ದೊಡ್ಡಬಳ್ಳಾಪುರ :
ಮಹಿಷಾಸುರ ಮರ್ಧಿನಿ ಪೌರಾಣಿಕ ನಾಟಕದಲ್ಲಿ ಚಾಮುಂಡಿಯ ಪಾತ್ರದಲ್ಲಿ ನಟಿಸಿದ ಉಮಾಶ್ರೀ ತಮ್ಮ ರೌದ್ರನಟನೆಯಿಂದ ಪೇಕ್ಷಕರ ಮನಸೂರೆಗೊಳ್ಳುವಂತೆ ಮಾಡಿದ್ದಾರೆ.
ಚಿತ್ರದುರ್ಗ ಮೂಲದ ಕುಮಾರಸ್ವಾಮಿ ಮಾಲೀಕತ್ವದ ಕುಮಾರೇಶ್ವರ ನಾಟಕ ಕಂಪನಿ ದೊಡ್ಡಬಳ್ಳಾಪುರ ನಗರದ ಕೋರ್ಟ್ ಬಳಿ ಟೆಂಟ್ ಹಾಕಿ ನಾಟಕ ಪ್ರದರ್ಶನ ನಡೆಸುತ್ತಿದೆ. ಮೂರು ತಿಂಗಳಿಂದ ಪ್ರತಿದಿನ ಎರಡು ಪ್ರದರ್ಶನ ನಡೆಯುತ್ತಿದೆ. ಅದರೆ ನಾಟಕ ನೋಡಲು ಜನ ಮಾತ್ರ ಬರಲಿಲ್ಲ. ಪ್ರತಿ ಪ್ರದರ್ಶನದಲ್ಲಿ ಬೆರಳೆಣಿಕೆಯ ಜನ ಮಾತ್ರ ನಾಟಕ ನೋಡಲು ಬರುತ್ತಿದ್ರು.
ಪ್ರತಿ ಪ್ರದರ್ಶನಕ್ಕೆ 10 ಸಾವಿರ ಹಣ ಖರ್ಚಾಗುತ್ತಿತ್ತು. ಅದರೆ ಪ್ರತಿ ಪ್ರದರ್ಶನದಲ್ಲಿ 2 ಸಾವಿರ ಹಣ ಮಾತ್ರ ಕಲೆಕ್ಷನ್ ಆಗುತ್ತಿತ್ತು. ಇದರಿಂದ 4 ಲಕ್ಷ ಹಣ ನಷ್ಟ ಉಂಟಾಗಿತ್ತು. ಕಲಾವಿದರಿಗೆ ಸಂಬಳ ನೀಡಲು ಹಣವಿಲ್ಲ, ಮತ್ತೊಂದೆಡೆ ಬೇರೆ ಊರಿಗೆ ನಾಟಕ ಸಾಮಗ್ರಿ ಸಾಗಿಸಲು ಸಹ ಹಣವಿರಲಿಲ್ಲ. ಆಗ ನಾಟಕ ಕಂಪನಿ ನೆರವಿಗೆ ಬಂದವರು ನಟಿ ಉಮಾಶ್ರೀ.
ಒಮ್ಮೆ ಸಚಿರಾಗಿದ್ದವರು ಜೊತೆಗೆ ಕನ್ನಡ ಚಿತ್ರರಂಗದ ಖ್ಯಾತ ಪೋಷಕ ನಟಿ. ಇದ್ಯಾವುದನ್ನು ಲೆಕ್ಕಿಸದ ಉಮಾಶ್ರೀಯವರು ಪೌರಾಣಿಕ ನಾಟಕದಲ್ಲಿ ಅಭಿನಯಿಸುವ ಇಂಗಿತ ವ್ಯಕ್ತಪಡಿಸಿದರು. ತಮ್ಮ ಕಲಾ ಸೇವೆಯ ಮೂಲಕವೇ ನಾಟಕ ಕಂಪೆನಿಯ ನೆರವಿಗೆ ಬಂದರು.
ಕುಮಾರಸ್ವಾಮಿಯವರ ಕಷ್ಟವನ್ನು ನೋಡಿ ಮಹಿಷಾಸುರ ಮರ್ಧಿನಿ ನಾಟಕದಲ್ಲಿ ಚಾಮುಂಡಿ ಪಾತ್ರದಲ್ಲಿ ನಟಿಸುವುದಾಗಿ ಹೇಳಿದರು. ಇನ್ನು ಉಮಾಶ್ರೀ ಚಾಮುಂಡಿ ಪಾತ್ರದಲ್ಲಿ ಅಭಿನಯಿಸುತ್ತಿರುವ ವಿಷಯ ಕೇಳಿ ನಾಟಕ ಪ್ರದರ್ಶನಕ್ಕೆ ಜನಸಾಗರವೇ ಹರಿದು ಬಂದಿತ್ತು. ಉಮಾಶ್ರೀಯವರ ನಟನೆಯಿಂದ ನಾಟಕ ಕಂಪನಿಯ ಕಲೆಕ್ಷನ್ ಕೂಡ ಹೆಚ್ಚಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ