇರಿದಂತೆ ವಿದೇಶಗಳ ಅನೇಕ ಕಂಪನಿಗಳು ಜಿಲ್ಲೆಗೆ ಆಗಮಿಸುತ್ತಿದ್ದು ಇದರಿಂದ ಈ ಭಾಗದ ನಿರುದ್ಯೋಗಿ ಯುವಕರಿಗೆ ಉದ್ಯೋಗವಕಾಶಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿಗಲಿವೆ. ರಸ್ತೆಗಳು ತಾಲ್ಲೂಕಿನ ಅಭಿವೃದ್ಧಿಯ ಸಂಕೇತ. ನನ್ನ ಕ್ಷೇತ್ರದಲ್ಲಿ 4000 ಕೋಟಿ ರಸ್ತೆ ಅಭಿವೃದ್ಧಿಗೆ ಖರ್ಚಾಗುತ್ತಿದೆ. 2700 ಕೋಟಿ ದ್ವಿಪಥ ರಸ್ತೆಗೆ ಕಾಮಗಾರಿಗಳು ಈಗಾಗಲೇ ಜಿಲ್ಲೆಯಲ್ಲಿ ನಡೆಯುತ್ತಿವೆÉ. ಹಾಗೆಯೆ 206 ಮತ್ತು 150ಎ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಗಳೆಂದು ಘೋಷಿಸಬೇಕೆಂದು ಕೇಂದ್ರಕ್ಕೆ ಈಗಾಗಲೇ ಮನವಿ ಮಾಡಲಾಗಿದೆ. ಅಂತರ್ಜಲ ಕುಸಿಯುತ್ತಿರುವುದರಿಂದ ತೆಂಗಿನ ಇಳುವರಿ ಮತ್ತು ಬೆಲೆ ಕುಸಿಯುತ್ತಿರುವುದು ರೈತರು ಆತಂಕಪಡುವಂತಾಗಿದೆ ಎಂದರು.

          ಶಾಸಕ ಮಸಾಲಾಜಯರಾಮ್ ಮಾತನಾಡಿ, ಸಿ.ಎಸ್.ಪುರ ಹಾಗು ಮಾಯಸಂದ್ರ ಹೋಬಳಿಯ ಕೆರೆಗಳಿಗೆ ನಾಲಾ ನೀರು ತುಂಬಿಸಬೇಕೆಂಬ ಸಂಕಲ್ಪ ಇನ್ನೂ ಕೈಗೂಡಿಲ್ಲ. ಕೇಂದ್ರದ ಅನುದಾನ ಹೆಚ್ಚಿಗೆ ಬಂದಲ್ಲಿ ಕ್ಷೇತ್ರದ ರಸ್ತೆಗಳ ಅಭಿವೃದ್ಧಿ ಶೇ65ರಷ್ಟು ಆಗಲಿದೆ. ತಾಲ್ಲೂಕಿನಲ್ಲಿ 16 ಶಿಥಲೀಕರಣ ಹಾಲಿನ ಘಟಕಗಳನ್ನು ತೆರೆದಿರುವುದರಿಂದ ಗ್ರಾಮೀಣ ಪ್ರದೇಶದ ರೈತರು ಬದುಕು ಹಸನಾಗಲಿದೆ ಎಂದರು.

              ತುಮುಲ್ ಜಿಲ್ಲಾಧ್ಯಕ್ಷ ಸಿ.ವಿ.ಮಹಲಿಂಗಯ್ಯ ಮಾತನಾಡಿ, ತುರುವೇಕೆರೆ ಡೈರಿಯಿಂದ 70ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು ಇದಕ್ಕೆ ಆರೂವರೆ ಕೋಟಿ ಹಣ ಹಾಲು ಉತ್ಪಾದಕರಿಗೆ ಹಣ ಸಂದಾಯವಾಗುತ್ತಿದೆ. ಜಿಲ್ಲಾ ತುಮುಲ್‍ನಲ್ಲಿ 1000 ಕೋಟಿಗೂ ಅಧಿಕ ವಹಿವಾಟು ನಡೆಯುತ್ತಿದೆ, ಜಿಲ್ಲೆಯ ಡೈರಿಗಳ ಮೂಲಭೂತ ಸೌಕರ್ಯಗಳ ಬಗ್ಗೆ ಹೆಚ್ಚಿನ ಗಮನ ನೀಡಲಾಗುವುದು. ಜೊತೆಗೆ ಈಗಿನ ಹಾಲಿನ ದರದ ಪರಿಷ್ಕರಣೆಗೆ ಮುಂದಿನ ದಿನಗಳಲ್ಲಿ ಸದಸ್ಯರೊಂದಿಗೆ ಚರ್ಚಿಸಲಾಗುವುದು ಎಂದರು.

              ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ್ ಮಾತನಾಡಿ, ಎಲ್ಲಾ ಮುಖಂಡರೂ ಪಕ್ಷಭೇಧ ಮರೆತು ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸಬೇಕು. ಜನರ ಸಮಸ್ಯೆಗಳು ಬಂದಾಗ ಪಕ್ಷಾತೀತವಾಗಿ ಜನಪ್ರತಿನಿಧಿಗಳು ಕೆಲಸಮಾಡಿದಾಗ ಮಾತ್ರ ಯಾವುದೇ ಕ್ಷೇತ್ರ ತಂತಾನೇ ಏಳಿಗೆ ಹೊಂದುತ್ತದೆ ಎಂದರು.

             ಇದಕ್ಕೂ ಮುನ್ನಾ ಗ್ರಾಮದ ಶುದ್ದ ಕುಡಿಯುವ ನೀರಿನ ಘಟಕ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಮುದಾಯ ಭವನದ ಶಂಕುಸ್ಥಾಪನೆ ಮತ್ತು ನೂತನ ಕೊಳಾಲ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟದ ಉಧ್ಘಾಟನೆಯು ವಿವಿದ ಗಣ್ಯರಿಂದ ನೆರವೇರಿತು.

            ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಕೆಂಪಮ್ಮ, ಡಿಸಿಸಿ ಜಿಲ್ಲಾ ನಿರ್ದೇಶಕ ಬಿಎಸ್.ದೇವರಾಜು, ಬಿಬಿಎಂಪಿ ಮಾಜಿ ಕೌನ್ಸಿಲರ್ ಕೃಷ್ಣಮೂರ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎನ್.ಆರ್.ಜಯರಾಮ್, ಮುಖಂಡರಾದ ಕೊಂಡಜ್ಜಿವಿಶ್ವನಾಥ್, ಬುಗಡನಹಳ್ಳಿಕೃಷ್ಣಮೂರ್ತಿ, ಎಪಿಎಂಸಿ ಮಾಜಿ ನಿರ್ದೇಶಕ ಕೊಳಾ¯ನಾಗರಾಜ್, ಗ್ರಾ.ಪಂ.ಸದಸ್ಯ ರಘು, ಡೈರಿ ಅಧ್ಯಕ್ಷ ಶಂಕರಲಿಂಗೇಗೌಡ, ಕಾರ್ಯದರ್ಶಿ ರಮೇಶ್, ಧ.ಗ್ರಾ.ಯೋ. ಯೋಜನಾಧಿಕಾರಿ ಧರ್ಣಪ್ಪ ಮೂಲ್ಯ, ಪ್ರಸನ್ನಕುಮಾರ್, ದಾನಿಗೌಡ, ಮಂಜುನಾಥ್, ಚಂದ್ರಣ್ಣ, ಬೋಜಣ್ಣ, ಕಿರಣ್ ಕುಮಾರ್, ದಿವಾಕರ್ ಸೇರಿದಂತೆ ಗ್ರಾಮಸ್ಥರು ಇದ್ದರು. ನಾಗರಾಜು ಸ್ವಾಗತಿಸಿ, ವೆಂಕಟರಾಮು ನಿರೂಪಿಸಿ, ರಘು ವಂದಿಸಿದರು,

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap