ಬೆಂಗಳೂರು:
ಹೊಸ ವರ್ಷ ಆಗಮನಕ್ಕೆ ಇನ್ನೇನು ನಾಲ್ಕು ದಿನಗಳು ಬಾಕಿ ಇದೆ. ಜನವರಿ 1 ರಂದು ಮಧ್ಯರಾತ್ರಿ 1.30ರವರೆಗೆ ನಮ್ಮ ಮೆಟ್ರೋ ಸಂಚರಿಸಲಿದೆ ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ.
ಒಂದೊಮ್ಮೆ ಮೆಟ್ರೋ ಸ್ಮಾರ್ಟ್ ಕಾರ್ಡ್ ಹೊಂದಿರದಿದ್ದರೆ 50 ರೂ ನೀಡಿ ಟಿಕೆಟ್ ಖರೀದಿಸಬೇಕಾಗುತ್ತದೆ. ರಾತ್ರಿ 11 ಗಂಟೆಯ ಬಳಿಕ ಮೆಟ್ರೋದಲ್ಲಿ ಸಂಚಾರ ಮಾಡಿದರೆ ಟೋಕನ್ ನೀಡಲಾಗುವುದಿಲ್ಲ ಎಂದ ನಿಗಮ ಸ್ಪಷ್ಟಪಡಿಸಿದೆ.
ಡಿಸೆಂಬರ್ 30ರೊಳಗೆ ಟ್ರಿನಿಟಿ ವೃತ್ತ ಮೆಟ್ರೋ ನಿಲ್ದಾಣದ ದುರಸ್ತಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಡಿಸೆಂಬರ್ 31ರಿಂದ ಎಂದಿನಂತೆ ಮೆಟ್ರೋ ಸಂಚರಿಸಲಿದೆ ಎಂದು ಮೆಟ್ರೋ ನಿಗಮ ತಿಳಿಸಿದೆ. ಡಿಸೆಂಬರ್ 28-30ರ ವರೆಗೆ ಎಂಜಿ ರಸ್ತೆಯಿಂದ ಇಂದಿರಾನಗರದವರೆಗೆ ಮೆಟ್ರೋ ಸಂಚಾರ ಸ್ಥಗಿತಗೊಳ್ಳಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ