ಕುಣಿಗಲ್
ಮೂಡಲ್ ಕುಣಿಗಲ್ ಕೆರೆಯ ಏರಿಯ ಮೇಲಿರುವ ಶ್ರೀ ಸತ್ಯಗಣಪತಿಯನ್ನು ಪ್ರತಿಷ್ಠಾಪಿಸಿ 25 ವರ್ಷಗಳು ಆದ ಪ್ರಯುಕ್ತ ಸನ್ನಿಧಿಯಲ್ಲಿ ಶ್ರೀ ಗೌರಿ ಪೂರ್ಣಕುಂಭ ಸಂಕಷ್ಠಹರಣ ಪೂಜಾ ಮಹೋತ್ಸವವನ್ನು ಆಚರಿಸಿದ್ದು, ಸಹಸ್ರಾರು ಮಹಿಳೆಯರು ಪಾಲ್ಗೊಳ್ಳುವ ಮೂಲಕ ವಿಜೃಂಭಣೆಯಿಂದ ನಡೆಯಿತು.
ಶ್ರೀ ಸತ್ಯಗಣಪತಿಸ್ವಾಮಿಗೆ ಹೋಮ, ಹವನ ಮಹಾಅಭಿಷೇಕ ಹಾಗೂ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು. ಆಗಮಿಕರಾದ ನಾಗರಾಜಶರ್ಮ ಎಲ್ಲ ಪೂಜಾ ಕಾರ್ಯಗಳನ್ನ ಯಶಸ್ವಿಯಾಗಿ ನಡೆಸಿಕೊಟ್ಟರು. ಅರ್ಚಕರಾದ ಮಹೇಶ್ ಪೂಜಾಕಾರ್ಯ ನೆರವೇರಿಸಿದರು. ಕೋಟೆ ವೆಂಕಟೇಶ್ ಈ ಕಾರ್ಯಕ್ರಮದ ಸಂಪೂರ್ಣ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದರು. ಇದೇ ಸಂದರ್ಭದಲ್ಲಿ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಹಾಗೂ ಪ್ರಸಾದ ವಿತರಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ