ರೈತ ದಿನಾಚರಣೆ

ಹಾನಗಲ್ಲ :

          ರೈತರು ಕೃಷಿಗೆ ರಸಾಯನಿಕ ಬಳಸುವ ಬದಲು ಸಾವಯವ ಕೃಷಿಯತ್ತ ಹೆಚ್ಚಿನ ಗಮನ ಹರಿಸಿದಾಗ ಪಲವತ್ತಾದ ಇಳುವರಿ ಜೊತೆಗೆ ಮಣ್ಣಿನ ಖನಿಜಾಂಶವನ್ನು ಉಳಿಸಲು ಸಾದ್ಯ ಎಂದು ಹನುಮನಮಟ್ಟಿ ಕೃಷಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಎ.ಎಸ್ ನೂರ್ ನವಾಜ್ ತಿಳಿಸಿದರು.

          ರವಿವಾರ ಪಟ್ಟಣದ ಕೃಷಿ ಇಲಾಖೆ ವತಿಂದ ಏರ್ಪಡಿಸಿದ್ದ ರೈತ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಹವಾಮಾನ ವೈಪರಿತ್ಯ ಹಾಗೂ ಮಳೆಯ ಅಭಾವದ ಕಾರಣ ಮಣ್ಣಿನ ಫಲವತ್ತೆ, ಮಣ್ಣಿನಲ್ಲಿರುವ ಜೀವಕಾಂಶಗಳು ಹಾಳಾಗುತ್ತಿದೆ ಅದನ್ನು ಉಳಿಸಿಕೊಂಡು ಹೋಗಲು ರೈತರು ಪ್ರಜ್ಞಾವಂತರಾಗಬೇಕು. ಆಗಾಗ ಮಣ್ಣಿನ ಸಂರಕ್ಷಣೆಯ ಜೊತೆಗೆ ಜೇನು ಸಾಕಣಿಕೆ, ದ್ವಿದಳ ಧಾನ್ಯ, ಅಣಬೆ, ಕೋಕ್ ಜೊತೆಗೆ ಸಾವಯವ ಕೃಷಿ ಮಾಡುವುದರಿಂದ ಸಮಗ್ರ ಕೃಷಿಯನ್ನು ಪದ್ದತಿಯನ್ನು ಅಳವಡಿಸಿಕೊಂಡು ಹೋಗಬೇಕಾಗಿದೆ.

          ಹೆಚ್ಚನ ಮಹಿತಿಗಾಗಿ ಸಮಿಪದ ಕೃಷಿ ಇಲಾಖೆ ಹಾಗೂ ಕೃಷಿ ತಜ್ಞರನ್ನು ಬೇಟಿ ಮಾಡಿ ಮಾಹಿತಿ ತೆಗೆದುಕೊಳ್ಳುವ ಅವಶ್ಯಕತೆಯಿದೆ.

        ಹಸೀರು ಸೇನೆ ತಾಲೂಕ ರೈತ ಸಂಘದ ಅಧ್ಯಕ್ಷ ಮರಿಗೌಡ ಪಾಟೀಲ ಮತನಾಡಿ, ರೈತರಿಗೆ ಸಿಗಬೇಕಾದ ಯೋಜನೆಯ ಸೌಲಬ್ಯಗಳನ್ನು ಒದಗಿಸಲು ಸರಕಾರದ ಮಟ್ಟದಲ್ಲಿ ಅಧಿಕಾರಿಗಳು ಗಮನಕ್ಕೆ ತರಬೇಕು. ಅಲ್ಲದೆ ರೈತ ದಿನಾಚರಣೆ ಬರಿ ನಾಲ್ಕು ಗೋಡೆಗಳ ಮದ್ಯಯಾಗದೆ, ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರು ರೈತರು ತಮ್ಮ ಗ್ರಾಮಗಳಲ್ಲಿ ದಿನಾಚರಣೆಯನ್ನು ಮಾಡುವಂತಾಗಬೇಕು . ಸಾವಯವ ಕೃಷಿಯ ಬಗ್ಗೆ ರೈತರಿಗೆ ಅಧಿಕಾರಿಗಳು ಕೃಷಿಗೆ ಪೂರಕವಾದ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಎಂದರು.

          ರೈತ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಅಡಿವೇಪ್ಪಾ ಆಲದಕಟ್ಟಿ ಮಾತನಾಡಿ, ಸರಕಾರದ ಸವಲತ್ತು ಹಾಗೂ ಮಾಹಿತಿಗಳನ್ನು ತೆಗೆದುಕೊಳ್ಳಬೇಕಾದರೆ ರೈತ ಸಂಘಟನೆಯಿಂದ ಮಾತ್ರ ಸಾದ್ಯ. ರೈತರ ಒಗ್ಗಟ್ಟಿನಲ್ಲಿ ಎಲ್ಲ ರೀತಿಯ ಪ್ರಯೋಜನೆಗಳನ್ನು ಪಡೆಯಬಹುದಾಗಿದೆ. ಆದ್ದರಿಂದ ರೈತರಾದವರು ಹೆಚ್ಚು ಹೆಚ್ಚು ಸಂಗಟಿತರಾಗಬೇಕಿದೆ ಎಂದರು.

           ಕಾರ್ಯಕ್ರಮದ ಕೃಷಿಕ ಸಮಾಜದ ಅದ್ಯಕ್ಷ ಬಸವರಾಜ ಎಲಿ, ಅಧ್ಯಕ್ಷತೆಯ ವಹಿಸಿದ್ದರು, ಅತಿಥಿಗಳಾಗಿ ಮಲ್ಲೇಶಪ್ಪ ಪರಪ್ಪನವರ, ಭಾರತೀಯ ಕೃಷಿ ಕಾರ್ಮಿಕರ ಸಂಸ್ಥಾಪಕ ಎಮ್.ಎಸ್.ಪಾಟೀಲ, ಮಹಲಿಂಗಪ್ಪ ಬಿದಮಳ್ಳಿ, ಅಬ್ದುಲ್‍ಖಾಧರ್ ಮುಲ್ಲಾ, ಮಲ್ಲನಗೌಡ ಪಾಟೀಲ, ರಾಜು ದಾನಪ್ಪನವರ ಕೃಷಿ ಅಧಿಕಾರಿ ಸಂಗಮೇಶ ಹಕ್ಕಲಪ್ಪನವರ, ಬಸವರಾಜ ಮಣಕೂರ, ಮುಂತಾದವರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link