ಮರಳು ಮಾಫಿಯಾದ ಕೊಲೆಗಡುಕರಿಗೆ ಶೀಘ್ರ ಶಿಕ್ಷೆಯಾಗಲಿ

ಮಧುಗಿರಿ

          ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಚೀಕಲಪರ್ವಿ ವೃತ್ತದ ಗ್ರಾಮಲೆಕ್ಕಿಗ ಸಾಹೇಬ ಪಾಟೀಲ ಕರ್ತವ್ಯ ನಿರತರಾಗಿದ್ದಾಗ ಅಕ್ರಮ ಮರಳು ಸಾಗಾಣಿಕೆದಾರರು ಅಧಿಕಾರಿಯ ಮೇಲೆ ಲಾರಿ ಹರಿಸಿ ಹತ್ಯೆ ಮಾಡಿರುವುದನ್ನು ಖಂಡಿಸಿ ತಾಲ್ಲೂಕಿನ ಕಂದಾಯ ಇಲಾಖೆಯ ನೌಕರರು ಮೌನ ಪ್ರತಿಭಟನೆಯ ಮೂಲಕ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಉಪವಿಭಾಗಾಧಿಕಾರಿ ಕಚೇರಿಯ ಗ್ರೇಡ್ 2 ತಹಸೀಲ್ದಾರ್ ಸುರೇಶ್‍ರವರಿಗೆ ಮನವಿ ಪತ್ರ ಸಲ್ಲಿಸಿದರು.

             ಕಸಬ ಆರ್ ಐ ಜಯರಾಮಯ್ಯ ಮಾತನಾಡಿ, ರಾಜ್ಯದಲ್ಲಿ ಅಕ್ರಮ ಮರಳು ದಂಧೆಕೋರರು ಇದೇ ಮಾದರಿಯಲ್ಲಿ ಹಲವು ಪ್ರಕರಣಗಳಲ್ಲಿ ಕಂದಾಯ ನೌಕರರ ವಿರುದ್ಧ ದೌರ್ಜನ್ಯವನ್ನು ಎಸಗಿರುತ್ತಾರೆ. ಇಂತಹ ಕೃತ್ಯಗಳಿಂದ ನೌಕರರು ನಿರ್ಭೀತಿಯಿಂದ ಕೆಲಸವನ್ನು ನಿರ್ವಹಿಸಲು ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯನ್ನು ಮಾತ್ರ ಮರಳು ಮಾಫಿಯಾ ತಡೆಗೆ ನಿಯೋಜಿಸದೆ ಇತರ ಇಲಾಖೆಯವರನ್ನೂ ನಮ್ಮೊಂದಿಗೆ ಅಕ್ರಮ ತಡೆಗೆ ನಿಯೋಜಿಸಬೇಕು. ಆದರೆ ನಮ್ಮ ಮೇಲಧಿಕಾರಿಗಳು ನಮ್ಮನ್ನು ನಿಯೋಜಿಸಿ ಅವರು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಸರಕಾರವು ಪ್ರಕರಣವನ್ನು ಸಿಓಡಿಗೆ ವಹಿಸಬೇಕು ಎಂದು ಆರೋಪಿಗಳ ವಿರುದ್ದ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲು ಆಗ್ರಹಿಸಿದರು.

           ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಎನ್.ಮಹಾಲಿಂಗೇಶ್, ಕಂದಾಯ ಅಧಿಕಾರಿಗಳಾದ ಶ್ರೀನಿವಾಸ್, ಜಯರಾಮಯ್ಯ, ಸತ್ಯನಾರಾಯಣ, ಗ್ರಾಮಲೆಕ್ಕಿಗರಾದ ನಾಗಭೂಷಣ್, ಮಹೇಶ್, ನಾರಾಯಣಪ್ಪ, ರಾಜೇಶ್, ನಟರಾಜು, ನವೀನ್, ಸತೀಶ್ ನಾಯ್ಕ, ರೇಖಾ, ಮಂಜುಳ, ಸಿದ್ದರಾಜು, ನಂದೀಶ್, ಸಾದಿಕ್, ಶ್ರೀನಿವಾಸ್ ಮತ್ತಿತರರು ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap