ಹರಪನಹಳ್ಳಿ
ಬಂಜಾರಾ ಸಮಾಜದ ಮಹಿಳೆ ಜತೆ ಅಸಭ್ಯವಾಗಿ ವರ್ತಿಸಿದ ಬ್ಯಾಡಗಿ ಸಿಪಿಐ ಚಿದಾಣಮದರನ್ನು ಸೇವೆ ವಜಾಗೊಳಿಸಬೇಕು ಎಂದು ಆಗ್ರಹಿಸಿ ತಾಲ್ಲೂಕು ಸೇವಾಲಾಲ್ ಬಣಜಾರ್ (ಲಂಬಾಣಿ) ವಿಕಾಸ ಸಂಘದ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿ ತಹಶೀಲ್ದಾರಗೆ ಮನವಿ ಸಲ್ಲಿಸಿದರು.
ನ್ಯಾಯ ಕೇಳಲು ಹೋದ ಸಮಾಜದ ಮಹಿಳೆ ಜತೆ ಸಿಪಿಐ ಚಿದಾನಂದ ಅವರು ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಅಲ್ಲದೇ ವಿಷಯ ಹೊರಗೆ ತಿಳಿಸಿದರೆ ಕೊಲೆ ಮಾಡುವುದಾಗಿಯೂ ಬೆದರಿಸಿದ್ದಾರೆ. ಇವರ ವಿರುದ್ಧ ಹಾವೇರಿ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಆರೋಪಿಸಿದರು.
ಮಹಿಳೆಯ ಪರ ನ್ಯಾಯ ಕೇಳಲು ಹೋದ 8 ಜನರ ಮೇಲೆಯೇ ದೂರು ದಾಖಲಿಸಿದ್ದಾರೆ. 15 ಜನ ಅನುಮಾನಿತರು ಎಂದು ಗುರುತಿಸಿದ್ದಾರೆ. ಅಧಿಕಾರ ದುರುಪಯೋಗಪಡಿಸಿಕೊಂಡು ಸುಳ್ಳು ಕೇಸು ದಾಖಲಿಸಿರುವ ಹಾಗೂ ಮಹಿಳೆಯ ಮೇಲೆ ಲೈಂಗಿಕ ಕಿರುಕುಳ ನೀಡಿರುವ ಸಿಪಿಐ ಅವರು ಸೇವೆಯಿಂದ ಶಾಶ್ವತ ವಜಾ ಮಾಡಬೇಕು. ಜನರ ಮೇಲೆ ಹಾಕಿರುವ ಕೇಸು ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಮಂಜ್ಯಾನಾಯ್ಕ, ಸಂಘದ ಅಧ್ಯಕ್ಷ ಎಸ್.ಜಯಾನಾಯ್ಕ, ಲಿಂಬ್ಯಾನಾಯ್ಕ, ಬಾನ್ಯಾನಾಯ್ಕ, ಕೊಟ್ರೇಶನಾಯ್ಕ, ಗೋಪಿನಾಯ್ಕ, ಚನ್ನನಾಯ್ಕ, ಸೌಭಾಗ್ಯನಾಯ್ಕ, ಕುಮಾರನಾಯ್ಕ ಇವರೂ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
